ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ 03 ಕೋಟಿ
ರೂ. ವೆಚ್ಚದಲ್ಲಿ ದಾವಣಗೆರೆಯಲ್ಲಿ ನಿರ್ಮಿಸಲಾಗಿರುವ ಗಾಂಧಿ ಭವನದ
ಉದ್ಘಾಟನೆ ಸೆ. 02 ರಂದು ಮಧ್ಯಾಹ್ನ 3 ಗಂಟೆಗೆ ನೆರವೇರಲಿದ್ದು,
ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ
ಬೊಮ್ಮಾಯಿ, ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.
ಬಸವರಾಜ ಸೇರಿದಂತೆ ಗಣ್ಯಾತಿಗಣ್ಯರು ಕಾರ್ಯಕ್ರಮದಲ್ಲಿ
ಭಾಗವಹಿಸಲಿದ್ದಾರೆ.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿನಲ್ಲಿ ಹಾಗೂ
ಗಾಂಧೀಜಿ ಅವರ ಜೀವನಾದರ್ಶಗಳು, ಮೌಲ್ಯಗಳನ್ನು ಇಂದಿನ
ಯುವ ಪೀಳಿಗೆಗೆ ಪ್ರಚುರ ಪಡಿಸುವ ನಿಟ್ಟಿನಲ್ಲಿ ದಾವಣಗೆರೆ
ನಗರದಲ್ಲಿ ಸುಮಾರು 01 ಎಕರೆ ಪ್ರದೇಶದಲ್ಲಿ ನೂತನವಾಗಿ
ಗಾಂಧಿ ಭವನ ನಿರ್ಮಿಸಲಾಗಿದ್ದು, ನಿರ್ಮಿತಿ ಕೇಂದ್ರ ಆಕರ್ಷಕವಾಗಿ
ಗಾಂಧಿ ಭವನ ನಿರ್ಮಾಣ ಮಾಡಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ
ಬೊಮ್ಮಾಯಿ ಅವರು ಉದ್ಘಾಟನೆ ನೆರವೇರಿಸಲಿದ್ದು, ರಾಜ್ಯ ಗೃಹ ಸಚಿವ
ಅರಗ ಜ್ಞಾನೇಂದ್ರ, ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ
ಬಿ.ಎ. ಬಸವರಾಜ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ
ಮುರುಗೇಶ್ ನಿರಾಣಿಯವರ ಘನ ಉಪಸ್ಥಿತಿಯಲ್ಲಿ ಜರುಗುವ ಈ
ಸಮಾರಂಭದಲ್ಲಿ ಸಂಸದ ಡಾ. ಜಿ.ಎಂ. ಸಿದ್ದೇಶ್ವರ್ ಅವರು ಗೌರವ
ಉಪಸ್ಥಿತಿ ಇರುವರು. ದಾವಣಗೆರೆ ಉತ್ತರ ಕ್ಷೇತ್ರ ಶಾಸಕ ಎಸ್.ಎ.
ರವೀಂದ್ರನಾಥ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ
ಶಾಸಕರುಗಳಾದ ಕೆ. ಮಾಡಾಳ್ ವಿರೂಪಾಕ್ಷಪ್ಪ, ಎಸ್.ವಿ.
ರಾಮಚಂದ್ರ, ಪ್ರೊ. ಎನ್. ಲಿಂಗಣ್ಣ, ಡಾ. ಶಾಮನೂರು
ಶಿವಶಂಕರಪ್ಪ, ಎಂ.ಪಿ. ರೇಣುಕಾಚಾರ್ಯ, ಎಂ. ರಾಮಪ್ಪ, ವಿಧಾನ ಪರಿಷತ್
ಸದಸ್ಯರುಗಳಾದ ಜಿ. ರಘು ಆಚಾರ್, ಲಹರ್ ಸಿಂಗ್ ಸಿರೋಯ,
ಪ್ರಸನ್ನಕುಮಾರ್, ಮೋಹನ್ಕುಮಾರ್ ಕೊಂಡಜ್ಜಿ, ರವಿಕುಮಾರ್,
ಕೆ.ಪಿ. ನಂಜುಂಡಿ, ಡಾ. ತೇಜಸ್ವಿನಿಗೌಡ, ಎಸ್.ಎಲ್. ಭೋಜೇಗೌಡ,
ಆಯನೂರು ಮಂಜುನಾಥ್, ಡಾ.ವೈ.ಎ. ನಾರಾಯಣಸ್ವಾಮಿ, ಚಿದಾನಂದ
ಗೌಡ, ಆರ್. ಶಂಕರ್, ಮಹಾನಗರಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್,
ಧೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಮುಖ್ಯಮಂತ್ರಿಗಳ
ಪ್ರಧಾನ ಕಾರ್ಯದರ್ಶಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ
ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿರುವ ಎನ್. ಮಂಜುನಾಥ್ ಪ್ರಸಾದ್,
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ. ಪಿ.ಎಸ್.
ಹರ್ಷ ಮುಂತಾದ ಗಣ್ಯರು, ಹಿರಿಯ ಅಧಿಕಾರಿಗಳು ಭಾಗವಹಿಸುವರು
ಎಂದು ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಿ. ಅಶೋಕ್
ಕುಮಾರ್ ತಿಳಿಸಿದ್ದಾರೆ.