ಹೌದು ಅದು ಯಾವ ಊರು ಎಂಬುದು ಎಲ್ಲಾರಿಗೂ ಆಶ್ವರ್ಯ. ಚಳ್ಳಕೆರೆ ತಾಲೂಕು ಮೊಳಕಾಲ್ಮುರು ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಿಕ್ಕ ಉಳ್ಳಾರ್ತಿ (ಬಂಗೇರಹಟ್ಟಿ) ಜನರು ಸ್ವಾತಂತ್ರ್ಯ ಬಂದಾಗಿನಿಂದ ಬಸ್ ಸೌಲಭ್ಯ ಕಂಡಿರಲಿಲ್ಲ.ಆದರೆ ಸಚಿವ ಶ್ರೀರಾಮುಲು ಅವರು ಇದನ್ನು ಗಮನಿಸಿದ್ದರು. ಮತ್ತು ಅಲ್ಲಿನ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮತ್ತು ಬೆಳವಣಿಗೆಗೆ ಸಹ ಇದು ತೊಡಕಾಗಿತ್ತು. ಸಾಕಷ್ಟು ಮಕ್ಕಳು ನಡೆದುಕೊಂಡು ಹೋಗಲು ಆಗದೆ ಶಾಲಾ ಕಾಲೇಜುಗಳನ್ನು ಕೈಬಿಟ್ಟ ಸಾಕಷ್ಟು ನಿದರ್ಶನಗಳಿದ್ದವು. ಇಂತಹ ಸಂದರ್ಭದಲ್ಲಿ ಸಚಿವ ಶ್ರೀರಾಮುಲು ಎಲ್ಲಾವನ್ನು ದೃಷ್ಟಿಯಲ್ಲಿಟ್ಟುಕೊಂಡ ಚಿಕ್ಕ ಉಳ್ಳಾರ್ತಿ ಗ್ರಾಮಕ್ಕೆ ಇಂದು ಮಕ್ಕಳ ಮೂಲಕ ಹೊಸ ಬಸ್ ಮಾರ್ಗದ ಸೌಲಭ್ಯಕ್ಕೆ ಚಾಲನೆ ಕೊಡಿಸಿದ್ದಾರೆ.
ಸಚಿವರ ಅಪ್ತ ಸಹಾಯಕ ಪಾಪೇಶ್ ನಾಯಕ ಮಾತನಾಡಿ ಅನೇಕ ಜನರು ಉದ್ಯೋಗಕ್ಕೆ ಮತ್ತು ಶಾಲಾ ಕಾಲೇಜುಗಳಿಗೆ ತೆರಳಲು ಸಾಕಷ್ಟು ಕಷ್ಟ ಆಗುತ್ತಿತ್ತು. ಇದನ್ನು ಗಮನಿಸಿ ಸಚಿವರು ಬಸ್ ಸೌಲಭ್ಯ ಕಲ್ಪಿಸದ್ದಾರೆ. ಅವರ ಆಶಯದಂತೆ ಇಂದು ಬಸ್ ಗೆ ಮಕ್ಕಳ ಕೈಯಲ್ಲಿ ಚಾಲನೆ ಕೊಡಿಸಿದ್ದೇವೆ. ಎಲ್ಲಾರೂ ಸಹ ಬಸ್ ಸದುಪಯೋಗ ಪಡಿಸಿಕೊಳ್ಳಬೇಕು ಎಂಬುದು ಸಚಿವ ಆಸೆಯಾಗಿದೆ ಎಂದರು. ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಬೋರಮ್ಮ, ಬಿಜೆಪಿ ಮುಖಂಡರಾದ ಜಯಪಾಲಯ್ಯ, ರಾಮರೆಡ್ಡಿ, ಚನಗನಲ್ಲಿ ಮಲ್ಲೇಶ್, ಚಿತ್ತಯ್ಯ ದಡ್ಡಿ ಬೋರಯ್ಯ, ಸಣ್ಣ ತಿಪ್ಪಯ್ಯ್, ಜಯಣ್ಣ ಮತ್ತು ಗ್ರಾಮದ ಮುಖಂಡರು ಮತ್ತು ಮಕ್ಕಳು ,ಯುವಕರು ಭಾಗವಹಿಸಿದ್ದರು.