ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಸೆ. 02
ರಂದು ದಾವಣಗೆರೆ ಜಿಲ್ಲೆ ಪ್ರವಾಸ ಹಮ್ಮಿಕೊಂಡಿದ್ದಾರೆ.
ಮುಖ್ಯಮಂತ್ರಿಗಳು ಅಂದು ಮಧ್ಯಾಹ್ನ 1-30 ಗಂಟೆಗೆ
ಹುಬ್ಬಳ್ಳಿಯಿಂದ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರೊಂದಿಗೆ
ಬಿಎಸ್ಎಫ್ ಹೆಲಿಕಾಪ್ಟರ್ ಮೂಲಕ ಹೊರಟು, ಮಧ್ಯಾಹ್ನ 2-15 ಗಂಟೆಗೆ
ದಾವಣಗೆರೆಯ ಜಿಎಂಐಟಿ ಹೆಲಿಪ್ಯಾಡ್ಗೆ ಆಗಮಿಸುವರು.
ಬಳಿಕ ಜಿಎಂಐಟಿ ಅತಿಥಿ ಗೃಹಕ್ಕೆ ತೆರಳುವರು. ಮಧಾಹ್ನ 3.20
ಗಂಟೆಗೆ ಕೇಂದ್ರ ಗೃಹ ಸಚಿವರೊಂದಿಗೆ ಗಾಂಧಿ ಭವನಕ್ಕೆ
ಆಗಮಿಸಿ, ಗಾಂಧಿ ಭವನದ ಉದ್ಘಾಟನೆ ನೆರವೇರಿಸುವರು. ಮಧ್ಯಾಹ್ನ
3.40 ಕ್ಕೆ ಹೊರಟು, ಹರಿಹರ ತಾಲ್ಲೂಕು ಕೊಂಡಜ್ಜಿಗೆ ಆಗಮಿಸಿ, ಇಲ್ಲಿನ
ಕೊಂಡಜ್ಜಿ ಬಸಪ್ಪ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಮರ್ಪಿಸುವರು.
ಸಂಜೆ 4 ಗಂಟೆಗೆ ಕೊಂಡಜ್ಜಿಯಲ್ಲಿ ನಿರ್ಮಿಸಲಾಗಿರುವ ಪೊಲೀಸ್ ಪಬ್ಲಿಕ್
ಸ್ಕೂಲ್ನ ಉದ್ಘಾಟನೆ ನೆರವೇರಿಸುವರು. ಸಂಜೆ 4.30 ಗಂಟೆಗೆ
ದಾವಣಗೆರೆಯ ಜಿ.ಎಂ.ಐಟಿ ಗೆ ಆಗಮಿಸಿ, ಇಲ್ಲಿನ ಕೇಂದ್ರ ಗ್ರಂಥಾಲಯದ
ಉದ್ಘಾಟನೆ ನೆರವೇರಿಸುವರು. ಸಂಜೆ 5-05 ಗಂಟೆಗೆ ಜಿಎಂಐಟಿ ಹೆಲಿಪ್ಯಾಡ್
ನಿಂದ ಕೇಂದ್ರ ಗೃಹ ಸಚಿವರೊಂದಿಗೆ ಬಿಎಸ್ಎಫ್ ಹೆಲಿಕಾಪ್ಟರ್ ಮೂಲಕ
ಹುಬ್ಬಳ್ಳಿಗೆ ತೆರಳುವರು ಎಂದು ಮುಖ್ಯಮಂತ್ರಿಯವರ ವಿಶೇಷ
ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.