ಎಲ್.ಪಿ.ಜಿ ದರವನ್ನು ಹದಿನೈದು ದಿನಗಳ ಅಂತರದಲ್ಲಿ 50 ರೂ ಏರಿಕೆ ಮಾಡುವುದರ ಮೂಲಕ ಪ್ರತಿ ಸಿಲಿಂಡರ್ 950 ರೂ ದರವನ್ನು ದೇಶದ ಜನಸಾಮಾನ್ಯರು ನೀಡಿ ಪಡೆಯಬೇಕಾದ ದುಸ್ಥಿತಿ ಒದಗಿ ಬಂದಿದೆ,
ಕೇಂದ್ರ ಸರಕಾರದ ಜನವಿರೋಧಿ ನೀತಿ ನರೇಂದ್ರ ಮೋದಿಯ ದುರಾಡಳಿತದಲ್ಲಿ ಅಚ್ಚೇ ದಿನ್ ಹೆಸರಿನಲ್ಲಿ ಜನರನ್ನು ವಂಚಿಸಿದ ಏಕೈಕ ಪ್ರಧಾನಿ ಎಂದರೆ ಅದು ನರೇಂದ್ರಮೋದಿ ಎಂಬುದು ಈಗ ಬಯಲಾಗಿದೆ,
ಮೋದಿಯಂಥ ಒಬ್ಬ ಸುಳ್ಳುಗಾರ ನಿಂದ ಇಡೀ ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ ಆರ್ಥಿಕತೆಯನ್ನು ಸರಿದಾರಿಗೆ ತರಲು ವಿಫಲವಾಗಿರುವ ಕೇಂದ್ರ ಸರ್ಕಾರ ಜನರ ಜೀವನವನ್ನೇ ಹಾಳು ಮಾಡುತ್ತಿದೆ ಪ್ರತಿನಿತ್ಯ ಡೀಸೆಲ್ ಪೆಟ್ರೋಲ್ ಎಲ್ ಪಿಜಿ ಅಗತ್ಯ ವಸ್ತುಗಳು ಹಾಗೂ ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ದೇಶದ ಜನ ನಿತ್ಯ ಹೈರಾಣರಾಗಿದ್ದಾರೆ,
ಇದನ್ನ ಕಂಡರು ಕಾಣದಂಗೆ ನರೇಂದ್ರ ಮೋದಿಯ ಆಡಳಿತ ದೇಶದಲ್ಲಿ ಸಾಗುತ್ತಿದೆ ಇಂತಹ ದುರಾಡಳಿತ ದೇಶದ ಜನರಿಗೆ ಕೊನೆಗಾಣಬೇಕಾದರೆ ನರೇಂದ್ರ ಮೋದಿ ಕೂಡಲೇ ರಾಜಿನಾಮೆ ಕೊಟ್ಟು ತೊಲಗಬೇಕು,
ಪ್ರತಿ ಬಾರಿ ಮನ್ ಕೀ ಬಾತ್ ಹಾಗೂ ತಮ್ಮ ಭಾಷಣದಲ್ಲಿ ಅಚ್ಛೇ ದಿನವನ್ನು ಪ್ರಸ್ತಾಪಿಸಿ ಜನರಿಗೆ ನಂಬಿಸಿ ಜನರನ್ನು ಇಂದು ನಡುರಸ್ತೆಯಲ್ಲಿ ತಂದು ನಿಲ್ಲಿಸಿರುವ ಅತ್ಯಂತ ಕಠೋರವಾದ ಸರ್ವಾಧಿಕಾರಿ ಆಡಳಿತವನ್ನು ನಾವು ಇಂದು ಕಣ್ಣಾರೆ ಕಾಣುತ್ತಿದ್ದೇವೆ ಇದಕ್ಕೆ ಬಿಜೆಪಿ ಕೇಂದ್ರ ಸರ್ಕಾರದ ದುರಾಡಳಿತವೇ ಸಾಕ್ಷಿಯಾಗಿದೆ,
ಸರ್ಕಾರಿ ಸಂಸ್ಥೆಗಳನ್ನ ಮಾರಾಟ ಮಾಡಿ ಜನರ ತೆರಿಗೆಯನ್ನು ಹೆಚ್ಚಿಸುತ್ತಲೇ (23ಲಕ್ಷ ಕೋಟಿ ಹಣ) ಸಂಗ್ರಹಿ ಬಡವರ ಜೀವನವನ್ನು ಹಾಳುಮಾಡಿ ಹೋಗುತ್ತಿರುವ ನರೇಂದ್ರ ಮೋದಿ ಯಾವ ಪುರುಷಾರ್ಥಕ್ಕಾಗಿ ಅಧಿಕಾರದಲ್ಲಿ ಮುಂದುವರಿಯುತ್ತಿದ್ದಾರೆ ಎಂಬುದನ್ನು ಜನತೆಗೆ ತಿಳಿಸಬೇಕು, ಬಡ ಜನರ ಹಣದಲ್ಲಿ ಸೋಕಿ ಮಾಡುತ್ತಿರುವ ಮೋದಿ ತೊಲಗಬೇಕು,
ನರೇಂದ್ರ ಮೋದಿಯ ಶೋಕಿಲಾಲ್ ಆಡಳಿತವನ್ನು ಖಂಡಿಸಿ ಸುಳ್ಳಿನ ಅಚ್ಚೇದಿನ್ ತೊಲಗಲಿ ಎಂದು ಆಗ್ರಹಿಸಿ ಮೋದಿಯ ಶೋಕಿಗೆ ಜನರಿಂದ ಹಣ ಸಂಗ್ರಹಿಸಿ ಮೋದಿಗೆ ರವಾನಿಸುವ ವಿನೂತನ ಪ್ರತಿಭಟನೆಯನ್ನು ನಡೆಸಲಾಯಿತು. ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಎಸ್.ಮನೋಹರ್,
ಜಿ.ಜನಾರ್ಧನ್, ಎಂ.ಎ.ಸಲೀಮ್, ಎ.ಆನಂದ, ಎಲ್.ಜಯಸಿಂಹ, ಪುಟ್ಟರಾಜು,ಮಹೇಶ್, ನವೀನ್, ಪಿ.ಸಂದೀಪ್, ಪಕ್ಷದ ಮುಖಂಡರು ಭಾಗವಹಿಸಿದ್ದರು