ಕರ್ನಾಟಕ ರಾಜ್ಯ ಸಾರಿಗೆ ನಿಗಮದ ವತಿಯಿಂದ ದಾವಣಗೆರೆ ವಿಭಾಗ
ಹರಿಹರ ಘಟಕ ವ್ಯಾಪ್ತಿಯ ಹರಿಹರ ಬಸ್ ನಿಲ್ದಾಣದಿಂದ ಹರಿಹರ ತಾಲ್ಲೂಕಿನ
ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಸೇವಾ ಸಿಂಧು ಪೋರ್ಟಲ್‍ನಲ್ಲಿ ವಿದ್ಯಾರ್ಥಿ
ಉಚಿತ ಅಥವಾ ರಿಯಾಯಿತಿ ಬಸ್‍ಪಾಸ್ ವಿತರಿಸಲಾಗುವುದು ಎಂದು ಕೆಎಸ್‍ಆರ್‍ಟಿಸಿ
ಹರಿಹರ ಘಟಕದ ವ್ಯವಸ್ಥಾಪಕರು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಸಕ್ತ ಸಾಲಿನಲ್ಲಿ ಸೇವಾಸಿಂಧು
ತಂತ್ರಾಶವನ್ನು ಮತ್ತಷ್ಟು ಸರಳಿಕರಿಸಿ ಇಡಿಎಸ್ ಇಲಾಖೆಯು
(ವಿದ್ಯುನ್ಮಾನ ನಾಗರೀಕ ಸೇವಾ ವಿತರಣಾ ನಿರ್ದೇಶನಾಲಯ)
ವಿದ್ಯಾರ್ಥಿಗಳಿಗೆ ಉಚಿತ ಅಥವಾ ರಿಯಾಯಿತಿ ಬಸ್ ಪಾಸ್‍ಗಳನ್ನು ಸೇವಾಸಿಂಧು
ಪೋರ್ಟಲ್‍ನಲ್ಲಿ ವಿತರಿಸಲು ತಂತ್ರಾಶವನ್ನು ಪುನರ್‍ಅಭಿವೃದ್ಧಿ ಪಡಿಸಿದೆ.
ವಿದ್ಯಾರ್ಥಿಗಳು ಆನ್‍ಲೈನ್ ಅಲ್ಲಿ ಅರ್ಜಿ ಸಲ್ಲಿಸುವಾಗ ಸಂಬಂಧಪಟ್ಟ
ದಾಖಲೆಗಳನ್ನು ಅಪ್‍ಲೋಡ್ ಮಾಡುವುದು
ಕಡ್ಡಾಯವಾಗಿರುತ್ತದೆ. ಫಲಾನುಭವಿಗಳು ಆನ್‍ಲೈನ್
ಮುಖಾಂತರ ದಾಖಲಾತಿಗಳನ್ನು ಅಪ್‍ಲೋಡ್ ಮಾಡಬೇಕು ಹಾಗೂ
ಭೌತಿಕವಾಗಿ ಬಸ್‍ಪಾಸ್‍ಗಳನ್ನು ಪಡೆಯಲು ಬಂದಾಗ ಅಗತ್ಯ
ದಾಖಲಾತಿಗಳು ಮತ್ತು ಮೂಲ ದಾಖಲೆಗಳು, ಅದರ ಜೆರಾಕ್ಸ್
ಪ್ರತಿಯನ್ನು ಹಾಜರುಪಡಿಸಿ ಪಾಸ್‍ಗಳನ್ನು ಪಡೆಯಬೇಕು.
ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕ ಬಸ್‍ಪಾಸ್ ಗೆ ಅರ್ಜಿ ಸಲ್ಲಿಸಲು
ಈಗಾಗಲೆ ಅವಕಾಶ ಕಲ್ಪಿಸಲಾಗಿದ್ದು, ವಿದ್ಯಾರ್ಥಿಗಳು ಇದರ
ಸದುಪಯೋಗ ಪಡೆದುಕೊಳ್ಳಬೇಕು ಎಂದು ಹರಿಹರ ಘಟಕದ
ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.