ದಾವಣಗೆರೆಯ ವಿನೋಬಾ ನಗರದಲ್ಲಿ ಸೋಮವಾರದಂದು ಆಯೋಜಿಸಿದ್ದ ಲಸಿಕಾ ಶಿಬಿರಕ್ಕೆ ಮಾಜಿ ಸಚಿವರು, ಶಾಸಕರೂ ಆದ ಡಾ.ಶಾಮನೂರು ಶಿವಶಂಕರಪ್ಪನವರು ಭೇಟಿ ನೀಡಿದ್ದರು.

ಈ ವೇಳೆ ಆ ಭಾಗದ ಮಹಾನಗರ ಪಾಲಿಕೆಯ ಸದಸ್ಯರು ಆಗಿರುವ ವಿಪಕ್ಷ ನಾಯಕರಾದ ಎ.ನಾಗರಾಜ್ ಅವರು ವಾರ್ಡ್ ಪರವಾಗಿ ಶಾಮನೂರು ಶಿವಶಂಕರಪ್ಪ ಅವರನ್ನು ಗೌರವಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿಯವರು, ವಿನೋಬಾ ನಗರದ ಮುಖಂಡರುಗಳಾದ ಸುರೇಶ್, ರಮೇಶ್, ಯೊಗೇಶ್, ವಿರೇಶ್ ಸ್ವಾಮಿ, ಎಸ್.ರವಿ, ಹಾಲೇಶ್, ರುದ್ರೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *