ಹೊನ್ನಾಳಿ :ಸೆ 6 ಹೊನ್ನಾಳಿ ಚನ್ನಪ್ಪ ಸ್ವಾಮಿ ಹಿರೇಕಲ್ಮಠದಲ್ಲಿ ಶ್ರಾವಣಮಾಸದ ಕಾರ್ಯಕ್ರಮದಲ್ಲಿ ಚೊಚ್ಚಲ ನುಡಿ ಕವನ ಸಂಕಲನ ಪುಸ್ತಕ ಬಿಡುಗಡೆ ಮಾಡಿದ ಶ್ರೀ ಡಾಕ್ಟರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಯುವ ಕವಯತ್ರಿ ಸ್ಫೂರ್ತಿ ಅಯಾಚಿತ ಜಿ ಇವಳ ಬಾಲ್ಯದ ಜೀವನದಿಂದಲೂ ಸಾಹಿತ್ಯ ಒಲವಿದ್ದು ಕಾರಣ ಕವನ ಬರೆಯುವುದು ಹವ್ಯಾಸವಾಗಿ ಮೊದಲುಗೊಂಡು ಈಗ ದಿನಚರಿಯಲ್ಲಿ ಸೇರಿದೆ ಪ್ರಸ್ತುತ ಚೊಚ್ಚಲ ದುಡಿ ಕವನ ಸಂಕಲನವು ಮನುಷ್ಯ ಜೀವನದಲ್ಲಿ ಅನುಭವಿಸುವ ಭಾವನೆಗಳನ್ನ ಪದಗಳ ರೂಪದಲ್ಲಿ ಪೋಣಿಸಿ ಹೆಣೆದ ಕವನ ಸಂಕಲನವಾಗಿದೆ ಎಂದು ನುಡಿದರು .ಈ ಸಂದರ್ಭದಲ್ಲಿ ಸ್ಫೂರ್ತಿ ಜಿ ಮಾತನಾಡಿ ನನ್ನ ಬಾಲ್ಯದ ಜೀವನದಲ್ಲಿ ಪ್ರೋತ್ಸಾಹಿಸಿದ ನನ್ನ ತಂದೆ ಮತ್ತು ತಾಯಿ ತುಂಬ ಸಹಕಾರ ನೀಡಿದ್ದಾರೆ ಹಾಗೂ ನನ್ನ ಗುರುಗಳಾದ ಅಭಿನೇತ್ರಿ ನಾಟ್ಯಮಂದಿರದ ಪ್ರತಿಮಾ ಹಾಗೂ ನಾನು ಕಲಿತಂಥ ಚನ್ನಪ್ಪಸ್ವಾಮಿ ವಿದ್ಯಾಪೀಠದ ಅಕ್ಕಮಹಾದೇವಿ ಶಾಲೆಯ ಎಲ್ಲಾ ಶಿಕ್ಷಕ ವೃಂದ ಸಹಕರಿಸಿದ್ದರಿಂದ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ ಈ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಮೊದಲ ಹೆಜ್ಜೆ ಇಟ್ಟಿದ್ದೇನೆ ಈ ನನ್ನ ಸಂಕಲನಕ್ಕೆ ನಿಮ್ಮೆಲ್ಲರ ಆಶೀರ್ವಾದ ಸದಾಕಾಲ ಇರಲಿ ಎಂದು ಕೇಳಿಕೊಂಡ ಯುವಕವಯಿತ್ರಿ ಸ್ಫೂರ್ತಿ ಅಯಾಚಿತ ಜಿ ಈ ಸಂದರ್ಭದಲ್ಲಿ ಕುಟುಂಬ ವರ್ಗ ಹಾಗೂ ಪ್ರತಿಮಾ ನಿಜಗುಣ ಶಿವಯೋಗಿ.ಮಠದ ಸದ್ಭಕ್ತರು ಭಾಗವಹಿಸಿದ್ದರು.