ಬಳ್ಳಾರಿ: ಸಿದ್ದರಾಮಯ್ಯ ಜಾತ್ಯಾತೀತ ನಾಯಕನಲ್ಲ. ಅವಬ್ಬ ಜಾತಿ ರಾಜಕಾರಣಿ ಎಂದು ಸಾರಿಗೆ ಸಚಿವ ಶ್ರೀರಾಮುಲು ಕಿಡಿಕಾರಿದ್ದಾರೆ.
ಬಳ್ಳಾರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯ ಹ್ಯಾಟ್ರಿಕ್ ಗೆಲುವು ಕಾರ್ಯಕರ್ತರಿಗೆ ಸಲ್ಲಬೇಕು. ಬೆಳಗಾವಿಯಲ್ಲಿ ರಾಜಕೀಯ ಷಡ್ಯಂತ್ರ ನಡೆದರು ಸಹ ಅಭಿವೃದ್ಧಿ ಹಿನ್ನೆಲೆಯಲ್ಲಿ ಮತದಾರರು ಬಿಜೆಪಿಯ ಕೈ ಹಿಡಿದಿದ್ದಾರೆ. 25 ವರ್ಷಗಳ ಬಳಿಕ ಬೆಳಗಾವಿ ಪಾಲಿಕೆಯಲ್ಲಿ ಅಧಿಕಾರ ಸಿಕ್ಕಿದೆ ಎಂದಿದ್ದಾರೆ.
ಇದೇ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯ ಜಾತ್ಯಾತೀತ ನಾಯಕನಲ್ಲ, ಅವನೊಬ್ಬ ಜಾತಿ ನಾಯಕನಾಗಿದ್ದಾನೆ. ಚುನಾವಣೆ ಬಂದಾಗ ಮಾತ್ರ ಸಿದ್ದರಾಮಯ್ಯರಿಗೆ ಜಾತಿ ನೆನಪಾಗುತ್ತದೆ. ಆದರೆ ಬಿಜೆಪಿ ಜಾತಿ ಹಿಡಿದು ರಾಜಕೀಯ ಮಾಡಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜಾತಿ ಸಮೀಕ್ಷೆ ಕೊಟ್ಟಿಲ್ಲ. ಸಿದ್ದರಾಮಯ್ಯರಿಗೆ ಚುನಾವಣೆ ಬಂದರೆ ಜಾತಿ ಸಮೀಕ್ಷೆ, ಅಹಿಂದ ಕುರಿತು ನೆನಪಾಗುತ್ತದೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಾಲಿಕೆ ಚುನಾವಣೆ- ಒಂದೇ ಕುಟುಂಬದ ಮೂವರ ಗೆಲುವು
2023ರ ಸಾರ್ವತ್ರಿಕ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್ ಹಗಲುಗನಸು ಕಾಣುತ್ತಿದೆ. ಅವರ ಎಲ್ಲರ ಕನಸು ಕನಸಾಗಿಯೇ ಉಳಿಯಲಿದೆ. ಮುಂದಿನ ಭಾರಿಯೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.