ದಿನಾಂಕ : 07-09-2021 ರಂದು ವಿಶ್ವವಿದ್ಯಾಲಯದ ನಗರ ಕಚೇರಿ
ಕಟ್ಟಡದಲ್ಲಿ ವಿಶ್ವವಿದ್ಯಾಲಯದ ಚಿಕ್ಕಮಗಳೂರು ಮತ್ತು
ಶಿವಮೊಗ್ಗ ಜಿಲ್ಲೆಯ ವಿಶ್ವವಿದ್ಯಾಲಯದ ವಿವಿಧ ಕಾಲೇಜುಗಳಿಂದ
ಭಾಗವಹಿಸಿದ ಸುಮಾರು 100 ಜನ ಎನ್.ಎಸ್.ಎಸ್. ಸ್ವಯಂ ಸೇವಕರಿಗೆ
“ಬರವಣಿಗೆಯ ಕೌಶಲಗಳು” ಕುರಿತ ಒಂದು ದಿನದ
ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಾಗಾರದ
ಆಯೋಜಕರಾಗಿ ಡಾ. ನಾಗರಾಜ ಪರಿಸರ, ಕಾರ್ಯಕ್ರಮ
ಸಂಯೋಜನಾಧಿಕಾರಿ, ಎನ್.ಎಸ್.ಎಸ್. ಕುವೆಂಪು ವಿ.ವಿ. ಇವರು ಮತ್ತು
ಕಾರ್ಯಕ್ರಮದ ಸಂಚಾಲಕರಾಗಿ ಡಾ. ಪ್ರಕಾಶ್ ಮರ್ಗನಳ್ಳಿ,
ಕಾರ್ಯಕ್ರಮಾಧಿಕಾರಿಗಳು, ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ
ಇವರು ಭಾಗವಹಿಸಿದ್ದರು. ಕು|| ಗಗನಾ, ಎಸ್.ಆರ್.ಎನ್.ಎಂ. ಕಾಲೇಜು,
ಶಿವಮೊಗ್ಗ ಇವರು ಪ್ರಾರ್ಥಿಸಿದರು. ಕಾರ್ಯಾಗಾರವನ್ನು
ಸಾಂಕೇತಿಕವಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು,
ಸಂಪನ್ಮೂಲವ್ಯಕ್ತಿಗಳು ಗಿಡಕ್ಕೆ ನೀರೆರೆಯುವ ಮೂಲಕ
ಉದ್ಘಾಟಿಸಿದರು. ಉದ್ಘಾಟಕರ ಪರವಾಗಿ ಶ್ರೀ ಎನ್. ರವಿಕುಮಾರ್ ಟೆಲೆಕ್ಸ್,
ಕವಿಗಳು ಮತ್ತು ಪತ್ರಕರ್ತರು ಮಾತನಾಡಿ ಬರವಣಿಗೆಯ
ಕೌಶಲ ಈಗಿನ ಕಾಲಮಾನಕ್ಕೆ ಅತ್ಯಂತ ಸೂಕ್ತವಾದ ಸಾಧನವಾಗಿದೆ.
ಅದನ್ನು ಜೀವನದಲ್ಲಿ ರೂಡಿಸಿಕೊಂಡಲ್ಲಿ ತಾವೆಲ್ಲರೂ ಅತ್ಯಂತ
ಉತ್ತಮ ಬರಹಗಾರಗಾಗಿ ರೂಪುಗೊಳ್ಳಬಹುದು ಎಂದು
ತಿಳಿಸಿದರು. ಡಾ. ಪ್ರಕಾಶ್ ಮರ್ಗನಳ್ಳಿ, ಸಂಚಾಲಕರು ಇವರು
ಸರ್ವರನ್ನೂ ಸ್ವಾಗತಿಸಿ ಕಾರ್ಯಾಗಾರ ಕುರಿತು ಪ್ರಾಸ್ತಾವಿಕ
ನುಡಿಗಳನ್ನಾಡಿದರು. ಈ ಕಾರ್ಯಕ್ರಮದಲ್ಲಿ ಶ್ರೀ ನವೀನ್,
ಶಿವಮೊಗ್ಗ ಇವರನ್ನು ಕರೋನಾ ವಾರಿಯರ್ಸ್ ಪರವಾಗಿ
ಸನ್ಮಾನಿಸಲಾಯಿತು. ಸಾಂಕೇತಿಕ ಉದ್ಘಾಟನಾ ಕಾರ್ಯಕ್ರಮ
ಮುಗಿದನಂತರ ಶ್ರೀ ಶಶಿ ಸಂಪಳ್ಳಿ, ಬರಹಗಾರರು ಮತ್ತು
ಪತ್ರಕರ್ತರು ಇವರು ಮೊದಲ ಗೋಷ್ಠಿ ಪ್ರಾರಂಭಿಸಿದರು,
ನಂತರ ಶ್ರೀ ಎನ್. ರವಿಕುಮಾರ್ ಟೆಲೆಕ್ಸ್, ಕವಿಗಳು ಮತ್ತು
ಪತ್ರಕರ್ತರು ಇವರು ಎರಡನೇ ಗೋಷ್ಠಿ ನಡೆಸಿಕೊಟ್ಟರು.
ಮಧ್ಯಾಹ್ನದ ಊಟದ ನಂತರದ ಗೋಷ್ಠಿಗಳನ್ನು ಶ್ರೀ
ನಾಗಾರಾಜ ಕೊವೆ, ಹವ್ಯಾಸಿ ಬರಹಗಾರರು ಮತ್ತು ಉಪನ್ಯಾಸಕರು
ಮತ್ತು ಡಾ ಶುಭಾ ಮರವಂತೆ, ಕವಯಿತ್ರಿ ಮತ್ತು
ಪ್ರಾಧ್ಯಾಪಕರು, ಶಿವಮೊಗ್ಗ ಇವರು ನಡೆಸಿಕೊಟ್ಟರು. ಈ ಎಲ್ಲಾ
ಹೆಸರಾಂತ ಸಂಪನ್ಮೂಲ ವ್ಯಕ್ತಿಗಳ ಗೋಷ್ಠಿಗಳನ್ನು ಅತ್ಯಂತ
ಉತ್ಸುಕರಾಗಿ ಆಲಿಸಿದ ಎನ್.ಎಸ್.ಎಸ್. ಸ್ವಯಂ ಸೇವಕರು
ಕಾರ್ಯಕ್ರಮದ ಕೊನೆಯಲ್ಲಿ ಅದ್ಭುತವಾಗಿ ತಮ್ಮ ಅನುಸಿಕೆ-
ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. 98 ಜನ ಎನ್.ಎಸ್.ಎಸ್.
ಸ್ವಯಂ ಸೇವಕ/ಸೇವಕಿಯರು ಈ ಕಾರ್ಯಾಗಾರದ
ಸದುಪಯೋಗ ಪಡೆದುಕೊಂಡರು. ಶ್ರೀಮತಿ ಮಾಲಾ ಕೆ.
ಹೆಚ್. ಕಾರ್ಯಕ್ರಮವನ್ನು ನಿರೂಪಿಸಿದರೆ, ಶ್ರೀ ರಾಚಪ್ಪ ವಿ. ಕೆ.
ವಂದನಾರ್ಪಣೆ ಸಲ್ಲಿಸಿದರು.