ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ ರವರು ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಕುರಿತು ಮಾತನಾಡಿದರು

ನಾವಿಂದು ಬೆಲೆ ಏರಿಕೆ ಹಾಗೂ ದೇಶದ ಆರೂವರೆ ಲಕ್ಷ ಕೋಟಿ ಮೌಲ್ಯದ ಆಸ್ತಿ ಮಾರಾಟ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ.
ಬಿಜೆಪಿ ಅಧಿಕಾರಕ್ಕೆ ಬರಲು ಸುಳ್ಳಿನ ಸುರಿಮಳೆಯನ್ನು ಸುರಿಸಿತ್ತು ಸ್ವಿಸ್ ಬ್ಯಾಂಕಿಂದ ಕಪ್ಪು ಹಣ ತಂದು ಜನರ ಖಾತೆಗೆ ತಲಾ 15 ಲಕ್ಷ ಹಾಕುವುದಾಗಿ ಭರವಸೆ ನೀಡಿದ್ದರು ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು
7 ವರ್ಷದಲ್ಲಿ 14 ಕೋಟಿ ಉದ್ಯೋಗ ನೀಡಬೇಕಿತ್ತು ಆದರೆ ಈ ಸರ್ಕಾರ ಉದ್ಯೋಗ ನೀಡುವ ಬದಲು 14 ಕೋಟಿ ಜನರನ್ನು ನಿರುದ್ಯೋಗಿಗಳನ್ನಾಗಿ ಮಾಡಿದ್ದಾರೆ. ವಿದ್ಯಾವಂತರಿಗೆ ಪಕೋಡ ಮಾರಿ ಎಂದು ಹೇಳುತ್ತಾರೆ ಯುಪಿಎ ಸರ್ಕಾರದ ಅವಧಿಯಲ್ಲಿ ಗ್ಯಾಸ್ ಬೆಲೆ ಸಬ್ಸಿಡಿ ನೀಡಿ 400 ರೂಪಾಯಿಗೆ ನೀಡಲಾಗುತ್ತಿತ್ತು. ಈಗ 900 ರೂ. ಆಗಿದೆ. ಪೆಟ್ರೋಲ್ 105, ಡೀಸೆಲ್ 94 ರೂ. ಆಗಿದೆ. ಬಿಜೆಪಿಯವರು ಸುಳ್ಳು ಅಪಪ್ರಚಾರ ಮಾಡುತ್ತಿದೆ. ಬಿಜೆಪಿಯವರ ಕಣಕಣದಲ್ಲೂ ಸುಳ್ಳೇ ತುಂಬಿದೆ. ಇಂಧನ ಬೆಲೆ ಏರಿಕೆಗೆ ಯುಪಿಎ ಕಾರಣ ಎಂದು ಹೇಳುತ್ತಾರೆ ಇವರು ಕಳೆದ ವರ್ಷ ಮೂರುವರೆ ಲಕ್ಷ ಕೋಟಿ ತೆರಿಗೆ ಹೆಸರಲ್ಲಿ ಹಣ ಸಂಗ್ರಹ ಮಾಡಿದ್ದು, ಈ ವರ್ಷವೂ ಸಹ ನಾಲ್ಕೂ ಲಕ್ಷ ಕೋಟಿ ಹಣವನ್ನು ಸಂಗ್ರಹಿಸಿದ್ದಾರೆ.
ಆದರೆ ಅವರು ತೈಲ ಬಾಂಡ್ ಗೆ ಕೇವಲ 10 ಸಾವಿರ ಕೋಟಿ ಮಾತ್ರ ಪಾವತಿ ಮಾಡಬೇಕಿದೆ.


ಆದರೆ ಕಳೆದ ವರ್ಷ ಬಿಜೆಪಿ ಇಂತಹ ಸುಳ್ಳಿನ ಹೇಳಿಕೆಗಳಿಗೆ ದೇಶದ ಜನರು ಮರುಳಾಗಬಾರದು.
ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ ಅಡುಗೆ ಎಣ್ಣೆ ಕೂಡ ಬೆಲೆ ಏರಿಕೆಯಾಗಿದೆ. ರಾಷ್ಟ್ರಮಟ್ಟದಲ್ಲಿ ಈ ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡಲು ಶ್ರೀಮತಿ.ಸೋನಿಯಾ ಗಾಂಧಿ ಅವರು ಸಮಿತಿ ರಚಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಭಟನೆ ಮಾಡೋಣ. ಬಿಜೆಪಿಯವರು ದೇಶದ ಆಸ್ತಿಗಳನ್ನು ಮಾರಾಟ ಮಾಡುತ್ತಿದ್ದಾರೆ ವಾಜಪೇಯಿ ಅವರ ಕಾಲದಲ್ಲೇ ಅನಂತಕುಮಾರ್ ಅವರು ಸಚಿವರಾಗಿದ್ದಾಗ ಅಶೋಕ ಹೋಟೇಲ್ ಮಾರಿದ್ದರು. ಈಗ ಅವರಿಗಿಂತ ನಾಲ್ಕು ಹೆಜ್ಜೆ ಮುಂದೆ ಹೋಗಿ 25 ವಿಮಾನ ನಿಲ್ದಾಣ, 31 ಬಂದರು, 26.700 ಸಾವಿರ ಕಿ.ಮೀ ರಾಷ್ಟ್ರೀಯ ಹೆದ್ದಾರಿಗಳನ್ನು , 400 ರೈಲ್ವೇ ನಿಲ್ದಾಣ, ವಿದ್ಯುತ್ ಕಂಪೆನಿಗಳನ್ನು ಮಾರುತ್ತಿದ್ದಾರೆ. ಹಿಂದೆ ಬ್ರಿಟೀಷರು ಈಸ್ಟ್ ಇಂಡಿಯಾ ಕಂಪನಿ ಮೂಲಕ ಬಂದರು. ಅದಕ್ಕೂ ಬಿಜೆಪಿ ಅವರಿಗೂ ಯಾವುದೇ ವ್ಯತ್ಯಾಸ ಇಲ್ಲ. ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದರೆ ನಮ್ಮ ಎಲ್ಲ ಆಸ್ತಿಯನ್ನು ಉದ್ಯಮಿಗಳಿಗೆ ಮಾರುತ್ತಾರೆ.
ದೆಹಲಿಯಲ್ಲಿ ರೈತರು 9 ತಿಂಗಳಿಂದ ಹೋರಾಟ ಮಾಡುತ್ತಿದ್ದರು ಮೋದಿ ಅವರು ಹೋಗಿ ಮಾತನಾಡಿಲ್ಲ. ಬಿಜೆಪಿ ಎಂದರೆ ಭ್ರಷ್ಟ ಜನರ ಪಕ್ಷ ಅಥವಾ ಬುರುಡೆ ಜನರ ಪಕ್ಷ ಎಂದೇ ಹೇಳಬಹುದು.
ಬೆಂಗಳೂರು ರಸ್ತೆಗಳಲ್ಲಿ ಸಾವಿರಾರು ಗುಂಡಿಗಳು ಬಿದ್ದಿವೆ.
ಕಳೆದ ವರ್ಷ 198 ವಾರ್ಡ್ ಗಳಿಗೆ ಹಣ ನೀಡಲಿಲ್ಲ.
ಈ ವರ್ಷ ಕೇವಲ 60 ಲಕ್ಷ ನೀಡಿದ್ದಾರೆ.
ಅಲ್ಲಿಗೆ ಬಿಜೆಪಿ ಸರ್ಕಾರ ಎರಡು ವರ್ಷದಲ್ಲಿ ಬೆಂಗಳೂರಿಗೆ 120 ಕೋಟಿ ಮಾತ್ರ ಕೊಟ್ಟಿದ್ದಾರೆ. ಬಿಜೆಪಿಗೆ ಕಣ್ಣು, ಕಿವಿ, ತಲೆ,ಇಲ್ಲ ಹೃದಯವಂತು ಮೊದಲೇ ಇಲ್ಲ ಮೋದಿ ಅವರು ಕೋವಿಡ್ ಸಮಯದಲ್ಲಿ ಮಾತೆ ಆಡದೇ, ಗಡ್ಡ ಬೆಳೆಸಿಕೊಂಡಿದ್ದರು. ಬಿಜೆಪಿಯಲ್ಲಿರುವ ನಾಯಕರು ಬಹಳ ಬುದ್ಧಿವಂತರು ಎಂದು ಹೇಳುತ್ತಾರೆ ಆದರೆ ನಿಜವಾಗಿ ಅವರಿಗೆ ಬುದ್ಧಿ ಇಲ್ಲ ಅವರು ಬುದ್ದಿಮಾಂದ್ಯರಂತೆ ವರ್ತಿಸುತ್ತಿದ್ದಾರೆ.
ಬಿಜೆಪಿ ತೊಲಗುವವರೆಗೂ ಈ ದೇಶದ ಜನರಿಗೆ ನೆಮ್ಮದಿ ಇಲ್ಲ. ಬಿಜೆಪಿಯವರು ಸಾರ್ವಜನಿಕ ಆಸ್ತಿಯನ್ನು ಅಡಮಾನ ಇಡುತ್ತಾರೆ, ಇಲ್ಲ ಖಾಸಗೀಕರಣ ಮಾಡುತ್ತಾರೆ ಅಥವಾ ಬೇರೆಯವರಿಗೆ ಮಾರುತ್ತಾರೆ. ದೇಶದ ಜನ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ದುರಾಡಳಿತವನ್ನು ಕೊನೆಗಾಣಿಸಲು ದೇಶದ ಜನತೆ ಮುಂದಾಗಬೇಕೆಂದು ದೇಶದ ಜನರಲ್ಲಿ ವಿನಂತಿಸಿದರು.

Leave a Reply

Your email address will not be published. Required fields are marked *