ಹೊನ್ನಾಳಿ ತಾಲೂಕು ಪಟ್ಟಣದ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಸಿ ಎಲ್ ಪಿ ನಾಯಕರಾದ ಮಾನ್ಯ ಸಿದ್ದರಾಮಯ್ಯನವರು ಹಾಗೂ ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದೀರಿ ನಿಮ್ಮಉದ್ದೇಶ ಏನು ಅಂತ ಆನ್ಲೈನ್ ಮೂಲಕ ಕಾಂಗ್ರೆಸ್ ಪಕ್ಷದ ಮುಖಂಡರುಗಳಿಗೆ ಕೇಳಿದಾಗ ನಾವುಗಳು 5-9-2021 ರಂದು ಸನ್ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರನ್ನು ಹಾಗೂ ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಪಕ್ಷದ ಸಂಘಟನೆಯ ಬಗ್ಗೆ ಚರ್ಚಿಸಿದಾಗ ಸಿದ್ದರಾಮಯ್ಯನವರು ಮುಂದಿನ 2023 ರ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಎಲ್ಲಾ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಮತ್ತು ಜಾತ್ಯತೀತವಾಗಿ ಹಾಗೂ ಪಕ್ಷಾತೀತವಾಗಿ ಎಲ್ಲರೂ ಒಗ್ಗಟ್ಟಾಗಿ ಪಕ್ಷ ಸಂಘಟನೆಯನ್ನು ನೀವುಗಳು ಮಾಡಿದರೆ ಮುಂದಿನ ದಿನಮಾನಗಳಲ್ಲಿ ಪಕ್ಷ ಅಧಿಕಾರ ಬರುತ್ತದೆ ಎಂದು ಹೇಳಿದರು.
ನಂತರ ಮಾರನೆಯ ದಿನದಂದು ರಾಜ್ಯಾಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಚರ್ಚಿಸಿದಾಗ ಎಲ್ಲರೂ ಒಗ್ಗಟ್ಟಾಗಿ ಪಕ್ಷ ಸಂಘಟನೆಯನ್ನು ಮಾಡಿ ಎಂದು ಅವರು ತಿಳಿಸಿದರು. ಈ ಎರಡು ನಾಯಕರುಗಳ ಆದೇಶದ ಮೇರೆಗೆ ನಾವುಗಳು ಈ ಹಿಂದೆಯೂ ಸಹ ಪಕ್ಷ ಸಂಘಟನೆಯನ್ನು ಮಾಡಿದ್ದೇವು ಈಗ ಎರಡು ನಾಯಕರುಗಳು ನಮಗೆ ಆದೇಶ ಮಾಡಿರುವುದು ಇನ್ನಷ್ಟು ಬಲ ಬಂದಂತಾಗಿದೆ ಎಂದು ಹೇಳಿದರು. ನಾವುಗಳು ಮುಂದಿನ ವಾರದಿಂದ ನಮ್ಮ ಪಕ್ಷದ 5 ನಾಯಕರ ತಂಡ ಎರಡು ಅವಳಿ ತಾಲೂಕಿನಾದ್ಯಂತ ಸುತ್ತಾಡಿ ಇನ್ನಷ್ಟು ಪಕ್ಷ ಸಂಘಟನೆಗೆ ಸದ್ಯದಲ್ಲೇ ಚಾಲನೆಯನ್ನು ಕೊಡುತ್ತೇವೆ ಎಂದು ನಾಯಕರನ್ನು ಭೇಟಿಯಾದ 5 ಜನ ಮುಖಂಡರುಗಳು ABCNews online channel ರವರಿಗೆ ತಿಳಿಸಿದರು.
ಈ ಸಂದರ್ಭಗಳಲ್ಲಿ ಸಿ ಎಲ್ ಪಿ ನಾಯಕರುಗಳಾದ ಸಿದ್ದರಾಮಯ್ಯನವರು, ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಿ,ಕೆ ಶಿವಕುಮಾರ್ ರವರು, ಎಂ.ಎಲ್ ಸಿ ಜಬ್ಬರ್ ಸಾಬ್ , ಹೊನ್ನಾಳಿ ತಾಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಡಾ// ಎಲ್ ಈಶ್ವರ್ ನಾಯ್ಕ್, ಹೆಚ್.ಬಿ ಶಿವಯೋಗಿಯವರು,ರಾಜ್ಯ ಹಿಂದೂಳಿದ ವರ್ಗದ ಉಪಾಧ್ಯಕ್ಷ ಎಚ್ಎ ಉಮಾಪತಿ ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ ರಮೇಶ್,ಬಿ ಸಿದ್ದಪ್ಪ ಸಹ ಭಾಯಾಗಿದ್ದರು