ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ 242 ಬೂತ್‍ಗಳ ಅಧ್ಯಕ್ಷರ ಮನೆಯ ಮುಂದೆ ಏಕಕಾಲಕ್ಕೆ ನಾಮಫಲಕ ಹಾಗೂ ಮನೆಯ ಮೇಲೆ ಧ್ವಜಾರೋಣ ಕಾರ್ಯಕ್ರಮ ಚಾಲನೆ ನೀಡಿ ಮಾತನಾಡಿದರು.
ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಹಾಗೂ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರ ಸೂಚನೆಯಂತೆ ಬೂತ್ ಸಮಿತಿ ಅಧ್ಯಕ್ಷರ ಮನೆ ಮುಂದೆ ನಾಮಫಲಕ ಅಳವಡಿಸಿ ಅವರ ಮನೆಯ ಮೇಲೆ ಧ್ವಜಾರೋಹಣ ಮಾಡಲಾಗುತ್ತಿದೆ ಎಂದರು.
ಪಕ್ಷದ ಸಂಘಟನೆಯಲ್ಲಿ ಬೂತ್ ಸಮಿತಿಯ ಅಧ್ಯಕ್ಷರ ಜವಾಬ್ದಾರಿ ಬಹಳ ಮಹತ್ವದಾಗಿದ್ದು ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡುವ ಜವಾಬ್ದಾರಿ ಅವರ ಮೇಲಿದೆ ಎಂದರು.
ಪಕ್ಷದ ಯಾವುದೇ ಪದಾಧಿಕಾರಿಗಳಿಗೆ ನಾಮಫಲಕವನ್ನು ಪಕ್ಷದಿಂದ ನೀಡಿಲ್ಲಾ, ಆದರೇ ಬೂತ್ ಸಮಿತಿ ಅಧ್ಯಕ್ಷರಿಗೆ ಪಕ್ಷವು ನಾಮಫಲಕವನ್ನ ಬಹಳ ವಿಶೇಷವಾಗಿ ನೀಡಿದ್ದು, ಇದರ ಮೂಲಕ ಅವರ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ ಎಂದರು.
ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು ಕಾರ್ಯಕರ್ತರಿಗೆ ಹೆಚ್ಚಿನ ಪ್ರಮಾಮುಖ್ಯತೆಯನ್ನು ಪಕ್ಷ ನೀಡುತ್ತದೇ ಎಂಬುದಕ್ಕೆ ಇದೇ ಉದಾಹರಣೆ ಎಂದ ಶಾಸಕರು, ಬೇರೆ ಯಾವ ಪಕ್ಷದಲ್ಲಿ ಕಾರ್ಯಕರ್ತರಿಗೆ ಇಷ್ಟು ಪ್ರಾಮುಖ್ಯತೆ ನೀಡುವುದಿಲ್ಲಾ ಎಂದರು.
ಖುದ್ದು ನಾಮಫಲಕ ಅಳವಡಿಸಿ, ಬಾಹುಟ ಕಟ್ಟಿದ ಶಾಸಕ : ನ್ಯಾಮತಿ ಪಟ್ಟಣದ ಹತ್ತು ಬೂತ್ ಸಮಿತಿ ಅಧ್ಯಕ್ಷರು, ಸುರಹೊನ್ನೆ ಐದು ಬೂತ್ ಸಮಿತಿ ಅಧ್ಯಕ್ಷರು ಸವಳಂಗ ಇಬ್ಬರು ಬೂತ್ ಸಮಿತಿ ಅಧ್ಯಕ್ಷರ ಮನೆಯ ಮುಂದೆ ಖುದ್ದು ಶಾಸಕರೇ ನಾಮಫಲಕ ಹಾಗೂ ಮನೆಯ ಪಕ್ಷದ ಶಾಸಕರೇ ಕಟ್ಟಿ ಸಮಿತಿಯ ಅಧ್ಯಕ್ಷರ ಪರ ಘೋಷಣೆ ಕೂಗಿದರು.
ಈ ಸಂದರ್ಭ ಮಹಾಶಕ್ತಿ ಕೇಂದ್ರದ ಪ್ರಬಾರಿಗಳಾದ ಸುರೇಂದ್ರನಾಯ್ಕ, ಕುಬೇರಪ್ಪ, ಕೆ.ವಿ.ಚನ್ನೇಶ್, ಬಿಜೆಪಿ ತಾಲೂಕು ಅಧ್ಯಕ್ಷರಾದ ಜೆ.ಕೆ.ಸುರೇಶ್, ಮಹಿಳಾ ಮೋರ್ಚ ಅಧ್ಯಕ್ಷರಾದ ಉಮಾ ಓಂಕಾರ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಉಮಾರಮೇಶ್ ಸೇರಿದಂತೆ ಪಕ್ಷದ ಮುಖಂಡರು ಮತ್ತೀತತರಿದ್ದರು.

Leave a Reply

Your email address will not be published. Required fields are marked *