ಹೊನ್ನಾಳಿ : ತಾಲೂಕಿನ ಸೊರಟೂರು ಗ್ರಾಮದ ಬಳಿ ಕಳೆದ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸೊರಟೂರು ಗ್ರಾಮದ ಹನುಮಂತಪ್ಪ ಸಾವನ್ನಪ್ಪಿದ್ದು, ಮೃತರ ಮನೆಗೆ ಶಾಸಕ ಎಂ.ಪಿ.ರೇಣುಕಾಚಾರ್ಯ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ವೈಯಕ್ತಿಕ, 25 ಸಾವಿರ ಧನ ಸಹಾಯ ಮಾಡಿದರು.
ಎತ್ತಿನಗಾಡಿ ಹಾಗೂ ಮಾರುತಿ ಓಮಿನಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, 13 ಜನರು ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೇ ಇತ್ತ ಕುಟುಂಕ್ಕೆ ಆಧಾರವಾಗಿದ್ದ ಎರಡು ಎತ್ತುಗಳೂ ಕೂಡ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿವೆ.
ಇತ್ತ ಮೃತ ಹನುಮಂತಪ್ಪನ ಪತ್ನಿ ಜಾನಮ್ಮನ ಸ್ಥಿತಿ ಕೂಡ ಗಂಭೀರವಾಗಿದ್ದು ಶಿವಮೊಗ್ಗದ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತ ಹನುಂತಪ್ಪನಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗುವಿದ್ದು ಇದೀಗ ಇಡೀ ಕುಟುಂಬವೇ ಕಣ್ಣೀರಲ್ಲಿ ಕೈತೊಳೆಯುತ್ತಿದೇ.
ವಿಷಯ ತಿಳಿದು ಗ್ರಾಮಕ್ಕೆ ಭೇಟಿ ನೀಡಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮೃತ ಹನುಮಂತಪ್ಪನ ಕುಟುಂಬಕ್ಕೆ ವೈಯಕ್ತಿಕ 25 ಸಾವಿರ ಧನ ಸಹಾಯ ಮಾಡಿದರಲ್ಲದೇ ಮೃತನ ಹಿರಿಯ ಪುತ್ರಿಯ ವಿದ್ಯಾಬ್ಯಾಸಕ್ಕೆ ಸಹಾಯ ಮಾಡುವ ಬರವಸೆ ನೀಡಿದರಲ್ಲದೇ, ಆಕೆಗೆ ಕೆಲಸ ಕೊಡಿಸುವ ಬರವಸೆ ನೀಡಿದರು.
ಇನ್ನು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಎತ್ತುಗಳನ್ನು ವೀಕ್ಷಣೆ ಮಾಡಿದ ಶಾಸಕ ಎಂ.ಪಿ.ರೇಣುಕಾಚಾರ್ಯ ಮೂಕ ಪ್ರಾಣಿಗಳ ಅರಣ್ಯ ರೋಧನವನ್ನು ಕಂಡು ಕಣ್ಣೀರು ಹಾಕಿದರು.