ಹೊನ್ನಾಳಿ ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಇಂದು ಸಾಮಾನ್ಯ ಸಭೆ ಯು ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ನೇತೃತ್ವದಲ್ಲಿ ನಡೆಯಿತು ಈ ಸಾಮಾನ್ಯ ಸಭೆಯಲ್ಲಿ ಚರ್ಚೆ ವಿಷಯ ಪಟ್ಟಣದಲ್ಲಿ ಅಭಿವೃದ್ಧಿ ಹೇಗೆ ಮಾಡಬೇಕು ಮತ್ತು ಹಸಿ ಕಸ ಒಣ ಕಸ ವನ್ನು ದಿನನಿತ್ಯ ಪ್ರತಿ ವಾರ್ಡಗಳಲ್ಲಿ ಶೇಖರಣ ಮಾಡಿ ದ ಕಸವನ್ನು ವಿಲೇವಾರಿ ಹೇಗೆ ಮಾಡಬೇಕು,


ನೀರಿನ ಸಮಸ್ಯೆಯ ಬಗ್ಗೆ ಕಸ ವಿಲೇವಾರಿ ಮಾಡುವ ವಾಹನಗಳ ಬಗ್ಗೆ, ಇನ್ನು ಹಲವಾರು ಸಮಸ್ಯೆಗಳ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡಲಾಯಿತು. ಮತ್ತು 2019 ಮತ್ತು 2020 ಸಾಲಿನ ಜಮಾ-ಖರ್ಚಿನ ಬಗ್ಗೆಯೂ ಸಹ ಕೂಲಂಕುಶವಾಗಿ ಸರ್ವ ಸದಸ್ಯರು ಚರ್ಚೆ ಮಾಡಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಕೆ ವಿ ಶ್ರೀಧರ್ ಉಪಾಧ್ಯಕ್ಷೆ ರಂಜಿತ ಚೆನ್ನಪ್ಪ ಪುರಸಭೆಯ ಅಧಿಕಾರಿಯಾದ ಪಂಪಾಪತಿ ನಾಯಕ್ ಪುರಸಭೆಯ ಸದಸ್ಯರುಗಳಾದ ಎಂ ಸುರೇಶ್ ಬಾವಿನ ಮನೆಮ ರಾಜಪ್ಪ ಧರ್ಮಪ್ಪ ಹೊಸಕೇರಿ ಸುರೇಶ್ ರಂಗಪ್ಪ ಹೋಬಳಿದಾರ್ ಬಾಬು ಮೇಲಪ್ಪ ಮಹಿಳಾ ಸರ್ವ ಸದಸ್ಯರು ರಾಜು ಮತ್ತು ಪುರಸಭೆಯ ಅಧಿಕಾರ ವರ್ಗದವರು ಪೌರಕಾರ್ಮಿಕರು ಸಹ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *