ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪ.ಪಂಗಡದ
ಅಭ್ಯರ್ಥಿಗಳನ್ನು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ
ವ್ಯಾಸಂಗದ ಆಯ್ಕೆಗಾಗಿ ಸಾಗರೋತ್ತರ ವಿದ್ಯಾರ್ಥಿವೇತನ
ಯೋಜನೆಯಡಿ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ
ಅರ್ಜಿಗಳನ್ನು ಆಹ್ವಾನಿಸÀಲಾಗದೆ.
   ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕದ ನಿವಾಸಿಯಾಗಿಬೇಕು,
ಕರ್ನಾಟಕ ರಾಜ್ಯ ಪ್ರಕಟಿಸಿರುವ ಪಟ್ಟಿಯಲ್ಲಿ ಪರಿಶಿಷ್ಟ ಜಾತಿ ಮತ್ತು
ಪ.ಪಂಗಡಕ್ಕೆ ಸೇರಿಸಬೇಕು. ವಿದೇಶಿ ವಿಶ್ವವಿದ್ಯಾಲಯದಿಂದ ಆಫರ್
ಲೆಟರ್ ಪಡೆದಿರಬೇಕು, ಯು.ಜಿ.ಸಿ ಮಾನ್ಯತೆ ಪಡೆದ
ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು, ಪಿಹೆಚ್‍ಡಿ ಅಧ್ಯಯನಕ್ಕೆ
ತೆರಳುವ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ
ಪಡೆದಿರಬೇಕು.
    ಅರ್ಜಿ ಸಲ್ಲಿಸುವವರ ಕುಟುಂಬದ ಆದಾಯ ವರ್ಷಕ್ಕೆ ರೂ.8 ಲಕ್ಷಕ್ಕಿಂತ
ಕಡಿಮೆ ಇದ್ದರೆ ಶೇ.100 ರಷ್ಟು ಸಹಾಯಧನ
ಒದಗಿಸಲಾಗುವುದು ಅದರಂತೆ ವಾರ್ಷಿಕ ರೂ.8 ರಿಂದ 15 ಲಕ್ಷ ಇದ್ದರೆ
ಶೇ.50 ರಷ್ಟು, ಹಾಗೂ ವಾರ್ಷಿಕ 15 ರಿಂದ 25 ಲಕ್ಷವಿದ್ದರೆ ಶೇ.33
ರಷ್ಟು ಸಹಾಯಧನ ನೀಡಲಾಗುವುದು.
    ಅರ್ಜಿ ಸಲ್ಲಿಸಲು ಸೆ.24 ಕೊನೆಯ ದಿನವಾಗಿದ್ದು, ಇಲಾಖೆಯ
ವೆಬ್‍ಸೈಟ್ ತಿತಿತಿ.sತಿ.ಞಚಿಡಿ.ಟಿiಛಿ.iಟಿ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ
ಸಲ್ಲಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *