ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ
ಕಾರ್ಯನಿರ್ವಹಿಸುತ್ತಿರುವ ಎಲ್ಲ ವಸತಿ ಶಾಲೆಗಳ ಪ್ರವೇಶಕ್ಕಾಗಿ ಸೆ.16
ರಂದು ಜಿಲ್ಲೆಯ 9 ಪರೀಕ್ಷಾ ಕೇಂದ್ರಗಳಲ್ಲಿ ಕರ್ನಾಟಕ ಪರೀಕ್ಷಾ
ಪ್ರಾಧಿಕಾರದ ವತಿಯಿಂದ ಪ್ರವೇಶ ಪರೀಕ್ಷೆ ನಡೆಸಲಾಗುತ್ತಿದ್ದು,
ಕೋವಿಡ್ ಪಾಸಿಟಿವ್ ಅಭ್ಯರ್ಥಿಗಳಿಗೆ ಪ್ರವೇಶ ಪರೀಕ್ಷೆಗೆ ಹಾಜರಾಗಲು,
ಸರ್ಕಾರಿ ನರ್ಸಿಂಗ್ ಕಾಲೇಜು, ಸಿಜೆ ಆಸ್ಪತ್ರೆ, ದಾವಣಗೆರೆ ಕೇಂದ್ರವನ್ನು
ಕೋವಿಡ್ ಆರೈಕೆ ಕೇಂದ್ರವನ್ನಾಗಿ ಗುರುತಿಸಿ
ಕಾಯ್ದಿರಿಸಲಾಗಿರುತ್ತದೆ.
ಆರೋಗ್ಯ ಇಲಾಖೆ ಹೊರಡಿಸಿರುವ ಮಾರ್ಗಸೂಚಿಗಳನ್ವಯ
ಕೋವಿಡ್ ಪಾಸಿಟಿವ್ ಅಭ್ಯರ್ಥಿಗಳಿಗೆ ಪ್ರವೇಶ ಪರೀಕ್ಷೆಗೆ ಹಾಜರಾಗಲು
ಸರ್ಕಾರಿ ನರ್ಸಿಂಗ್ ಕಾಲೇಜು, ಸಿಜೆ ಆಸ್ಪತ್ರೆ, ದಾವಣಗೆರೆ ಕೇಂದ್ರವನ್ನು
ಕೋವಿಡ್ ಆರೈಕೆ ಕೇಂದ್ರ ಎಂದು ಘೋಷಿಸಲಾಗಿದೆ. ಉಳಿದಂತೆ ಎಲ್ಲ
ಪರೀಕ್ಷಾ ಕೇಂದ್ರದಲ್ಲಿ ಪ್ರತಿಯೊಂದು ಕೊಠಡಿಗೆ 24 ಅಭ್ಯರ್ಥಿಗಳು
ಮೀರದಂತೆ ಕನಿಷ್ಠ 6 ಅಡಿ ಅಂತರದಲ್ಲಿ ಆಸನ ವ್ಯವಸ್ಥೆಯನ್ನು
ಕಲ್ಪಿಸಲಾಗಿದೆ.
ಕೋವಿಡ್ ಆರೈಕೆ ಕೇಂದ್ರದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ
ದಿನದಂದು ಪರೀಕ್ಷಾ ಮೇಲ್ವಿಚಾರಕರಾಗಿ ತಾಲ್ಲೂಕು ಅಧಿಕಾರಿ
ಡಾ.ವೆಂಕಟೇಶ್.ಎಲ್.ಡಿ (9731066582), ಸಂವೀಕ್ಷಕರಾಗಿ ಸಿಜೆ ಆಸ್ಪತ್ರೆ
ಸರ್ಕಾರಿ ನರ್ಸಿಂಗ್ ಕಾಲೇಜು ಪ್ರಾಂಶುಪಾಲ ನಳೀನಾಕ್ಷಿ.ಎಸ್. (8197401965),
ವೈದ್ಯಾಧಿಕಾರಿಗಳಾಗಿ ಹುಚ್ಚವ್ವನಹಳ್ಳಿ ಪ್ರಾಥಮಿಕ ಆರೋಗ್ಯ
ಕೇಂದ್ರ ವೈದ್ಯಾಧಿಕಾರಿ ಡಾ.ಧೀರಜ್.ಹೆಚ್.ವಿ (7019952617).,
ಮಾರ್ಗಾಧಿಕಾರಿಗಳಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರಶಿಕ್ಷಣಾಧಿಕಾರಿ
ಕೋಟ್ರೇಶ್ (9480695172) ಇವರನ್ನು ನೇಮಿಸಲಾಗಿದೆ.
ಪರೀಕ್ಷಾ ಕೇಂದ್ರಗಳಿಗೆ ನೇಮಿಸಲಾದ ಅಧಿಕಾರಿಗಳು ಅಥವಾ
ಸಿಬ್ಬಂದಿಗಳು ಪರೀಕ್ಷಾ ದಿನದಂದು ಕೋವಿಡ್ ಪರೀಕ್ಷಾ ಕೇಂದ್ರದಲ್ಲಿ
ನಿಗದಿಪಡಿಸಲಾದ ಸಮಯಕ್ಕೆ ಹಾಜರಿದ್ದು, ಪರೀಕ್ಷೆಗೆ ಸಂಬಂಧಪಟ್ಟ
ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡು
ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ನಡೆಸಬೇಕು ಎಂದು ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ಆದೇಶದಲ್ಲಿ ತಿಳಿಸಿದ್ದಾರೆ.