-ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕು ಕುಂದೂರು ಗ್ರಾಮದ ಗುಡ್ಡದಲ್ಲಿ ಅಕ್ರಮವಾಗಿ ಬಗೆದು ಮಣ್ಣು-ಕಲ್ಲು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಮಾರಾಟ ಮಾಡುತ್ತಿದ್ದು, ಅಕ್ರಮ ದಂದೆಕೋರರನ್ನು ಬಂದಿಸಲು ಒತ್ತಾಯಿಸಿ ಮನವಿ,
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕು ಕುಂದೂರು ಗ್ರಾಮದ ಗುಡ್ಡದಲ್ಲಿ ಅಕ್ರಮವಾಗಿ ತಳಮಟ್ಟದಿಂದ ಗುಡ್ಡವನ್ನು ಬಗೆಯುವುದರಿಂದ ಮುಂದಿನ ದಿನಗಳಲ್ಲಿ ಗುಡ್ಡ ಕುಸಿಯುವ ಆತಂಕವಿರುತ್ತದೆ.
ಭೂಗಳ್ಳರು ಮಣ್ಣು-ಕಲ್ಲು ಬಗೆದು ರಾಷ್ಟ್ರೀಯ ಹೆದ್ದಾರಿಗಳಾದ ಕೊಮಾರನಹಳ್ಳಿ ಕೊಪ್ಪ ರಸ್ತೆ, ಕನಗನಹಳ್ಳಿ ರಸ್ತೆ, ಕುಂಬಳೂರು ರಸ್ತೆ ಹೀಗೆ ವಿವಿಧ ಕಾಮಗಾರಿಗಳಿಗೆ ಕುಂದೂರು ಗುಡ್ಡದಿಂದ ಅಕ್ರಮವಾಗಿ ಮಣ್ಣು ತಗೆದು ಒಂದು ಲೋಡ್‌ಗೆ 1000/- ರೂ ರಂತೆ ಮಾರಾಟ ಮಾಡುತ್ತಿದ್ದು, ತಿಂಗಳಿಗೆ ಸುಮಾರು 3000 ಲೋಡ್ ಮಣ್ಣು ತಗೆಯುತ್ತಿದ್ದಾರೆ. ಮತ್ತು ರೈತರ ಜಮೀನಿನಲ್ಲಿ ಮಣ್ಣು ತಗೆಯುತ್ತೇವೆಂದು ಹೇಳುತ್ತಾರೆ. ರೈತರಿಗೆ ಮಣ್ಣು ಮಾರುವುದಕ್ಕೆ ಅವಕಾಶವಿದೆಯೇ?, ಮಣ್ಣು ಮಾರಬೇಕೆಂದರೆ ಸಂಬಂಧಿಸಿದ ತಹಶೀಲ್ದಾರ್ ಗಮನಕ್ಕೆ ತರಬೇಕಾಗಿಲ್ಲವೆ? ರೈತರ ಹೆಸರಿನಲ್ಲಿ ಗುಡ್ಡವನ್ನು ಪೂರ್ತಿ ಬಗೆದಿದ್ದು, ಗುಡ್ಡ ಕುಸಿಯುವ ಹಂತಕ್ಕೆ ತಲುಪಿದೆ. ಈ ವಿಷಯವಾಗಿ ರೈತರು ತಡೆದರೆ, ಅವರ ಮೇಲೆ ಹಲ್ಲೆ ಮಾಡುವುದು (ಆಂಜನೇಯ ಜಮೀನಿನ ಸ.ನಂ.33 ಜೀವ ಬೆದರಿಕೆ ಹಾಕುವುದು ಮಾಡುತ್ತಾರೆ.
ಭೂಗಳ್ಳರು ಶ್ರೀಯುತ ಆಂಜನೇಯನ ಜಮೀನಿನಲ್ಲಿ ಬೆಳೆದಿರುವ ಬೆಳೆಯನ್ನು ನಾಶಪಡಿಸಿ ಮಣ್ಣು ತುಂಬಿದ್ದು, ಈ ವಿಷಯವಾಗಿ ದಿನಾಂಕ : 30-08-2021 ರಂದು ಪಿ.ಎಸ್.ಐ. ಹೊನ್ನಾಳಿ ಇವರಿಗೆ ದೂರು ಕೊಟ್ಟರೆ ಉಭಯೇತರರಿಗೆ ಎಚ್ಚರಿಕೆ ನೋಟೀಸ್ ನೀಡಿ ಪ್ರಕರಣ ಮುಕ್ತಾಯಗೊಳಿಸಲಾಗಿದೆ. ದಿನಾಂಕ : 02-09-2021 ರಂದು ದಲಿತ ಸಂಘಟನೆ ಸಮಿತಿ ಮಾನ್ಯ ತಹಶೀಲ್ದರ್‌ರವರಿಗೆ ಮನವಿ ಮಾಡಿದ ಮೇಲೆ ಯಾವುದೇ ಲಾರಿ, ಜೆ.ಸಿ.ಬಿ. ಅಥವಾ ಟ್ರ್ಯಾಕ್ಟರ್‌ಗಳಾಗಲಿ ಜಪ್ತಿ ಮಾಡಲಿಲ್ಲ.
ಆದುದರಿಂದ ಭೂಗಳ್ಳರು ಮತ್ತೆ ದಿನ ನಿತ್ಯ 10-15 ಲಾರಿಗಳಲ್ಲಿ ಮಣ್ಣು ಮಾರಾಟ ಮಾಡಿದರು. ಆದುದರಿಂದ 2 ವರ್ಷದಿಂದ ಗುಡ್ಡವನ್ನು ಬಗೆದು ಕುಸಿಯುವಂತೆ ಮಾಡಿದ ಭೂಗಳ್ಳರ ಬಗ್ಗೆ ತನಿಖೆ ಮಾಡಿ, ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಮತ್ತು ಎರಡು ವರ್ಷಗಳಿಂದ ಎಷ್ಟು ಮೆಟ್ರಿಕ್ ಟನ್ ಮಣ್ಣು ಮಾರಾಟವಾಗಿದೆ ಎಂಬುದನ್ನು ಪತ್ತೆ ಹಚ್ಚಿ ದಂಡ ವಸೂಲಿ ಮಾಡಬೇಕೆಂದು ದಲಿತ ಸಂಘರ್ಷ ಸಮಿತಿಯ ಮನವಿ,
: I ಪ್ರಾಕೃತಿಕ ಅರಣ್ಯ ಸಂಪತ್ತು ರಕ್ಷಿಸಬೇಕಾದ ತಾಲ್ಲೂಕು ಆಡಳಿತ ವಿಫಲವಾಗಿದ್ದು, ಜಿಲ್ಲಾ ಅಧಿಕಾರಿಗಳು
ಸೂಕ್ತ ಕ್ರಮ ಜರುಗಿಸಲಿ 2. ಕುಂದೂರು ಗುಡ್ಡದಲ್ಲಿ ಸುಮಾರು
02 ವರ್ಷಗಳಿಂದ ಅಕ್ರಮವಾಗಿ ಕಲ್ಲು ಮಣ್ಣು ತುಂಬಿ ಹೈವೆ ರಸ್ತೆ ಕಾಮಗಾರಿಗೆ ಮಾರಾಟ ಮಾಡಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಿ.
- ರೈತರಿಗೆ ಮಣ್ಣು ಮಾರುವುದಕ್ಕೆ ಅವಕಾಶವಿಲ್ಲ ಆದರೆ ಸಮತಟ್ಟು ಮಾಡಲಿಕ್ಕೆ ಅಭ್ಯಂತರವಿಲ್ಲ ಮಣ್ಣು
ಮಾರುವುದು ಅಕ್ರಮ ಎಂದು ತಹಶೀಲ್ದಾರ್ ಅಂತವರ ವಿರುದ್ಧ ಕ್ರಮ ಜರುಗಿಸುವುದು.
- ಈಗಾಗಲೇ ಸ.ನಂ.33 ರಲ್ಲಿ ಸಾಗುವಳಿ ಮಾಡುವ ರೈತರಿಗೆ ಭೂಗಳ್ಳರಿಂದ ರಕ್ಷಣೆ ಮಾಡುವುದು. 5. ಕುಂದೂರು ಗುಡ್ಡದ ಅಕ್ರಮ ಧರಣಿ ಕಾರ್ಯಕ್ರಮ ಬಂದ್ ಮಾಡುವವರೆಗೆ ಮುಂದುವರಿಯುವುದುಮಾನ್ಯ ತಹಶೀಲ್ದಾರ್ ರವರಿಗೆ ತಿಳಿಸಿದರು. ದಕ್ಷ ಎಸ್.ಪಿ. ಸಾಹೇಬರು ಮನಸ್ಸು ಮಾಡಿದಲ್ಲಿ ಮಾತ್ರ ಕುಂದೂರು ಗುಡ್ಡ ರಕ್ಷಣೆ ಮಾಡಬಹುದು ಎನ್ನುವ ದ.ಸಂ.ಸ.ದು ನಂಬಿಕೆ ಯಾಗಿದೆ ಎಂದರು.
ಈ ಪ್ರತಿಭಟನೆ ಸ್ಥಳಕ್ಕೆ ಮಾನ್ಯ ತಾಲೂಕು ದಂಡಾಧಿಕಾರಿಗಳು ಬಂದು ಪ್ರತಿಭಟನಾ ನಿರತರ ಸಮಸ್ಯಗಳನ್ನು ಆಲಿಸಿ ಅಕ್ರಮವಾಗಿ ಭೂಮಿಯನ್ನುಅಗಿಯುವರ ಮೇಲೆ ಎಪ್ ಐ ಆರ್ ಧಾಖಲಸಿ ಎಂದು ಪೋಲಿಸ್ ಇಲಾಖೆ ಯವರಿಗೆ ತಿಳಿಸಿದರು.ನಂತರ ಮನವಿ ಪತ್ರವನ್ನು ಸ್ವೀಕರಿಸಿದರು.
ಪರಮೇಶಪ್ಪ ಎ ಕೆ ಬೆನಕನಹಳ್ಳಿ ಡಿಎಸ್ಎಸ್ ತಾಲೂಕ ಸಂಚಾಲಕರು, ರುದ್ರೇಶ್ ದಿಡಗೂರು ಡಿ ಎಸ್ ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಕೆ ಎಚ್ ರಾಜಪ್ಪ, ಮಂಜುನಾಥ್ ಕುರುವ , ಧರ್ಮಪ್ಪ, ಪರಶುರಾಮ್, ಮಂಜು ಕುಂದೂರು ,ಚಂದ್ರಪ್ಪ ಇನ್ನುಮುಂತಾದರೂ ಸಹ ಭಾಗಿಯಾಗಿದ್ದರು .