ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಸ್ಪರ್ಧಾತ್ಮಕ
ಪರೀಕ್ಷೆಗಳ ತರಬೇತಿ ಕೇಂದ್ರ ಆಯೋಜಿಸಿರುವ ಪೋಲೀಸ್ ಸಬ್
ಇನ್ಸ್‍ಪೆಕ್ಟರ್ ಹುದ್ದೆಗಳ ನೇಮಕಾತಿ ಪರೀಕ್ಷಾ ತರಬೇತಿ ಶಿಬಿರಕ್ಕೆ
ಸೆ.17 ರಂದು ಬೆಳಗ್ಗೆ 11 ಗಂಟೆಗೆ ಮೈಸೂರು ಉಪ ಪೊಲೀಸ್
ಆಯುಕ್ತರಾದ ಪ್ರದೀಪ್ ಗುಂಟಿ ಚಾಲನೆ ನೀಡುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ
ಮುಕ್ತ ವಿಶ್ವವಿದ್ಯಾಲಯದ ಕುಲಪತಿಗಳಾದ ಎಸ್. ವಿದ್ಯಾಶಂಕರ್
ವಹಿಸುವರು, ಮುಖ್ಯ ಅತಿಥಿಗಳಾಗಿ ನಿವೃತ್ತ ಎಸ್‍ಪಿ ಶಂಕರೇಗೌಡ
ಭಾಗವಹಿಸುವರು, ಕುಲಸಚಿವ ಪ್ರೊ. ಆರ್. ರಾಜಣ್ಣ ಉಪಸ್ಥಿತರಿರುವರು.
2021ರಲ್ಲಿ ಆರಂಭಗೊಂಡ ಕರ್ನಾಟಕ ರಾಜ್ಯ ಮುಕ್ತ
ವಿಶ್ವವಿದ್ಯಾಲಯ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರವು ಯುಪಿಎಸ್ಸಿ
ಹಾಗೂ ಕೆಪಿಎಸ್ಸಿ ಪರೀಕ್ಷೆಗಳ ಹಲವು ತರಬೇತಿಗಳನ್ನು
ಆಯೋಜಿಸುತ್ತಾ ಬಂದಿದೆ. ಕೊರೊನಾ ಕಾರಣದಿಂದ ಆನ್‍ಲೈನ್ ತರಬೇತಿ
ಶಿಬಿರವನ್ನು ಆಯೋಜಿಸಲಾಗಿದ್ದು, ಕಳೆದವಾರ ಪಿಯು, ಸಿಇಟಿ ಪರೀಕ್ಷಾ
ತರಬೇತಿ ಶಿಬಿರ ಮುಗಿದಿದೆ. ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ತರಬೇತಿ
ಶಿಬಿರಕ್ಕೆ ಹೊಸದಾಗಿ ಸೇರಬಯಸುವವರು ಹೆಸರು
ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಸ್ಪರ್ಧಾತ್ಮಕ

ಪರೀಕ್ಷೆಗಳ ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ
ಸತ್ಯನಾರಾಯಣಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *