ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೆ. 18 ಮತ್ತು 19
ರಂದು ಎರಡು ದಿನಗಳ ದಾವಣಗೆರೆ ಜಿಲ್ಲಾ ಪ್ರವಾಸ ಕಾರ್ಯಕ್ರಮ
ಹಮ್ಮಿಕೊಂಡಿದ್ದಾರೆ.
ಮುಖ್ಯಮಂತ್ರಿಗಳು ಸೆ. 18 ರಂದು ಮಧ್ಯಾಹ್ನ 02 ಗಂಟೆಗೆ
ಬೆಂಗಳೂರಿನಿಂದ ಹೊರಟು, ಸಂಜೆ 5.30 ಗಂಟೆಗೆ ದಾವಣಗೆರೆಗೆ
ಆಗಮಿಸುವರು. ಬಳಿಕ ರಾತ್ರಿ 7 ಗಂಟೆಗೆ ನಗರದ ಅಪೂರ್ವ
ರೆಸಾರ್ಟ್‍ನಲ್ಲಿ ಆಯೋಜಿಸಲಾಗಿರುವ ಪಕ್ಷದ ರಾಜ್ಯ ಕೋರ್ ಕಮಿಟಿ
ಸಭೆಯಲ್ಲಿ ಭಾಗವಹಿಸಿ, ದಾವಣಗೆರೆಯಲ್ಲಿ ವಾಸ್ತವ್ಯ ಮಾಡುವರು.
ಸೆ. 19 ರಂದು ಬೆಳಿಗ್ಗೆ 9.30 ಗಂಟೆಗೆ ನಗರದ ಡಾ. ಎಂ.ಸಿ. ಮೋದಿ
ರಸ್ತೆ, ಪಿ.ಜೆ. ಬಡಾವಣೆಯಲ್ಲಿ ದಾವಣಗೆರೆ ಮಹಾನಗರಪಾಲಿಕೆಯಿಂದ
ಆಯೋಜಿಸಲಾಗಿರುವ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ
(ಎಂಜಿಎನ್‍ವಿವೈ) ಕಾಮಗಾರಿಗೆ ಚಾಲನೆ ನೀಡುವರು. ಬೆಳಿಗ್ಗೆ 10
ಗಂಟೆಯಿಂದ ಸಂಜೆ 06 ಗಂಟೆಯವರೆಗೆ ನಗರದ ತ್ರಿಶೂಲ್
ಕಲಾಭವನದಲ್ಲಿ ಏರ್ಪಡಿಸಲಾಗಿರುವ ಪಕ್ಷದ ರಾಜ್ಯ ಕಾರ್ಯಕಾರಿಣಿ
ಸಭೆಯಲ್ಲಿ ಭಾಗವಹಿಸುವರು. ಮುಖ್ಯಮಂತ್ರಿಗಳು ಅದೇ ದಿನ
ರಾತ್ರಿ 8 ಗಂಟೆಗೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು
ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ತಿಳಿಸಿದ್ದಾರೆ.