*ವರ್ಷಕ್ಕೆ 2 ಕೋಟಿ ಉದ್ಯೋಗದ ಸುಳ್ಳು ಭರವಸೆ ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ನಿರುದ್ಯೋಗ ದಿನವಾಗಿ ಆಚರಣೆ- ಹೊನ್ನಾಳಿ ಯುವ ಕಾಂಗ್ರೆಸ್
ದೇಶದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಯುವಕರಿಗೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವ ಮುಖಾಂತರ ನಿರುದ್ಯೋಗ ನಿರ್ಮೂಲನೆ ಮಾಡುತ್ತೇನೆ ಎಂದು ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಈಗಾಗಲೇ ಏಳು ವರ್ಷಗಳ ಅಧಿಕಾರ ನಡೆಸಿ ಯುವಕರಿಗೆ ಯಾವುದೇ ಉದ್ಯೋಗದ ಭರವಸೆಗಳನ್ನು ನೀಡುತ್ತಿರುವ ಉದ್ಯೋಗಗಳನ್ನು ಭರ್ತಿ ಮಾಡದೆ ಯುವಕರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ
ಇಂದು ಹೊನ್ನಾಳಿ ಯುವ ಕಾಂಗ್ರೆಸ್ ವತಿಯಿಂದ ಟಿಬಿ ಸರ್ಕಲ್ ಇಂದ ಹೊನ್ನಾಳಿ ಬಸ್ಟಾಂಡ್ ವರೆಗೂ ಪಾದಯಾತ್ರೆ ಮುಖಾಂತರ ಪ್ರತಿಭಟನೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಪದವಿ ಪೂರೈಸಿದ ವಿದ್ಯಾರ್ಥಿಗಳು ಪಕೋಡ ಹಣ್ಣು ತರಕಾರಿ ಹೂವು ಮಾರಾಟ ಮಾಡುವ ಅಣಕು ಪ್ರದರ್ಶನದ ಮೂಲಕ ಯುವಕರ ವಿರೋಧಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಲಾಯಿತು.
ಪ್ರಧಾನಿ ನರೇಂದ್ರ ಮೋದಿಗೆ ನಿರುದ್ಯೋಗದ ದಿನಾಚರಣೆಯ ಶುಭಾಶಯಗಳು ಕೋರುತ್ತಾ ಈಗಾಗಲೇ ಯುವಕರಿಗೆ ಚುನಾವಣೆ ಸಂದರ್ಭದಲ್ಲಿ ಮಂಕುಬೂದಿ ಹಚ್ಚಿ ಅಧಿಕಾರಕ್ಕೆ ಬಂದ ನೀವು ಯುವಕರಿಗೆ ಉದ್ಯೋಗ ನೀಡುವುದನ್ನು ಬಿಟ್ಟು ಕೋಮುಭಾವನೆಗಳ ವಿಚಾರವಾಗಿ ಯುವಕರನ್ನು ದಾರಿ ತಪ್ಪಿಸಿ ದೇಶದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಸರಿಸುಮಾರು ಶೇಕಡ ಹತ್ತರಷ್ಟು ಏರಿಕೆ ಮಾಡುತ್ತಾ
ದೇಶದ ಯುವಕರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಹೊರಟರೆ ಅಲ್ಲಿಯೂ ಸಹ ಸರ್ಕಾರ ಯಾವುದೇ ಯೋಜನೆಗಳನ್ನು ರೂಪಿಸಿದೆ , ಸರ್ಕಾರವನ್ನು ಪ್ರಶ್ನೆ ಮಾಡಿದೆವು ಜಿಲ್ಲಾ ಯುವ ಕಾಂಗ್ರೆಸ್ ನ ಅಧ್ಯಕ್ಷರಾದ ನಿಖಿಲ್ ಕೊಂಡಜ್ಜಿ,, ಜಿಲ್ಲಾ ಯೂತ್ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಹೆಚ್ ಎ ರಂಜಿತ್, ದಾವಣಗೆರೆ ಕಾರ್ಯದರ್ಶಿಗಳಾದ ಭಾಷಾ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಅಶೋಕ್ ಸ್ವರೂಪ್ ಪವನ್ ಹರೀಶ್ ವಾಮದೇವ ಪ್ರಧಾನ ಕಾರ್ಯದರ್ಶಿಯಾದ ಉನ್ನಿಸ್ ಬಾಷಾ ನಿರಂಜನ್ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.