ಈ ದಿನ ಹೊನ್ನಾಳಿ ತಾಲೂಕು ಕುಲಂಬಿ ಗ್ರಾಮದಲ್ಲಿ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮ, ಪೋಷಣ ಮಾಸ ಅಭಿಯಾನ,ಪ್ರಧಾನಮಂತ್ರಿ ಮಾತೃ ವಂದನಾ ಸಪ್ತಾಹ ಕಾರ್ಯಕ್ರಮ,ಹಾಗೂ ಆಯುಷ್ ಬಾಲಸಂಜೀವಿನಿ ಕಾರ್ಯಕ್ರಮದಡಿಯಲ್ಲಿ 2ರಿಂದ 6 ವರ್ಷದ ಒಳಗಿನ ತೀವ್ರ ಅಪೌಷ್ಟಿಕ ಮತ್ತು ಸಾಧಾರಣ ಅಪೌಷ್ಟಿಕ ಮಕ್ಕಳಿಗೆ ಆರೋಗ್ಯ ತಪಾಸಣೆ ಹಾಗೂ ರೋಗ ನಿರೋಧಕ ಔಷಧಿಗಳ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ, ಆರು ತಿಂಗಳು ತುಂಬಿದ ಮಕ್ಕಳಿಗೆ ಅನ್ನ ಪ್ರಾಶನ ಕಾರ್ಯಕ್ರಮ,ವಿವಿಧ ಬಗೆಯ ಪೌಷ್ಟಿಕ ಆಹಾರ ಪ್ರದರ್ಶನ ಕಾರ್ಯಕ್ರಮ,ಬಾಲ ಗ್ರಂಥಾಲಯ ಸ್ಥಾಪನೆ,ಆಯುಷ್ ಇಲಾಖೆಯ ಕುಷ್ಮಾಂಡ ರಸಾಯನ ಮತ್ತು ಅರವಿಂದಾಸವ ವಿತರಣಾ ಕಾರ್ಯಕ್ರಮ,ಸ್ಪಿರುಲಿನಾ ಗ್ರನುಯಲ್ಸ್ ಮತ್ತು ಚಿಕ್ಕಿ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದ
ಅಧ್ಯಕ್ಷತೆಯನ್ನು ಕುಲಂಬಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಶಾರದಮ್ಮ ವಹಿಸಿಕೊಂಡಿದ್ದರು ಉದ್ಘಾಟನೆಯನ್ನು ತಾಲೂಕ ದಂಡಾಧಿಕಾರಿಗಳು ಹಾಗೂ ತಾಸಿಲ್ದಾರ್ ಆಗಿರುವಂತಹ ಬಸನಗೌಡ ಕೋಟೂರ್ ಅವರು ವಹಿಸಿಕೊಂಡಿದ್ದರು ಮುಖ್ಯ ಅತಿಥಿಗಳಾಗಿ ಶ್ರೀ ವಿಜಯಕುಮಾರ್ ಕೆ ಹೆಚ್ ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದಾವಣಗೆರೆ ಅವರು ವಹಿಸಿಕೊಂಡಿದ್ದರು.ಅತಿಥಿಗಳಾಗಿ ಶ್ರೀ ರಾಮ ಬೋವಿ ತಾಲೂಕ ಪಂಚಾಯತ್
ಹೊನ್ನಾಳಿ ಮತ್ತು ನ್ಯಾಮತಿ ಕಾರ್ಯನಿರ್ವಾಹಕ ಅಧಿಕಾರಿಗಳು ಶ್ರೀ ರುದ್ರಪ್ಪ ಅಕ್ಷರದಾಸೋಹ ಕಾರ್ಯಕ್ರಮದ ಉಪನಿರ್ದೇಶಕರು ಶ್ರೀ ಮೃತ್ಯುಂಜಯ ಉಪ ನಿರ್ದೇಶಕರು ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ ಶ್ರೀ ಡಾ!! ಚಂದ್ರಕಾಂತ್ ಆಯುಷ್ ಇಲಾಖೆ ಶ್ರೀಮತಿ ಡಾ!!ಪ್ರೀತಿ ಆಯುಷ್ ಇಲಾಖೆ ಡಾ!! ಸೌಭಾಗ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೂಲಂಬಿ ವ್ಯಾಪ್ತಿಯ ಐದು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಅಂಗನವಾಡಿ ಕಾರ್ಯಕರ್ತೆ ಸಹಾಯಕಿ ಮೇಲ್ವಿಚಾರಕಿಯರು ಆಶಾ ಕಾರ್ಯಕರ್ತೆಯರು ಗ್ರಾಮಸ್ಥರು ತಾಯಂದಿರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಮೇಲ್ವಿಚಾರಕಿ ಗೀತಾ ಕೆ ಟಿ ಸ್ವಾಗತಿಸಿದರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಯುತ ಮಹಾಂತಸ್ವಾಮಿ ಪೂಜಾರ ಅವರು ಪ್ರಾಸ್ತಾವಿಕ ನುಡಿಯನ್ನು ಹೇಳಿದರು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ವಸಂತಮ್ಮ ಕಾರ್ಯಕ್ರಮವನ್ನು ವಂದಿಸಿದರು ಕೂಲಂಬಿ ರುತ್ತ ಮೇಲ್ವಿಚಾರಕಿಯಾಗಿ ಶ್ರೀಮತಿ ಸುಜಾತಾ ಅವರು ಕಾರ್ಯಕ್ರಮ ನಿರೂಪಿಸಿದರು ಕಾರ್ಯಕ್ರಮದಲ್ಲಿ ರಂಗೋಲಿ ವಿವಿಧ ದವಸದಾನ್ಯ ಆಹಾರಧಾನ್ಯ ಸೊಪ್ಪುತರಕಾರಿಗಳು ಎಲ್ಲರ ಕಣ್ಮನ ಸೆಳೆದವು.