ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಪ್ರಸಕ್ತ ಸಾಲಿನ
ವಿಶೇಷ ಘಟಕ, ಗಿರಿಜನ ಉಪಯೋಜನೆಯಡಿ ಜಿಲ್ಲಾ ಮಟ್ಟದಲ್ಲಿ
ಅನುಸೂಚಿತ ಜಾತಿ ಮತ್ತು ಪಂಗಡದ ದೌರ್ಜನ್ಯ
ಅಧಿನಿಯಮದಲ್ಲಿರುವ ಅಸ್ಪøಶ್ಯತೆ ನಿವಾರಣೆ ವಿಷಯವನ್ನು ಬೀದಿ
ನಾಟಕಗಳ ಮೂಲಕ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ತಿಳಿಯಪಡಿಸಲು
ಅಗತ್ಯ ಕಾರ್ಯಕ್ರಮವನ್ನು ರೂಪಿಸಿಕೊಳ್ಳಲಾಗಿದ್ದು, ಜಿಲ್ಲೆಯ
ನುರಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಲೇಖಕರನ್ನು
ಆಯ್ಕೆ ಮಾಡಿ ಅವರಿಗೆ ಅಗತ್ಯ ತರಬೇತಿ ನೀಡಿ, ಅವರಿಂದ ಬೀದಿ ನಾಟಕದ
ಸ್ಕ್ರೀಪ್ಟ್ಗಳನ್ನು ರಚಿಸಬೇಕಿದೆ. ಹೀಗಾಗಿ ಅರ್ಹ ಲೇಖಕರಿಂದ ಅರ್ಜಿ
ಆಹ್ವಾನಿಸಲಾಗಿದೆ.
ಆಸಕ್ತ ಅರ್ಹ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ
ಲೇಖಕರು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಅಕ್ಟೋಬರ್ 05
ಕೊನೆಯ ದಿನಾಂಕವಾಗಿರುತ್ತದೆ.
ಅರ್ಜಿ ಸಲ್ಲಿಸುವ ಲೇಖಕರು ಕಡ್ಡಾಯವಾಗಿ ಪರಿಶಿಷ್ಟ ಜಾತಿ ಮತ್ತು
ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು. ಲೇಖಕರು ಇತ್ತೀಚಿನ
ಆರ್ಡಿ ಸಂಖ್ಯೆ ಹೊಂದಿರುವ ಜಾತಿ ಪ್ರಮಾಣ ಪತ್ರವನ್ನು ಅರ್ಜಿಯೊಂದಿಗೆ
ಸಲ್ಲಿಸತಕ್ಕದ್ದು. ಅರ್ಜಿದಾರ ಲೇಖಕರು ಕನಿಷ್ಟ 1 ಕಥಾಸಂಕಲನ,
ಕವನ ಸಂಕಲನ, ನಾಟಕಗಳು, ಇತರೆ ಸಾಹಿತ್ಯದ ಲೇಖಕರಾಗಿ,
ಪುಸ್ತಕಗಳನ್ನು ಸ್ವಂತ ಪ್ರಕಾಶನ ಅಥವಾ ಬೇರೆ
ಪ್ರಕಾಶನಗಳಿಂದ ಪ್ರಕಟಿಸಿದವರಿಗೆ ಆದ್ಯತೆ ನೀಡಲಾಗುವುದು.ಅರ್ಜಿ
ಸಲ್ಲಿಸಿದ ಲೇಖಕರ ಆಯ್ಕೆಯನ್ನು ಇಲಾಖೆಯ ಜಿಲ್ಲಾ ಮಟ್ಟದ ಸಮಿತಿ
ಸಭೆಯಲ್ಲಿ ಆಯ್ಕೆ ಮಾಡಲಾಗುವುದು. ಈ ವಿಷಯದಲ್ಲಿ ಸಮಿತಿಯ
ನಿರ್ಧಾರವು ಅಂತಿಮವಾಗಿರುತ್ತದೆ. ಆಯ್ಕೆಯಾದ 5 ಜನ ಲೇಖಕರು
ಬೀದಿ ನಾಟಕದ ಸ್ಕ್ರೀಪ್ಟ್ ಅನ್ನು ಒಂದು ವಾರದ ಕಾಲಮಿತಿಯೊಳಗೆ
ಸಿದ್ಧಪಡಿಸುವ ಷರತ್ತಿಗೆ ಒಳಪಟ್ಟಿರುತ್ತಾರೆ. ಆಯ್ಕೆಯಾದ 5 ಜನ
ಲೇಖಕರಿಗೆ ತಲಾ ರೂ. 5 ಸಾವಿರಗಳ ಗೌರವ ಸಂಭಾವನೆ
ಪಾವತಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ. 08192-234849 ಗೆ ಸಂಪರ್ಕಿಸಬಹುದು
ಎಂದು ಕನ್ನಡ ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ
ರವಿಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.