75 ನೇ ಸ್ವಾತಂತ್ರ್ಯ ದಿನದ ಅಮೃತಮಹೋತ್ಸವ ಅಂಗವಾಗಿ ಸರ್ಕಾರಿ 100 ಹಾಸಿಗೆಯ ಸಾರ್ವಜನಿಕ ಆಸ್ಪತ್ರೆ ಹೊನ್ನಾಳಿಯಲ್ಲಿ ದಿನಾಂಕ 21 /9/ 2021ರ ಮಂಗಳವಾರ ಬೆಳಗ್ಗೆ 10 ಗಂಟೆಗೆ ಸರಿಯಾಗಿ” ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು”
ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ದಾವಣಗೆರೆ ,ರಕ್ತನಿಧಿ ಕೇಂದ್ರ ಸಿ ಜಿ ಆಸ್ಪತ್ರೆ ಮತ್ತು ರೆಡ್ ಕ್ರಾಸ್ ಸೊಸೈಟಿ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದೆ.
ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಆಸಕ್ತಿವುಳ್ಳ ರಕ್ತದಾನ ಮಾಡುವ ಯುವಕರು ಮತ್ತು ಯುವತಿಯರು ಸಾರ್ವಜನಿಕರು ಹಾಗೂ ಅವಳಿ ತಾಲೂಕಿನ ಸರಕಾರಿ ಮತ್ತು ಸರ್ಕಾರೇತರ ಅಧಿಕಾರಿ ವರ್ಗದವರು, ಹಾಗೂ ಸಂಘ-ಸಂಸ್ಥೆಯವರು ಬಂದು ರಕ್ತದಾನ ಶಿಬಿರದಲ್ಲಿ ಭಾಗಿಯಾಗಿ, ಸ್ವಯಂ ಪ್ರೇರಿತ ರಕ್ತದಾನ ಮಾಡಲಿಕ್ಕೆ ಬರುವವರೆಗೆ
,ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹ ಬರುವ ಸಾರ್ವಜನಿಕರಿಗೆ ಮನವಿಯ ಜೊತೆಗೆ ಹೃದಯ ಪೂರ್ವಕವಾಗಿ ಸ್ವಾಗತವನ್ನು ಕೋರಲಾಗಿದೆ. ಎಂದು ಎ ಬಿ ಸಿ ನ್ಯೂಸ್ ಆನ್ಲೈನ್ ಚಾನಲ್ ಅವರಿಗೆ ತಿಳಿಸಿದರು.
;- ರಕ್ತ ದಾನದ ಮಹತ್ವ;-
ರಕ್ತಕ್ಕೆ ಪರ್ಯಾಯವಾದ ವಸ್ತುವಿಲ್ಲ.
ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ.
[1] ರಕ್ತದಾನ ಮಾಡುವುದು ಪ್ರತೀ ಆರೋಗ್ಯವಂತ ವ್ಯಕ್ತಿಯ ಕರ್ತವ್ಯವೆಂದು ಭಾವಿಸಿ,
ಆಗಾಗ ರಕ್ತದಾನ ಮಾಡಿದಲ್ಲಿ ಮಾತ್ರ ರೋಗಗ್ರಸ್ಥರು ಮತ್ತು ಗಾಯಗೊಂಡವರನ್ನು ಬದುಕಿಸಲು ಸಾಧ್ಯ.
[ 2] ರಕ್ತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ, ದಾನಿಯ ದೇಹದಲ್ಲಿ ರಕ್ತದ ಉತ್ಪತ್ತಿ ಪ್ರಾರಂಭವಾಗಿ 24 ಘಂಟೆಯ ಒಳಗಾಗಿ ದಾನ ಮಾಡಿದ ಪ್ರಮಾಣದ, ರಕ್ತ ದೇಹದಲ್ಲಿ ಪುನರುತ್ಪತ್ತಿಯಾಗುತ್ತದೆ.
[3] ಒಂದೆರಡು ವಾರಗಳಲ್ಲಿ ರಕ್ತದ ಎಲ್ಲಾ ಅಂಶಗಳು ದಾನಿಯ
ರಕ್ತದಲ್ಲಿ ಸಂಪೂರ್ಣವಾಗಿ ತುಂಬಿಕೊಳ್ಳುತ್ತದೆ. * ರಕ್ತದಾನ ಮಾಡುವಾಗ, ಒಂದು ಚುಚ್ಚು ಮದ್ದು
ತೆಗೆದುಕೊಳ್ಳುವಾಗ ಆಗುವುದಿಲ್ಲ. ಆಗುವುದಕ್ಕಿಂತ ಹೆಚ್ಚು ನೋವು
ರಕ್ತದಾನ ಮಾಡಲು ಮತ್ತು ಸುಧಾರಿಸಿಕೊಳ್ಳಲು ಒಟ್ಟು ಸೇರಿ 20 ನಿಮಿಷಕ್ಕೂ ಹೆಚ್ಚಿನ ಸಮಯ
ಬೇಕಾಗಿಲ್ಲ.
;- ಯಾರು ರಕ್ತದಾನ ಮಾಡಬಹುದು ;-?
[1] ಹೆಣ್ಣು ಗಂಡೆಂಬ ಭೇದವಿಲ್ಲದೇ 18 ರಿಂದ 60 ವರ್ಷದ ಒಳಗಿರುವ ಎಲ್ಲ ಆರೋಗ್ಯವಂತ ವ್ಯಕ್ತಿಗಳು
ರಕ್ತದಾನ ಮಾಡಬಹುದು.
[ 2] ಗಂಡಸರು ಮೂರು ತಿಂಗಳಿಗೆ ಒಮ್ಮೆ ಮತ್ತು ಹೆಂಗಸರು 4 ತಿಂಗಳಿಗೆ ಒಮ್ಮೆ, ರಕ್ತದಾನ ಮಾಡಬಹುದು.
[ 3]ದಾನಿಯ ದೇಹದ ತೂಕ 45 ಕೆ.ಜಿ.ಗಿಂತ ಹೆಚ್ಚಿರಬೇಕು. ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 12.5
ಗ್ರಾಂ. ಗಿಂತ ಕಡಿಮೆ ಇರಬಾರದು.
[4] ಸಿಸ್ಟೋಲಿಕ್ ರಕ್ತದೊತ್ತಡವು 100 ರಿಂದ 140 ಇದ್ದು, ಡಯಸ್ಟೋಲಿಕ್ ಒತ್ತಡವು 70 ರಿಂದ
100 ಇರುವವರು ರಕ್ತದಾನ ಮಾಡಬಹುದು.
ರಕ್ತದಾನ ಮಾಡುವುದರಿಂದ ದಾನಿಗಳಿಗೆ ಆಗುವ ಪ್ರಯೋಜನಗಳು :
[ 1] 18 ವರ್ಷದ ತುಂಬಿದ ಕೂಡಲೇ ರಕ್ತದಾನಿ ಆಗುವರು.
[2] ರಕ್ತದಾನ ಮಾಡುವುದರಿಂದ ದಾನಿಯ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ಯಾಗುತ್ತದೆ.
;-ರಕ್ತದಾನ ಮಾಡುವುದರಿಂದ ಆಗುವ ಅನುಕೂಲ;-
[ 1] ದೇಹದಲ್ಲಿ ಹೊಸ ರಕ್ತ ಚಲನೆಯಿಂದ ಕಾರ್ಯತ್ಪರತೆ, ಜ್ಞಾಪಕಶಕ್ತಿ ವೃದ್ಧಿಯಾಗುತ್ತದೆ.
[ 2] ರಕ್ತದಲ್ಲಿ ಕೊಬ್ಬಿನಾಂಶ ಕಡಿಮೆ ಮಾಡಲು ಸಹಾಯವಾಗುತ್ತದೆ.
[ 3] ಹೃದಯಾಘಾತವನ್ನು ಶೇ. 80ಕ್ಕಿಂತಲೂ ಜಾಸ್ತಿ ತಡೆಯಲು ಸಹಾಯವಾಗುತ್ತದೆ.
[ 4] ರಕ್ತದ ಒತ್ತಡ, ಇತರೆ ಕೆಲವು ರೋಗಗಳನ್ನು ತಡೆಗಟ್ಟಲು ಸಹಾಯವಾಗುತ್ತದೆ.
;- ರಕ್ತದಾನದ ವಿಶೇಷತೆ;-
ರಕ್ತದಾನ ಮಹಾದಾನ.
ಒಂದು ಸಾರಿ ರಕ್ತದಾನ ಮಾಡಿದರೆ 3 ಜೀವ ಉಳಿಸಬಹುದು.
ರಕ್ತದಾನ ಮಾಡಿ ಜೀವ ಉಳಿಸಿ.
ರಕ್ತದಾನ ಶ್ರೇಷ್ಠ ದಾನ .
ರಕ್ತವನ್ನು ಕೃತಕವಾಗಿ ತಯಾರು ಮಾಡಲು ಸಾಧ್ಯವಿಲ್ಲ
.ಬನ್ನಿ ಎಲ್ಲರೂ ಕೈ ಜೋಡಿಸಿ.
ನೀವು ನೀಡಿದ ರಕ್ತದಿಂದ ನೂರಾರು ಜೀವವು ಉಳಿಸೋಣ.
ವಂದನೆಗಳೊಂದಿಗೆ
ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹೊನ್ನಾಳಿ