ದಾವಣಗೆರೆ ಜಿಲ್ಲೆ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳಲ್ಲಿ ಸಾರ್ವಜನಿಕರಿಗೆ ಸರ್ಕಾರ ನೀಡುವ ಅಂತೋದಯ ಬಿಪಿಎಲ್ ಕಾರ್ಡ್ಗಳ ವಾರಸುದಾರರು 1.20.000 ರೂಗಳು ಹೆಚ್ಚಿಗೆ ಆದಾಯ ಇರುವ ಬಗ್ಗೆ ಈ ಹಿಂದೆ ಈಗಾಗಲೇ ತಂತ್ರಾಂಶದಲ್ಲಿ ನಮೂದಾಗಿದ್ದ ಕಾರಣ ಎಪಿಎಲ್ ಕಾರ್ಡುಗಳಾಗಿ ಪರಿವರ್ತನೆ ಗೊಂಡಿರುವುದರಿಂದ ಆದಾಯ ಪ್ರಮಾಣ ಪತ್ರ ವಿತರಿಸುವುದು, ಇದು ನಮ್ಮ ಆಹಾರ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ .ಆದ್ದರಿಂದ ಗ್ರಾಮಲೆಕ್ಕಾಧಿಕಾರಿಗಳು ಮತ್ತು ರಾಜಸ್ವ ನಿರೀಕ್ಷಕರು OTC ಯೋಜನೆ ಅಡಿಯಲ್ಲಿ ಆದಾಯ ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ ಕಣ್ಣು ತಪ್ಪಿನಿಂದ ಆಗಿದೆ, ಆದ ಕಾರಣ ಸಾರ್ವಜನಿಕರು ಗೊಂದಲಕ್ಕೆ ಒಳಗಾಗಬೇಡಿ .
ಅವಳಿ ತಾಲೂಕುಗಳ ಸಾರ್ವಜನಿಕರು ಆಹಾರ ಇಲಾಖೆಗೆ ಬಂದು ಅಧಿಕಾರಿಗಳ ಸೂಚನೆ ಮತ್ತು ಸಲಹೆಗಳನ್ನು ಪಡೆದು ನೀವುಗಳು ಪಾಲಿಸ ಬಹುದಾಗಿದೆ ಎಂದು ಹೊನ್ನಾಳಿ ಆಹಾರ ಇಲಾಖೆಯ ಶಿರಸ್ತೇದಾರ್ ರಾದ ಶ್ರೀಮತಿ ಕೆ ಪಿ ಸುನೀತಾ ರವರು ತಿಳಿಸಿರುತ್ತಾರೆ.
ಈ ಸಂದರ್ಭದಲ್ಲಿ ಹೊನ್ನಾಳಿ ಆಹಾರ ಇಲಾಖೆಯ ಶಿರಸ್ತೆದಾರ ರಾದ ಶ್ರೀಮತಿ ಕೆ ಪಿ ಸುನೀತಾ ರವರು ಮತ್ತು ಫುಡ್ ಇನ್ಸ್ಪೆಕ್ಟರ್ ಗಳಾದ ನಾಗರಾಜ್ ಗಂಜಿ ನಳ್ಳಿ ,ಮಂಜುನಾಥ್ ಹೊಳೆ ಹರಳಹಳ್ಳಿರವರು ಸಹ ಇದ್ದರು.