ತಿಪಟೂರು ಪಕ್ಷದಲ್ಲಿ ಹಿಂದುಳಿದ ವರ್ಗಗಳ ವಿಭಾಗವು ಅತಿದೊಡ್ಡ ವಿಭಾಗವಾಗಿದ್ದು, ಮುಂದಿನ ಚುನಾವಣೆ ಗಮನದಲ್ಲಿಟ್ಟುಕೊಂಡು ಈ ವಿಭಾಗಕ್ಕೆ ಹೆಚ್ಚಿನ ಗಮನ ನೀಡಿ ಸಮಾಜಗಳನ್ನು ಒಗ್ಗೂಡಿಸಲಾಗುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ್‌ ತಿಳಿಸಿದರು.

ಜನಮಾನಸದಲ್ಲಿ ಜಾತಿ ವ್ಯವಸ್ಥೆ ಅಷ್ಟಾಗಿ ಬೇರೂರಿಲ್ಲ, ರಾಜಕೀಯ ಲಾಭಕ್ಕಾಗಿ ಜಾತಿ, ಜನಾಂಗದ ನಡೆವೆ ವೈಮನಸ್ಸು ಉಂಟಾಗುವಂತೆ ಮಾಡಲಾಗುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ರಾಜಕೀಯ ವ್ಯವಸ್ಥೆಯಲ್ಲಿ ಜಾತಿ ವ್ಯವಸ್ಥೆಯೇ ಇರಲಿಲ್ಲ, ಸಂಘ ಪರಿವಾರದವರು ರಾಜಕೀಯಕ್ಕೆ ಬಂದ ನಂತರ ಸಮಾಜದಲ್ಲಿ ಜಾತಿ ಬೀಜವನ್ನು ಭಿತ್ತಿ ಕೋಮು ಗಲಭೆಗಳನ್ನು ಸೃಷ್ಟಿಸಿ ಒಂದಾಗಿದ್ದ ಸಮಾಜದಲ್ಲಿ ಜಾತಿ ಜಾತಿಗಳ ನಡುವೆ ಹಾಗೂ ಸಮುದಾಯ ಸಮುದಾಯಗಳ ನಡುವೆ ವಿಷ ಬೀಜ ಬಿತ್ತಲಾಗಿದೆ ಎಂದರು.

ನಗರದ ಕೆ.ಆರ್.ಬಡಾವಣೆಯ ಮಾಜಿ ಶಾಸಕ ಕೆ.ಷಡಕ್ಷರಿ ಗೃಹ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದುಳಿದ ಸಮಾಜದ ಜನರಿಗೆ ಪಕ್ಷದ ಬೇರೆ ಬೇರೆ ವಿಭಾಗಗಳಲ್ಲಿ ಶೇ.52 ಹುದ್ದೆಗಳನ್ನು ಲಕ್ಷ್ಮೀನಾರಾಯಣ್ ಸುಜಿತ್, ಮಾಜಿ ತಾಪಂ ಅಧ್ಯಕ್ಷರಾದ ಎನ್. ನೀಡಬೇಕೆಂದು ರಾಷ್ಟ್ರ ಹಾಗೂ ರಾಜ್ಯ ನಾಯಕರಿಂದ ವಿಶೇಷ ಆದೇಶ ತರಲಾಗಿದೆ. ಅದರಂತೆ ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಲ್ಲಿಯೂ ವಿವಿಧ ವಿಭಾಗಗಳಲ್ಲಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಪೂರಕವಾದ ವಾತಾವರಣವಿದೆ, ನಾವೆಲ್ಲರೂ ಕಾರ್ಯಪ್ರವೃತ್ತರಾದರೆ ಅಧಿಕಾರಕ್ಕೆ ಬರುವುದು ನಿಶ್ಚಿತವೆಂದರು.

ಮಾಜಿ ಶಾಸಕ ಕೆ.ಷಡಕ್ಷರಿ ಮಾತನಾಡಿ, ರಾಜಕೀಯ ಉದ್ದೇಶದಿಂದ ಜಾತಿ ವ್ಯವಸ್ಥೆ ಸಧೃಡವಾಗಿದೆಯೇ ಹೊರತು,

ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಗಣೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಂತರಾಜು, ನಗರಾಧ್ಯಕ್ಷ ಟಿ.ಎನ್.ಪ್ರಕಾಶ್, ಕೆಪಿಸಿಸಿ ಸದಸ್ಯ ಯೋಗೇಶ್, ಹಿಂದುಳಿದ ವರ್ಗದ ತಾ ಅಧ್ಯಕ್ಷ ಪ್ರಕಾಶ್‌ಯಾದವ್, ನಗರಾಧ್ಯಕ್ಷ ಎಂ. ಸುರೇಶ್, ಶಿವಸ್ವಾಮಿ, ಮಾಜಿ ಉಪಾಧ್ಯಕ್ಷ ಶಂಕರ್‌, ಸದಸ್ಯ ರವಿಕುಮಾರ್, ನಗರಸಭೆ ಸದಸ್ಯರಾದ ಯೋಗೇಶ್, ಮಹೇಶ್, ಎಪಿಎಂಸಿ ಸದಸ್ಯ ಬಜಗೂರು ಮಂಜುನಾಥ, ಮಾಜಿ ಸದಸ್ಯಕಾಂತರಾಜು, ಮುಖಂಡರಾದ ಯೋಗಾನಂದ್, ಲೋಕೇಶ್, ತಿಲಕ್, ಬಸವರಾಜು, ನರಸಿಂಹಯ್ಯ, ರವಿ, ಲೋಕನಾಥ್ ಸಿಂಗ್, ಭರತ್‌ ಮತ್ತು ಸುನಿಲ್ ಇದ್ದರು. ಪಕ್ಷದ ವಿವಿಧ ವಿಭಾಗಗಳಿಗೆ ಪದಾಧಿಕಾರಿಗಳಗಿ ನೇಮಕಗೊಂಡವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಬಿಜೆಪಿ ತೊರೆದ 30 ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡರು.

Leave a Reply

Your email address will not be published. Required fields are marked *