ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟದ 18ನೇ ವಾರ್ಷಿಕ ಸಾಮಾನ್ಯ
ಸಭೆ ಅಕ್ಟೋಬರ್ 03 ರಂದು ಮಧ್ಯಾಹ್ನ 12 ಗಂಟೆಗೆ ಒಕ್ಕೂಟದ
ಅಧ್ಯಕ್ಷ ಎನ್.ಎ.ಮುರುಗೇಶ್ ಅವರ ಅಧ್ಯಕ್ಷತೆಯಲ್ಲಿ ಎಂ.ಸಿ.ಸಿ -ಎ
ಬ್ಲಾಕ್‍ನಲ್ಲಿರುವ ಕಲಾಪ್ರಕಾಶ ವೃಂದ ದಾವಣಗೆರೆ-ಹರಿಹರ ಅರ್ಬನ್
ಸಹಕಾರ ಬ್ಯಾಂಕ್ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ.
ಸಹಕಾರ ಒಕ್ಕೂಟದ ಸದಸ್ಯ ಸಹಕಾರ ಸಂಘಗಳು ತಮ್ಮ
ಸಂಘದ ಅಥವಾ ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರಲ್ಲಿ ಒಬ್ಬ
ಪ್ರತಿನಿಧಿಯನ್ನು ಮಾತ್ರ ಆಯ್ಕೆ ಮಾಡಿ, ಸಂಘದ ಠರಾವು
ಪ್ರತಿಯಲ್ಲಿ ಪ್ರತಿನಿಧಿಯ ಸಹಿಯೊಂದಿಗೆ ಸಾಮಾನ್ಯ ಸಭೆಗೆ
ಹಾಜರಾಗುವಂತೆ ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟದ ಮುಖ್ಯ
ಕಾರ್ಯನಿರ್ವಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.