ನ್ಯಾಮತಿ ತಾಲೂಕು ಪಲನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಇಂದು ಪ್ರಗತಿ ಪರಿಶೀಲನಾ ಸಭೆಯನ್ನು ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ನೇತೃತ್ವದಲ್ಲಿ ನಡೆಯಿತು.
ಈ ಸಭೆಗೆ ತಾಲೂಕಿನ 24 ಇಲಾಖೆಯ ಅಧಿಕಾರಿಗಳಿಗೆ ಪ ಂಚಾಯಿತಿಯಿಂದ ಆಹ್ವಾನ ಕೊಟ್ಟಿದ್ದರೂ ಸಹ ಅದರಲ್ಲಿ 6 ಇಲಾಖೆಯವರು ಮಾತ್ರ ಬಂದದ್ದು ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿತ್ತು .
ನಂತರ ಈ ಸಭೆ ಪ್ರಾರಂಭವಾಯಿತು ಬಂದಂತಹ ಅಧಿಕಾರಿಗಳ ಜೊತೆ ಚರ್ಚೆಗೆ ಪ್ರಾರಂಭಮಾಡಿ ಮಾತನಾಡಿದ ಮುಸ್ಸೇನಾಳ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಕಾಶ್ ನಾಯಕ್ ರವರು ಶಿಕ್ಷಕರಿಗೆ ಪ್ರಶ್ನೆ ಕೇಳಿದಾಗ ಶಿಕ್ಷಕರು ನಮ್ಮಗಂಜೇನಹಳ್ಳಿ ಗ್ರಾಮದ ಶಾಲೆ ಯಲ್ಲಿ ಮುಖ್ಯ ಶಿಕ್ಷಕರ ಕೊರತೆಯಿದೆ ಇದೆ ಆ ಹುದ್ದೆಗೆ ಮುಖ್ಯ ಶಿಕ್ಷಕರನ್ನು ತರುವಂತಾಗಬೇಕು ಎಂದು ಹೇಳಿದರು.
ಮುಸ್ಸೇನಾಳಗ್ರಾಮದಲ್ಲಿ ಇರುವ ಶಾಲೆಯ ಶಿಕ್ಷಕರು ಎದ್ದುನಿಂತು ಪಿಡಿಒ ರವರಿಗೆ ಪ್ರಶ್ನೆ ಕೇಳಿದರು. ಅದೇನೆಂದರೆ ಈ ಗ್ರಾಮದಲ್ಲಿ ಶಾಲೆ ಬಹಳ ಸುಂದರವಾಗಿದೆ ಶಾಲೆಯ ಅವಧಿ ಮುಗಿದ ನಂತರ ರಾತ್ರಿ ಅವಧಿಯಲ್ಲಿ ಆ ಶಾಲೆಯ ಆವರಣದಲ್ಲಿ ಕೆಟ್ಟ ಚಟುವಟಿಕೆಗಳು ನಡೆಯುತ್ತದೆ ಅದನ್ನು ನಿಲ್ಲಿಸುವಂಥ ಆಗಬೇಕು ಎಂದು ಪಿಡಿಓ ರವರಿಗೆ ಹೇಳಿದಾಗ ಪೊಲೀಸ್ ಇಲಾಖೆಯವರಿಗೆ ಗಮನಕ್ಕೆ ತರುತ್ತೇವೆ ಎಂದು ಹೇಳಿದರು .ಇದಕ್ಕೆ ಉತ್ತರವಾಗಿ ಪ್ರಕಾಶ ನಾ ಯ್ಕರವರು ಪಿಡಿಓರವರಿಗೆ ಧ್ವನಿಗೂಡಿಸಿದರು.
ಪ್ರಕಾಶ್ ನಾಯಕರು ಮತ್ತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸೂಪರ್ ವೈಸರ ರವರಿಗೆ ನೀವು ನಿಮ್ಮ ಇಲಾಖೆ ಯ ಬಗ್ಗೆ ಮಾಹಿತಿ ಕೊಡಿ ಎಂದು ಪ್ರಶ್ನೆ ಕೇಳಿದಾಗ ಸೂಪರ್ವೈಸರ್ ಆದ ಕೆ ಟಿ ಗೀತಾರವರು ಮಾತನಾಡಿ ತಮ್ಮ ಇಲಾಖೆಗೆ ಸಂಬಂಧಪಟ್ಟಂತೆ ಯೋಜನೆಗಳು ಮತ್ತು ಗರ್ಭಿಣಿಯರಿಗೆ ಬಾಣಂತಿಯರಿಗೆ ಸರ್ಕಾರದಿಂದ ಏನೇನು ಸವಲತ್ತುಗಳು ಸಿಗುತ್ತವೆ ಅವನ್ನೆಲ್ಲ ಸವಿಸ್ತಾರವಾಗಿ ಹೇಳುತ್ತಾ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಕೊಡುವುದು ದರ ಜೊತೆಗೆ ಅವರ ಆರೈಕೆಗೆ 5 ಸಾವಿರ ರೂಗಳನ್ನು ಬಾಣಂತಿಯರು ಗಳಿಗೆ ಕೊಡಲಾಗುವುದು ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಇಂಜಿನಿಯರ್ ಅವರಿಗೆ ನಮ್ಮ ಗ್ರಾಮ ಪಂಚಾಯಿತಿ ಕಾಮಗಾರಿಯ ಕೆಲಸವನ್ನು ನೀವೇ ವಹಿಸಿ ಕೊಳ್ಳಬೇಕು ಎಂದು ಹೇಳಿದರು ಅದಕ್ಕೆ ಉತ್ತರವಾಗಿ ಇಂಜಿನಿಯರ್ ಅವರು ಒಪ್ಪಿದರು .
ನಮ್ಮ ಗ್ರಾಮ ಪಂಚಾಯಿತಿ ಸಂಬಂದ ಪಟ್ಟಂತೆ ಯೋಜನೆಗಳು ಏನೇ ಇದ್ದರೂ ತಕ್ಷಣ ಮಾಡಬೇಕು ಎಂದು ಕಾಂಗ್ರೆಸ್ಸಿನ ಗ್ರಾಮ ಪಂಚಾಯಿತಿ ಸದಸ್ಯರುಗಳು ಒತ್ತಾಯಿಸಿದರು .
ಎಂಜಿನಿಯರ್ ಮಾತನಾಡಿ ನನ್ನನ್ನು 7 ಗ್ರಾಮ ಪಂಚಾಯಿತಿಗೆ ನೇಮಿಸಿದ್ದಾರೆ ,ಅದಕ್ಕೆ ಒತ್ತಡವಿರುತ್ತದೆ ನಾನು ಫೋನು ಎತ್ತದಿದ್ದರೆ ಕೆಲಸ ಮುಗಿದ ನಂತರ ಫೋನು ಮಾಡುತ್ತೇನೆ ಎಂದು ತಿಳಿಸಿದರು.
ಉಪಾಧ್ಯಕ್ಷರಾದ ಗಂಜಿ ನಹಳ್ಳಿ ಪ್ರವೀಣ್ ರವರು ಪೊಲೀಸ್ ಇಲಾಖೆಯ ಚಂದ್ರಶೇಖರ್ ಅವರಿಗೆ ಪ್ರಶ್ನೆಯನ್ನು ಕೇಳಿದರು. ನಿಮ್ಮ ಬೀಟ್ಅವದಿಯಲ್ಲಿ ನಿಮ್ಮ ಕರ್ತವ್ಯ ಏನು ಅಂತಹ ಹೇಳಿ ಎಂದರು ಅದಕ್ಕೆ ಉತ್ತರವಾಗಿ ಪೊಲೀಸ್ ನಿಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಏನೇ ಸಮಸ್ಯೆಗಳಿದ್ದರೂ ಕುಳಿತುಕೊಂಡು ಹಿರಿಯರ ಮತ್ತು ಮುಖಂಡರ ನೇತೃತ್ವದಲ್ಲಿ ಸಮಸ್ಯೆ ಬಗೆಹರಿಸುವ ಕೆಲಸವನ್ನು ನಾವು ಮಾಡುತ್ತೇವೆ ಇದರ ಜೊತೆಗೆ ನಮ್ಮ ಪೊಲೀಸ್ ಇಲಾಖೆಯವರು ಜನಸ್ನೇಹಿ ಮತ್ತು 112 ಈ ನಂಬರಿಗೆ ಕರೆ ಮಾಡಿ ತಕ್ಷಣ ನಾವು ಸ್ಪಂದಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಈ ಸಭೆಯಲ್ಲಿ ಪಿಡಿಓ ನೇತೃತ್ವದಲ್ಲಿ ಎಲ್ಲಾ ಪ್ರಗತಿ ಪರಿಶೀಲನೆ ಸಭೆಯ ಬಗ್ಗೆ ಮಾಹಿತಿಯನ್ನು ಪಡೆ ದರು.
ಉಪಸ್ಥಿತಿಯಲ್ಲಿ ಅಧ್ಯಕ್ಷರಾದ ಶ್ರೀಮತಿ ಅನಿತಾ ರವರು ಉಪಾಧ್ಯಕ್ಷರಾದ ಪ್ರವೀಣ್ ಗಂಜಿಹಳ್ಳಿ ಪಿಡಿಒ ವಿಜಯಕುಮಾರ್ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಪ್ರಕಾಶ್ ನಾಯಕ್ ನಟರಾಜ ನಾಗೇಶ್ ನಾಯಕ್ ಗೋವಿಂದರಾಜ್ ಶಕುಂತಲಾಬಾಯಿ ಜಯಶ್ರೀ ಪ್ರೀತಿ ನೇತ್ರ ಇನ್ನು ಮುಂತಾದವರು ಸಹ ಭಾಗಿಯಾಗಿದ್ದರು.