ಶ್ರೀ ಸ್ನೇಹಜೀವಿ ಗೆಳಯರ ಬಳಗ ವತಿಯಿಂದ ಮೌರ್ಯ ಹೋಟೆಲ್ ಸಭಾಂಗಣದಲ್ಲಿ ಕನ್ನಡ ಬಾಷೆ ವಿಶ್ವಕ್ಕೆ ಅಮೃತ ಕಾರ್ಯಕ್ರಮ ಆಯೋಜಿಸಲಾಗಿತ್ತು .ದೀಪಾ ಬೆಳಗಿಸಿದ ಕೆ.ಪಿ.ಸಿ.ಸಿ.ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು ಕೆ.ಪಿ.ಸಿ.ಸಿ.ಕಾರ್ಯಾಧ್ಯಕ್ಷರುಗಳಾದ ರಾಮಲಿಂಗಾರೆಡ್ಡಿ ,ಈಶ್ವರ್ ಖಂಡ್ರೆ ಸಲೀಮ್ ಅಹಮದ್ಮ ಮಾಜಿ ಶಾಸಕರಾದ ನಂಜಯ್ಯ ಮಠ ಮತ್ತು ಕೆ.ಪಿ.ಸಿ.ಸಿ.ಮಹಿಳಾ ಘಟಕ ಅಧ್ಯಕ್ಷರಾದ ಪುಷ್ಪ ಅಮರ್ ನಾಥ್ ಮಾಜಿ ಮಹಾಪೌರರಾದ ರಾಮಚಂದ್ರಪ್ಪ ,ಕ.ವಿ.ಕಾ.ಮಾಜಿ ಅಧ್ಯಕ್ಷರಾದ ಮನೋಹರ್ ರವರು ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ವಿ.ಶಂಕರ್ ರವರು ಉದ್ಘಾಟನೆ ಮಾಡಿದರು .ಗಾನ ಕೋಗಿಲೆಗಳಾದ ಪಿ.ಬಿ.ಶ್ರೀನಿವಾಸ್ ರವರ 92ನೇ ಜನ್ಮ ದಿನಾಚರಣೆ ಮತ್ತು ಎಸ್.ಬಿ.ಬಾಲಸುಬ್ರಮಣ್ಯರವರ ಮೊದಲ ಪುಣ್ಯಸ್ಮರಣೆ ಅಂಗವಾಗಿ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು .
ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರುಗಳಾದ ಜಿ.ಜನಾರ್ಧನ್ ,ಆನಂದ್ ಜಯಸಿಂಹ ಮತ್ತು ಕೆ.ಪಿ.ಸಿ.ಸಿ.ವಕ್ತಾರರಾದ ಸಲೀಮ್ ರವರು ಪರಿಸರ ರಾಮಕೃಷ್ಣ ,ಆದಿತ್ಯ
ಸಂಗೀತ ,ಸಾಹಿತ್ಯ ರಂಗಭೂಮಿ ಮತ್ತು ಕಿರುತೆರೆಯಲ್ಲಿ ಸಾಧನೆ ಮಾಡಿದದವರಿಗೆ ಸನ್ಮಾನಿಸಲಾಯಿತು.
ಕೆ.ಪಿ.ಸಿ.ಸಿ.ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು ಮಾತನಾಡಿ ಕನ್ನಡ ಭಾಷೆಗೆ 2ಸಾವಿರ ವರ್ಷಗಳ ಇತಿಹಾಸವಿದೆ .ಕನ್ನಡ ನುಡಿ ಚನ್ನಾ ,ಸುಲಲಿತ ಭಾಷೆ ಎಂದೇ ಹೆಸರು ಗಳಿಸಿದೆ ಕನ್ನಡ ಭಾಷೆಯ ಚಲನಚಿತ್ರ ಗೀತೆಗಳಿಗೆ ಪಿ.ಬಿ.ಶ್ರೀನಿವಾಸ್ ಮತ್ತು ಎಸ್.ಪಿ.ಬಿ. ಗಾನ ಸೀರಿಯಿಂದ ನಾಡಿನ ಜನರ ಹೃದಯದಲ್ಲಿ ನೆಲಸಿದ್ದಾರೆ .ಕೆ.ಪಿ.ಸಿ.ಸಿ.ವತಿಯಿಂದ ಸಾಹಿತಿ ,ರಂಗಭೂಮಿ ಕಲಾವಿದರು ಮತ್ತು ಚಲನಚಿತ್ರ ಮತ್ತು ಕಿರುತೆರೆ ಕಲಾವಿದರ ಸಂಘಟನೆ ಹಾಗೂ ಸಹಕಾರ ನೀಡಲಿ ಕಾಂಗ್ರೆಸ್ ಸಾಂಸ್ಕೃತಿಕ ಘಟಕ ಆರಂಭಿಸಲಾಗಿದೆ ಎಂದು ಹೇಳಿದರು.
ರಾಮಲಿಂಗಾರೆಡ್ಡಿರವರು ಮಾತನಾಡಿ ಗಾನ ಕೋಗಿಲೆಗಳಾದ ಪಿ.ಬಿ.ಶ್ರೀನಿವಾಸ್ ಮತ್ತು ಎಸ್.ಬಿ.ಬಾಲಸುಬ್ರಮಣ್ಯ ರವರು ಕನ್ನಡ ಸಂಗೀತ ಲೋಕಕ್ಕೆ ಅಪೂರ್ವ ರತ್ನಗಳು .
ಕೊರೋನ ಸಂಕಷ್ಟ ಸಮಯದಲ್ಲಿ ಕಲಾವಿದರುಗಳಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಆಹಾರ ಕಿಟ್ ಮತ್ತು ಆರ್ಥಿಕ ಸಹಕಾರ ನೀಡಲಾಯಿತು .