ಹೊನ್ನಾಳಿ,26: ಪ್ರಜಾಪ್ರಭುತ್ವದಡಿಯಲ್ಲಿ ರಾಜ್ಯದ ಆಡಳಿತ ನಡೆಸುವಂತಿರಬೇಕೆ ಹೊರತು,ಜಾತಿ ಮುಖ್ಯವಾಗಬಾರದು.ಅಹಿಂದ ಸಂಘಟನೆಗೆ ಮೊದಲು ಆದ್ಯತೆ ನೀಡುವಮೂಲಕ ಧರಣಿ ಸತ್ಯಗ್ರಹದಲ್ಲಿ ಪಾಲ್ಗೊಂಡು ಸಿದ್ದರಾಮಯ್ಯನವರ ಬಲ ಪಡಿಸಲು ಸಾದ್ಯವಾಗಲಿದೆ ಎಂಬುದಾಗಿ ಡಾ.ಈಶ್ವರನಾಯ್ಕ ಹೇಳಿದರು.
ಅವರು ಭಾನುವಾರ ಮೋಹನ್‍ಎನ್‍ಕ್ಲೈನಲ್ಲಿ ತಾಲ್ಲೂಕು ಮಟ್ಟದ ಹಿಂದುಳಿದ ಜಾತಿಗಳ ಒಕ್ಕೂಟದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕುರಬ ಸಮಾಜದ ಅಗಲಿದ ಗಣ್ಯರಿಗೆ ಜಿಲ್ಲೆಯಲ್ಲಿ ಅ.29ರಂದು ಶ್ರಾದ್ದಾಂಜಲಿ ಸಭೆ ಹಮ್ಮಿಕೊಂಡಿದ್ದು ಅವರ ಒಡನಾಟದ ಬಗ್ಗೆ ಮಾತನಾಡಿ ಶ್ರಾದ್ಧಾಂಜಲಿ ಅರ್ಪಿಸುತ್ತಿರುವ ಕೆ.ಮಲ್ಲಪ್ಪನವರು ಪಂಪಾಪತಿ ವಿರುದ್ದದ ಚುನಾವಣೆ ಸಂದರ್ಭ, ನಾವು ವೈದ್ಯಾಧಿಕಾರಿಯಾಗಿದ್ದರಿಂದ ವೈ.ನಾಗಪ್ಪನವರ ಒಡನಾಟದ ದಿನಗಳು,ಯಕ್ಕನಹಳ್ಳಿ ಶಂಭಣ್ಣ ತಾಲೂಕಿನಾದ್ಯಾಂತ ಸಂಚರಿಸಿ ಚಿರಪರಿಚತರಾಗಿದ್ದು ಹಾಗೂ ಮಲೇಬೆನ್ನೂರು ಸಿದ್ದಬಸಪ್ಪನವರ ಆತ್ಮೀಯತೆ ಒಡನಾಟದÀ ಬಗ್ಗೆ ಅವರು ಸಭೆಯಲ್ಲಿ ವಿವರಿಸಿದರು.
ಜಿಲ್ಲಾ ಕುರಬ ಸಮಾಜದ ಅಧ್ಯಕ್ಷ ದ್ಯಾಮಪ್ಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಹೊನ್ನಾಳಿ ಹುಲಿ ಎನ್ನುತ್ತಿದ್ದ ಮಾಜಿ ಶಾಸಕ ಕಾಡಸಿದ್ದಪ್ಪನವರ ಹೆಸರನ್ನು ಮತ್ತೆ ಹುಳಿಸಿಕೊಂಡು ಬರುವಂತ ನಾಯಕ ತಾಲೂಕಿನಲ್ಲಿ ಬೆಳೆಯಬೇಕೆಂದರು. ಕೋವಿಡ್ ನೆಪ ಮುಂದೆ ಮಾಡಿಕೊಂಡು ಸರ್ಕಾರಗಳು ಹಿಂದುಳಿದ ವರ್ಗಗಳ ನಿಗಮಗಳಿಗೆ ಹಣ ಬಿಡುಗಡೆಗೊಳಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪÀ ಮಾತನಾಡಿ ಜಿಲ್ಲೆಯಲ್ಲಿ ನಡೆಯುತ್ತಿರು ಧರಣಿ ಸತ್ಯಗ್ರಹ ಹಾಗೂ ಶ್ರಾಧ್ದಾಂಜಲಿ ಕಾರ್ಯಕ್ರಮಕ್ಕೆ ಚನ್ನಗಿರಿಯಿಂದ 10 ಸಾವಿರ ಜನರು ಭಾಗವಹಿಸುವುದಾಗಿ ಈಗಾಗಲೇ ತಿಳಿಸಿದ್ದು ನಮ್ಮ ತಾಲೂಕಿನಿಂದ ಇದಕ್ಕೂ ಹೆಚ್ಚು ಸಮಾಜದ ಶ್ರದ್ಧಾಂಜಲಿ ಕಾರ್ಯಕ್ರಮ ಹಾಗೂ ಅಹಿಂದ ಸಂಘಟನೆಯೊಂದಿಗೆ ಸಿದ್ದರಾಮಯ್ಯನವರ ಶಕ್ತಿಪ್ರದರ್ಶನವಾಗಬೇಕು ಎಂದರು.
ಬಿಜೆಪಿ ಸರ್ಕಾರವು ಅಹಿಂದ ವರ್ಗದವರ ಅಧಿಕಾರ ಮೊಟಕುಗೊಳಿಸುವ ಮೂಲಕ ಮೀಸಲಾತಿಗೆ ಕಡಿವಾಣ ಹಾಕಿದ್ದು ತಾಲ್ಲೂಕಿನಲ್ಲಿ ನಮ್ಮಲ್ಲಿನ ವೈಮಸ್ಸುಗಳನ್ನು ಕೈಬಿಟ್ಟು ಸಂಘಟನಾತ್ಮಕ ಜಾಗೃತಿ ಮೂಡಿಸಿಕೊಳ್ಳಬೇಕಾದ ಅವಶ್ಯಕತೆ ಹೆಚ್ಚಿದೆ ಎಂದರು.
ತಾಲ್ಲೂಕು ಅಹಿಂದ ಮುಖಂಡ ಎಂ.ರಮೇಶ್ ಮಾತನಾಡಿ ಎರಡೇ ದಿನಗಳಲ್ಲಿ ಈ ಸಭೆ ಯಶಸ್ವಿಯಾಗಿ ನಡೆಸಲು ಬಿ.ಸಿದ್ದಪ್ಪ,ಎಚ್.ಬಿ.ಶಿವಯೋಗಿ ಹೆಚ್.ಎ.ಉಮಾಪತಿಯವರೊಂದಿಗೆ ತಾವು ಚರ್ಚೆ ನಡೆಸಿದ ಕಾರ್ಯ ಯೋಜನೆಗಳ ಬಗ್ಗೆ ವಿವರಿಸಿ ತಾಲೂಕಿನಾದ್ಯಂತ ಹೆಚ್ಚು ವಾಹನಗಳ ಮೂಲಕ ಅಹಿಂದ ಮುಖಂಡರು ತೆರಳಿ ಧರಣಿ ಕಾರ್ಯಕ್ರಮವನ್ನು ಯಶಸ್ವಿಗೆ ಮುಂದಾಗೋಣ ಎಂದರು.
ಕುರಬ ಸಮಾಜದ ಜಿಲ್ಲಾ ಕಾರ್ಯದರ್ಶಿ ಲೋಕಿಕೇರಿ ಸಿದ್ಧಪ್ಪ ಮಾತನಾಡಿ ಸಿದ್ಧರಾಮಯ್ಯನವರು ಆಡಳಿತಾವದಿಯಲ್ಲಿ ನೀಡಿದ ಸೌಲಭ್ಯಗಳ ಇಂದಿನ ಸರ್ಕಾರ ಮೊಟುಕುಗೊಳಿಸುತ್ತಿರುವುದನ್ನು ವಿರೋದಿಸಿ ಅವರ ಸೌಲತ್ತುಗಳ ಮರಳಿ ಪಡೆಯಲು ನಮ್ಮಲ್ಲಿ ಒಗ್ಗಟ್ಟಿನ ಮಂತ್ರ ಮೂಡಬೇಕೆಂದರು.
ತಾಲ್ಲೂಕು ಕುರಬ ಸಮಾಜದ ಕಾರ್ಯಧ್ಯಕ್ಷ ಬಿ.ಸಿದ್ದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಇಂದಿನ ಸರ್ಕಾರಗಳಲ್ಲಿ ಹಿಂದುಳಿದ ಜನಾಂಗದ ಮೀಸಲಾತಿಗಳ ವಿವಿಧ ಘೋಷಣೆಗಳು ಆಗುತ್ತಿವೆ ಹೊರತು ಅವುಗಳು ಜಾರಿಗೊಳ್ಳುತ್ತಿಲ್ಲ ಸರ್ಕಾರದ ಕಣ್ಣು ತೆರೆಸಿ ಹಿಂದುಳಿದವರ ಬೆಳಕಾಗಲು ಜಿಲ್ಲೆಯಲ್ಲಿ ಸಭೆ ನಡೆಯುತ್ತಿದ್ದು. ತಾವುಗಳೆಲ್ಲಾ ಪಾಲ್ಗೊಂಡು ಹೋರಾಟದ ಶಕ್ತಿಯ ಬಲ ಹೆಚ್ಚಿಸೋಣ ಎಂದರು.
ಸಭೆಯಲ್ಲಿ ಅಹಿಂದ ಮುಖಂಡರಾದ ರಾಜಕುಮಾರ,ಎಂ.ಆರ್.ಮಹೇಶ್,ಪರುಶುರಾಮಪ್ಪ,ಉಪ್ಪಾರಹಾಲೇಶ್,ಆರ್.ನಾಗಪ್ಪ,ಚೀಲೂರುವಾಜೀದ್,ಎ L. Eswarnoik.ಕೇಶವÀಮೂರ್ತಿ,ಎಂ.ರಮೇಶ್,ದಿಡಗೂರುರುದ್ರೇಶ್ B siddappa ಹೆಚ್‍ಬಿ ಶಿವಯೋಗಿ ,ಕೃಷ್ಣಮೂರ್ತಿ,ಸುಲೈಮಾನ್, R nAgaPpa ಹಾಲೇಶ್,ದುದ್ಯಾನಾಯ್ಕ,ಕ್ಯಸಿನಕೇರಿ ಶೇಖರಪ್ಪ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಜಿಲ್ಲಾಮುಖಂಡರಾದ ವೇಂಕಟೇಶ್,ಕಾರ್ಪೆರೆಟ್ ಶ್ರೀನಿವಾಸ್,ದ್ಯಾಮಪ್ಪ,ರುದ್ರೇಶ್,ಲಿಂಗರಾಜು,ಚೌಡಪ್ಪ,ಮಂಜಣ್ಣ,ಶ್ರೀನಿವಾಸ್ ಇನ್ನಿತರರಿದ್ದರು.