ಹೊನ್ನಾಳಿ : ಬಿಜೆಪಿ ಪಕ್ಷ ಇಂದು ಹೆಮ್ಮರವಾಗಿ ಬೆಳೆದಿದೆ ಎಂದರೆ ಅದಕ್ಕೆ ಪಂಡಿತ್ ದೀನದಯಾಳರೇ ಕಾರಣ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ತಾಲೂಕಿನ ಹೊಸಮಳಲಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ದೀನದಯಾಳರ 105 ನೇ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ ಹುಟ್ಟುಹಬ್ಬದಿಂದ ಒಂದು ತಿಂಗಳ ಕಾಲ ಸೇವಾಸಪ್ತಾಯ ಮಾಡುತ್ತಿದ್ದು ಈ ಮೂಲಕ ಸ್ವಚ್ಚತೆ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸುವುದು, ಸಸಿನೆಡುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.
ಪಡಿತ್ ದೀನದಯಾಳ ಅವರ ಜನ್ಮದಿನಾಚರಣೆ ಪ್ರಯುಕ್ತ 105 ದೀಪಗಳನ್ನು ಬೆಳಗುವ ಮೂಲಕ ಈ ದಿನವನ್ನು ಪವಿತ್ರ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದೇ ಎಂದ ಶಾಸಕರು, ದೀನ ದಯಾಳರು ಎಂದು ಹಚ್ಚಿದ ದೀಪ ಇಂದು ದೇಶಾಧ್ಯಂತ ಪ್ರಕಾಶಮಾನವಾಗಿ ಬೆಳಗುತ್ತಿದೆ ಎಂದರು.
ಬಿಜೆಪಿ ಪಕ್ಷ ಕಾರ್ಯಕರ್ತರ ಪಕ್ಷ, ಬೇರೆ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿಯಲ್ಲಿ ಸಂಘಟನೆಯನ್ನು ಹೊಂದಿರುವ ಪಕ್ಷ ಎಂದ ಶಾಸಕರು ದೇಶದ ಉದ್ದಗಲಕ್ಕೂ ಇಂದು ಬಿಜೆಪಿ ಅಧಿಕಾರದಲ್ಲಿದೇ ಎಂದರೇ ಅದಕ್ಕೆ ಸಂಘಟನೆ ಕಾರಣ ಎಂದರು.
ನಾನು ಶಾಸಕನಲ್ಲಾ ನಾನು ಒಬ್ಬ ಕಾರ್ಯಕರ್ತ ಎಂದ ರೇಣುಕಾಚಾರ್ಯ ಜಿಲ್ಲಾಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಬರುತ್ತಿದ್ದು ಕಾರ್ಯಕರ್ತರು ಬಿಜೆಪಿ ಅಧಿಕಾರಕ್ಕೆ ತರಲು ಶ್ರಮಿಸುವಂತೆ ಕರೆ ನೀಡಿದರು.
ವಿವಿಧ ಕಡೆ ದೀನದಯಾಳ್ ಜನ್ಮದಿನಾಚರಣೆ ಆಚರಣೆ :
ತಾಲೂಕಿನ ಸವಳಂಗ ಹಾಗೂ ಸರಹೊನ್ನೆ ಗ್ರಾಮದಲ್ಲೂ ಪಂಡಿತ್ ದೀನದಯಾಳರ 105 ಜನ್ಮದಿನಾಚರಣೆ ಹಿನ್ನೆಲೆಯಲ್ಲಿ 105 ದೀಪ ಬೆಳಗಿ, ಪತ್ರಭಾನ್ಮಿತ ವಿದ್ಯಾರ್ಥಿಗಳನ್ನು ಸನ್ಮಾನಿಸುವುದರ ಜೊತೆಗೆ ಸಸಿ ನೆಡುವ ಮೂಲಕ ದೀನದಯಾಳರ ಜನ್ಮದಿನಾಚರಣೆ ಆಚರಿಸಲಾಯಿತು.
ಸರಳತೆ ಮರೆದ ಶಾಸಕ :
ಪಂಡೀತ್ ದೀನದಯಾಳ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಹೊಸಮಳಲಿ ಗ್ರಾಮದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿ ಶಾಸಕರಿಗೆ ಸಿಂಹಾಸನದ ಕುರ್ಚಿ ಹಾಕಲಾಗಿತ್ತು. ಇದನ್ನು ಕಂಡ ಶಾಸಕರು ಕುರ್ಚಿಯನ್ನು ತಾವೇ ಎತ್ತಿಟ್ಟು ನಾನು ಕೂಡ ಸಾಮಾನ್ಯ ಕಾರ್ಯಕರ್ತರ ನನಗೆ ಪ್ಲಾಸ್ಟಿಕ್ ಕುರ್ಚಿ ಸಾಕೇಂದ್ರು ಅದರಲ್ಲಿ ಕುಳಿತುಕೊಳ್ಳುವ ಮೂಲಕ ಸರಳತೆ ಮರೆದರು.
ಈ ಸಂದರ್ಬ ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್,ಮುಖಂಡರಾದ ಶಾಂತರಾಜ್ ಪಟೇಲ್, ಕುಬೇರಪ್ಪ, ರಾಜಣ್ಣ, ಪಾಲಾಕ್ಷಪ್ಪ, ತಾಂಡಾಭಿವೃದ್ದಿ ನಿಗಮದ ನಿದೇರ್ಶಕ ಮಾರುತಿ ನಾಯ್ಕ, ಅಜಯ್ ,ಅರಕೆರೆ ನಾಗರಾಜ್,ಜಗದೀಶ್ ಸೇರಿದಂತೆ ಗ್ರಾಮದ ಮುಖಂಡರಿದ್ದರು.