ನ್ಯಾಮತಿ : ಸೆ 27 ನ್ಯಾಮತಿ ತಾಲ್ಲೂಕು ಚಿನ್ನಿಕಟ್ಟೆ ಗ್ರಾಮದಲ್ಲಿ 2ರಿಂದ 6ವರ್ಷ ಒಳಗೆ ಬರುವ ಕಡಿಮೆ ತೂಕ ಎಂಎಎಂ ಮತ್ತು ಅತಿ ಕಡಿಮೆ ತೂಕ ಹೊಂದಿರುವ ಮಕ್ಕಳಿಗೆ ಕೊರೋನಾ ಮೂರನೇ ಅಲೆಯ ವಿರುದ್ಧ ರೋಗನಿರೋಧಕ ಶಕ್ತಿ ವೃದ್ಧಿಗಾಗಿ ಆಯುಷ್ ಇಲಾಖೆಯಿಂದ ಅರವಿಂದಾಸವ ಹಾಗೂ ಕೂಷ್ಮಂಡ ಅವ್ಲೇಹ ಔಷಧಿಯನ್ನು ಚಿನ್ನಿಕಟ್ಟೆ ಗ್ರಾಮದ ಆಯುರ್ವೇದ ಚಿಕಿತ್ಸಾಲಯದಲ್ಲಿ ವಿತರಿಸಲಾಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿನ್ನಿಕಟ್ಟೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಪ್ರತಿಮಾ ಭಾಗವಹಿಸಿದರು.
ಸಮಾರಂಭದಲ್ಲಿ ಉಪಾಧ್ಯಕ್ಷರಾದ ಲಕ್ಷ್ಮೀಬಾಯಿ ಸದಸ್ಯ ಪರುಶರಾಮ ಪಿಡಿಒ ಆಶಾ ಅಂಗನವಾಡಿ ಮೇಲ್ವಿಚಾರಕಿ ಗೀತಾ ಆರೋಗ್ಯ ಇಲಾಖೆಯ ಲಕ್ಷ್ಮಿಬಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗನವಾಡಿ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು ಎಸ್ ಎ ಎಂ[SAM] ಅತಿ ಕಡಿಮೆ ತೂಕ ಇರುವ ಮಕ್ಕಳು . ಹಾಗೂ ಎಂಎಎಂ[MAM] ಕಡಿಮೆ ತೂಕ ಇರುವ ಮಕ್ಕಳು, ಮಕ್ಕಳ ಆರೋಗ್ಯ ತಪಾಸಣೆಗೆ ಹಾಗೂ ಔಷಧಿ ವಿತರಣೆಯನ್ನು ಆಯುಷ್ ವೈದ್ಯಾಧಿಕಾರಿಗಳಾದ ಡಾಕ್ಟರ್ ಲಿಂಗರಾಜೇಂದ್ರ ಹಾಗೂ ಡಾಕ್ಟರ್ ಶಿಲ್ಪಾ ನೆರವೇರಿಸಿಕೊಟ್ಟರು. ನ್ಯಾಮತಿ ತಾಲ್ಲೂಕಿನಲ್ಲಿ ಒಟ್ಟು 15 ಎಸ್ ಎಎಂ ಮಕ್ಕಳು ಹಾಗೂ 244ಎಂಎಎಂ ಮಕ್ಕಳು ಆಯಿಷ್ ಬಾಲ ಸಂಜೀವಿನಿ ಕಾರ್ಯಕ್ರಮದ ಲಾಭ ಪಡೆದುಕೊಂಡಿದ್ದಾರೆ ಎಂದು ಡಾಕ್ಟರ್ ಲಿಂಗರಾಜು ತಿಳಿಸಿದರು.