ಸಹಕಾರ ಅಭಿವೃದ್ಧಿ ಇಲಾಖೆಗೆ ರೈತರ ಮುತ್ತಿಗೆ ರೈತರಿಗೆ ಸಾಥ್ ನೀಡಿದ ತಾಲೂಕ್ ಅಹಿಂದ ನಾಯಕ ಬಿ ಸಿದ್ದಪ್ಪ ಹೊನ್ನಾಳಿ ಸೆ 27 ಸಾಲ ಮನ್ನಾ ದಿಂದ ವಂಚಿತ ರೈತರಿಂದ ಇಂದು ಪಟ್ಟಣದ ಸಹಕಾರ ಅಭಿವೃದ್ಧಿ ಅಧಿಕಾರಿಗಳ ಕಚೇರಿಗೆ ನೂರಾರು ರೈತರು ಮುತ್ತಿಗೆ ಹಾಕಿ. ಸಹಕಾರ ಅಭಿವೃದ್ಧಿ ಅಧಿಕಾರಿ ಸತೀಶ್ ಕುಮಾರ್ ಅವರೊಂದಿಗೆ ರೈತರು ವಾಗ್ವಾದ ನಡೆಸಿದರು.

ಈ ವೇಳೆ ಕಾಂಗ್ರೆಸ್ ಮುಖಂಡ ಹಾಗೂ ಅಹಿಂದ ನಾಯಕ ಬಿ ಸಿದ್ದಪ್ಪ ಮಾತನಾಡಿ 2018 ರಲ್ಲಿ ಸರ್ಕಾರ ರೈತರ ಸಾಲವನ್ನು ಮನ್ನಾ ಮಾಡಲಾಗಿತ್ತು ಆದರೆ ಇಲ್ಲಿಯವರೆಗೂ ಬಿಜೆಪಿ ಸರ್ಕಾರದವರು ರೈತರ ಬಗ್ಗೆ ಕಾಳಜಿ ಇಲ್ಲದೆ ಬ್ಯಾಂಕುಗಳಿಗೆ ಹಣ ನೀಡಿಲ್ಲ ಎಂದು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಗುಡುಗಿದರು ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಕೊರೊನ ವೈರಸ್ ನೆಪದಲ್ಲಿ ರೈತರ ಜೀವ ಹಿಂಡಬಾರದು ರೈತರ ಸಾಲ ಮನ್ನಾ ಯೋಜನೆಗೆ ಹಣ ಬಿಡುಗಡೆ ಮಾಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಹೆಚ್ ಎ ಉಮಾಪತಿ. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ ರಮೇಶ್. ಹಾಗೂ ತಾಲೂಕು ರೈತ ಸಂಘದ ಮುಖಂಡರಾದ ಬಿದರಗಡ್ಡೆ ಭರ್ಮಪ್ಪ. ಎರೆಹಳ್ಳಿ ನಾಗರಾಜಪ್ಪ. ಹಿರೇಮಠ ಬಸವರಾಜಪ್ಪ. ಅರಬಗಟ್ಟೆ ಬಸಪ್ಪ. ಇತರ ರೈತ ಮುಖಂಡರು ಉಪಸ್ಥಿತರಿದ್ದರು ( ಬಾಕ್ಸ್ ) ಸಹಕಾರ ಅಭಿವೃದ್ಧಿ ಅಧಿಕಾರಿ ಸತೀಶ್ ಕುಮಾರ್ ಪತ್ರಿಕೆಯೊಂದಿಗೆ ಮಾತನಾಡಿ ಜಿಲ್ಲಾ ವ್ಯವಸ್ಥಾಪಕ ನಿರ್ದೇಶಕರಿಗೆ ಕರೆಮಾಡಿ ಮಾತನಾಡಿದ್ದೇನೆ ರೈತರ ಸಾಲ ಮನ್ನಾನಾ ಆಗಿದೆ ಆದರೆ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ ಕೂಡಲೇ ಮೇಲಾಧಿಕಾರಿಗಳಿಗೆ ರೈತರ ಮನವಿಯನ್ನು ತಿಳಿಸುತ್ತೇವೆ ಮೇಲಧಿಕಾರಿಗಳಿಗೆ ರೈತರ ಸಾಲ ಮನ್ನಾ ಆಗಿರುವ ಲಿಸ್ಟ್ ಕಳಿಸಿದ್ದೇವೆ ಸರ್ಕಾರದಿಂದ ಹಣ ಬಂದಕೂಡಲೇ ರೈತರಿಗೆ ಸಾಲ ಮನ್ನದ ರಸೀದಿ ನೀಡಲಾಗುವುದ ಎಂದು ತಿಳಿಸಿದರು.

Leave a Reply

Your email address will not be published. Required fields are marked *