ದಾವಣಗೆರೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಕೈಗೊಂಡಿರುವ
ನಿರ್ಣಯದಂತೆ, ಜಿಲ್ಲೆಯಲ್ಲಿ ನಗರ ಮಿತಿಯೊಳಗಡೆ ಸಂಚರಿಸುವ
ಆಟೋರಿಕ್ಷಾ ಮಾಲೀಕರು ಅಥವಾ ಚಾಲಕರು ಅ.05 ರೊಳಗಾಗಿ
ಕಡ್ಡಾಯವಾಗಿ ಮೀಟರ್ ಅಳವಡಿಸಬೇಕು. ಹಳೆಯ ಮೀಟರ್
ಹೊಂದಿರುವವರು ಪರಿಷ್ಕøತ ಆಟೋ ದರ ಪಟ್ಟಿಯನ್ನು ಸರಿಯಾಗಿ
ಪ್ಯಾಸೆಂಜರ್‍ಗಳಿಗೆ ಕಾಣುವಂತೆ ಆಟೋ ಚಾಲಕರ ಸೀಟಿನ ಹಿಂಭಾಗ
ಅಂಟಿಸಬೇಕು ಹಾಗೂ ಉಳಿದಂತೆ ಹೊಸ ಮೀಟರ್‍ಗಳನ್ನು
ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ಪ್ರಾದೇಶಿಕ ಸಾರಿಗೆ
ಅಧಿಕಾರಿಗಳು ಸೂಚನೆ ನೀಡಿದ್ದಾರೆ.
       ಹಳೆಯ ಮೀಟರ್ ಹೊಂದಿರುವ ಎಲ್ಲಾ ಆಟೋ ಮಾಲೀಕರು ಅಥವಾ
ಚಾಲಕರು ಅ.31 ರೊಳಗೆ ಮೀಟರ್ ರಿಕ್ಯಾಬರೇಷನ್
ಮಾಡಿಸಿಕೊಳ್ಳಬೇಕು. ಅಲ್ಲಿಯವರೆಗೂ ಪರಿಷ್ಕøತ ಆಟೋ ದರ
ಪಟ್ಟಿಯನ್ನು ಆಟೋ ಚಾಲಕರ ಸೀಟಿನ ಹಿಂಭಾಗ ಕಾಣುವಂತೆ
ಅಂಟಿಸಬೇಕು.
       ಈಗಾಗಲೇ ಮೀಟರ್ ಅಳವಡಿಕೆಗೆ ಕಾಲಮಿತಿಯನ್ನು ನೀಡಲಾಗಿದ್ದು,
ಈ ಕಾಲಮಿತಿಯನ್ನು ಅ.05 ರವರೆಗೆ ಮರುನಿಗದಿಪಡಿಸಲಾಗಿದೆ. ಹೀಗಾಗಿ
ಆಟೋಗಳಿಗೆ ಮೀಟರ್ ಅಳವಡಿಸಲು, ರಿಕ್ಯಾಬರೇಷನ್ ಮಾಡಿಸಲು ಹಾಗೂ
ದರಪಟ್ಟಿಯನ್ನು ಪರಿಷ್ಕರಿಸುವ ಬಗ್ಗೆ ಎಲ್ಲಾ ಆಟೋ ಮಾಲೀಕರು
ಮತ್ತು ಚಾಲಕರು ಇನ್ನೂ ಸ್ವಲ್ಪ ಕಾಲಾವಕಾಶ ಕೋರಿದ್ದರಿಂದ
ದರಪಟ್ಟಿ ಪರಿಷ್ಕರಿಸಲಾಗಿರುತ್ತದೆ. ನಿಗದಿತ ಕಾಲಮಿತಿಯೊಳಗೆ
ಕಡ್ಡಾಯವಾಗಿ ಆಟೋರಿಕ್ಷಾಗಳಿಗೆ ಮೀಟರ್
ಅಳವಡಿಸಿಕೊಳ್ಳಬೇಕೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *