ಕೋವಿಡ್-19 ವೈರಾಣು ಸೋಂಕಿನಿಂದಾಗಿ ದುಡಿಯುವ ಸದಸ್ಯರನ್ನು
ಕಳೆದುಕೊಂಡಂತಹ ಬಡತನ ರೇಖೆಗಿಂತ ಕೆಳಗಿರುವ
ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರವನ್ನು ಮಂಜೂರು
ಮಾಡಲು ಅರ್ಜಿಗಳನ್ನು ಪಡೆಯಲು ಸೂಚನೆ ನೀಡಲಾಗಿದೆ.
       ಸಂತ್ರಸ್ಥ ಕುಟುಂಬದವರು, ಈ ಕುರಿತಂತೆ ಅರ್ಜಿಯನ್ನು
ತಾಲ್ಲೂಕು ಕಚೇರಿಯಲ್ಲಿ ಅಥವಾ ತಮ್ಮ ವ್ಯಾಪ್ತಿಯ
ನಾಡಕಚೇರಿಯಲ್ಲಿ ನಿಗದಿತ ನಮೂನೆ-1 ಅನ್ನು ಪಡೆದುಕೊಂಡು,
ಸೂಕ್ತ ದಾಖಲೆಗಳೊಂದಿಗೆ ಅರ್ಜಿಯನ್ನು ವ್ಯಾಪ್ತಿಯ
ನಾಡಕಚೆÉೀರಿಯಲ್ಲಿ ಸಲ್ಲಿಸುವಂತೆ ಕೋರಿದ್ದು, ಈಗಾಗಲೇ ನಿಗದಿತ
ನಮೂನೆಗಳಲ್ಲಿ ಅರ್ಜಿ ಸಲ್ಲಿಸಿರುವವರು ಪುನಃ ಅರ್ಜಿ ಸಲ್ಲಿಸುವ
ಅಗತ್ಯವಿರುವುದಿಲ್ಲ.
       ಅರ್ಜಿ ಸಲ್ಲಿಸುವವರು ಕೋವಿಡ್-19 ಪಾಸಿಟಿವ್ ಅಥವಾ ನೆಗೆಟಿವ್ ರಿಪೋರ್ಟ್,
 ರೋಗಿ ಸಂಖ್ಯೆ ಪಿ-ನಂಬರ್, ಕ್ಲೀನಿಕಲ್ ರೇಡಿಯಾಲಜಿ ಮತ್ತು
ಪ್ರಯೋಗಾಲಯ ವರದಿ ವೈದ್ಯರಿಂದ ದೃಢೀಕರಿಸಿರಬೇಕು,
ಮೃತಪಟ್ಟ ವ್ಯಕ್ತಿಯ ಆಧಾರ್ ಕಾರ್ಡ್, ಮರಣ ಪ್ರಮಾಣ ಪತ್ರ,
ಅರ್ಜಿದಾರರ ಪಡಿತರ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ,
ನಮೂನೆ-2 ರಲ್ಲಿ ಸ್ವಯಂ ಘೋಷಣಾ ಪತ್ರ, ನಮೂನೆ-3 ರಲ್ಲಿ
ಕುಟುಂಬ ಸದಸ್ಯರ ನಿರಾಕ್ಷೇಪಣಾ ಪತ್ರ ಸಲ್ಲಿಸಬೇಕೆಂದು
ದಾವಣಗೆರೆ ತಾಲ್ಲೂಕು ತಹಶೀಲ್ದಾರ್ ಬಿ.ಎನ್.ಗಿರೀಶ್ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

Leave a Reply

Your email address will not be published. Required fields are marked *