ರಾಜ್ಯ ಮಟ್ಟದ ಸರ್ಕಾರಿ ನೌಕರರ 2020-21 ನೇ ಸಾಲಿನ ಕ್ರೀಡಾಕೂಟ
ಮತ್ತು ಸಾಂಸ್ಕøತಿಕ ಸ್ಪರ್ಧೆಯನ್ನು ನಗರದಲ್ಲಿ ಅ.21 ರಿಂದ ಅ.23
ರ ವರಗೆ ಆಯೋಜಿಸಲಾಗಿದೆ.
ಕಾರ್ಯಕ್ರಮದ ಸವಿ ನೆನಪಿಗಾಗಿ ದೇವನಗರಿ ವೈಭವ ಎಂಬ
ಹೆಸರಿನ ಸ್ಮರಣ ಸಂಚಿಕೆಯನ್ನು ಹೊರತರಲು ತೀರ್ಮಾನಿಸಿದ್ದು,
ಸಂಚಿಕೆಗೆ ರಾಜ್ಯ ಸರ್ಕಾರಿ ನೌಕರರಿಂದ ಸ್ವರಚಿತ ಕವನ ಮತ್ತು
ಲೇಖನಗಳನ್ನು ಅ.10 ರೊಳಗಾಗಿ e-mಚಿiಟ ಞsgeಚಿಜvg@gmಚಿiಟ.ಛಿom ಗೆ
ಕಳುಹಿಸಬಹುದು. ರಾಜ್ಯ ಮಟ್ಟಕ್ಕೆ ಆಯ್ಕೆಯಾದ ರಾಜ್ಯದ ಎಲ್ಲಾ
ಜಿಲ್ಲೆಯ ನೌಕರ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ
ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.
ಪಾಲಾಕ್ಷಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.