ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪ್ರಸಕ್ತ
ಸಾಲಿನ ಜಿಲ್ಲಾ ಮಟ್ಟದ ಯುವಜನೋತ್ಸವ ಆಯ್ಕೆ ಸ್ಪರ್ಧೆಗಳನ್ನು
ಅಕ್ಟೋಬರ್ ತಿಂಗಳ 2ನೇ ವಾರದಲ್ಲಿ ಸಂಘಟಿಸಲು ತೀರ್ಮಾನಿಸಿದ್ದು, 15
ರಿಂದ 29 ವರ್ಷ ವಯೋಮಿತಿಯೊಳಗಿನ ಎಲ್ಲಾ ಯುವಜನರು
ಭಾಗವಹಿಸಬಹುದಾಗಿದೆ.
ಯುವಜನೋತ್ಸವ ಆಯ್ಕೆ ಸ್ಪರ್ಧೆಗಳ ಕಾರ್ಯಕ್ರಮದಲ್ಲಿ
ಈ ಕೆಳಕಂಡ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು,
ಭಾಗವಹಿಸುವ ಸ್ಪರ್ಧಾಳುಗಳು ಕಡ್ಡಾಯವಾಗಿ ಎಸ್.ಎಸ್.ಎಲ್.ಸಿ.
ಅಂಕಪಟ್ಟಿ ಅಥವಾ ಜನನ ಪ್ರಮಾಣ ಪತ್ರಗಳ ಜೆರಾಕ್ಸ್
ಪ್ರತಿಗಳನ್ನು ಕಡ್ಡಾಯವಾಗಿ ತರಬೇಕು. ಇಲ್ಲದಿದ್ದಲ್ಲಿ
ಅಂತಹವರಿಗೆ ಸ್ಪರ್ಧಿಸಲು ಅವಕಾಶ ನೀಡಲಾಗುವುದಿಲ್ಲ. ಕೋವಿಡ್-19
ನಿಯಮಗಳನ್ವಯ ಸ್ಪರ್ಧಾಳುಗಳು ಮಾಸ್ಕ್ ಧರಿಸಿ, ಸಾಮಾಜಿಕ
ಅಂತರ ಕಾಯ್ದುಕೊಳ್ಳಬೇಕು.  
       ಯುವಜನೋತ್ಸವ ಕಾರ್ಯಕ್ರಮದಲ್ಲಿ ಗುಂಪು
ಸ್ಪರ್ಧೆಗಳ ವಿಭಾಗದಲ್ಲಿ ಜಾನಪದ ನೃತ್ಯ, ಜಾನಪದ ಗೀತೆ,
ವೈಯುಕ್ತಿಕ ಸ್ಪರ್ಧೆಗಳ ವಿಭಾಗದಲ್ಲಿ ಇಂಗ್ಲೀಷ್ ಅಥವಾ ಹಿಂದಿಯಲ್ಲಿ
ಏಕಾಂಕ ನಾಟಕ,  ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ,
ಭರತನಾಟ್ಯ, ಒಡಿಸ್ಸಿ, ಮಣಿಪುರಿ, ಕುಚುಪುಡಿ, ಕಥಕ್, ಸಿತಾರ,
ಕೊಳಲು, ತಬಲಾ, ವೀಣಾ, ಮೃದಂಗ, ಹಾರ್ಮೋನಿಯಂ, ಗಿಟಾರ್,
ಇಂಗ್ಲೀಷ್ ಅಥವಾ ಹಿಂದಿಯಲ್ಲಿ ಆಶುಭಾಷಣ ಸ್ಪರ್ಧೆಗಳನ್ನು
ನಡೆಸಲಾಗುವುದು. ಸ್ಪರ್ಧೆಗೆ ಯಾವುದೇ ಪ್ರವೇಶ
ಶುಲ್ಕವಿರುವುದಿಲ್ಲ. ಆಯ್ಕೆಯಾದವರು ರಾಜ್ಯಮಟ್ಟದ
ಯುವಜನೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಲು
ಅವಕಾಶವಿರುತ್ತದೆ.
       ಭಾಗವಹಿಸುವ ಸ್ಪರ್ಧಾಳುಗಳು, ತಮ್ಮ ಹೆಸರನ್ನು
ಸಹಾಯಕ ನಿರ್ದೇಶಕರ ಕಛೇರಿ ಯುವ ಸಬಲೀಕರಣ ಮತ್ತು
ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ದಾವಣಗೆರೆ ರವರ ಕಛೇರಿಯಲ್ಲಿ
ಅ.13 ರ ಒಳಗಾಗಿ ನೋಂದಣಿ ಮಾಡಿಕೊಳ್ಳಬಹುದು. ಸ್ಪರ್ಧೆಯ
ದಿನಾಂಕವನ್ನು ನಂತರದಲ್ಲಿ ತಿಳಿಸಲಾಗುವುದು. ಹೆಚ್ಚಿನ
ವಿವರಗಳಿಗಾಗಿ ದೂರವಾಣಿ ಸಂಖ್ಯೆ: 08192-237480 ಗೆ
ಸಂಪರ್ಕಿಸಬಹುದು ಎಂದು ಯುವಸಬಲೀಕರಣ ಮತ್ತು ಕ್ರೀಡಾ
ಇಲಾಖೆ, ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Leave a Reply

Your email address will not be published. Required fields are marked *