ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
ವತಿಯಿಂದ ಗಾಂಧಿ ಜಯಂತಿಯ ಪ್ರಯುಕ್ತ ಖಾದಿ ಸಂಘ-
ಸಂಸ್ಥೆಗಳನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಹಾಗೂ
ಗಾಂಧೀಜಿಯವರ ಕನಸನ್ನು ಸಾಕಾರಗೊಳಿಸಲು ಅ. 04 ರಿಂದ 06
ರವರೆಗೆ 03 ದಿನಗಳ ಕಾಲ ಜಿಲ್ಲಾಡಳಿತ ಭವನ ಆವರಣದಲ್ಲಿ ಖಾದಿ
ಮಾರಾಟ ಹಾಗೂ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾದಿ ಸಂಘ-ಸಂಸ್ಥೆಗಳ
ಮಾಲೀಕರು ಖಾದಿ ಉತ್ಪನ್ನ ಮಾರಾಟ ಮಾಡಲು ಖಾದಿ ಮಳಿಗೆಗಳನ್ನು
ತೆರೆದಿದ್ದು, ಜಿಲ್ಲೆಯ ಸಾರ್ವಜನಿಕರು ಹಾಗೂ ಅಧಿಕಾರಿಗಳು ಭೇಟಿ ನೀಡಿ
ಖಾದಿ ಬಟ್ಟೆಯನ್ನು ಖರೀದಿಸುವ ಮೂಲಕ ಖಾದಿ ಕಸಬುದಾರರಿಗೆ
ನೆರವಾಗಬೇಕು ಎಂದು ಖಾದಿ ಮಂಡಳಿ ಜಿಲ್ಲಾ ಅಭಿವೃದ್ಧಿ ಅಧಿಕಾರಿಗಳು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.