ದಾವಣಗೆರೆ: ನಿಮ್ಮ ಪ್ರೋತ್ಸಾಹ ಸಹಕಾರ ಎಲ್ಲಿಯವರೆಗೂ
ಇರೋತ್ತೋ ಅಲ್ಲಿಯವರೆಗೂ ನಮ್ಮಿಂದ ಅಭಿವೃದ್ಧಿ ಕಾರ್ಯಗಳು
ನಡೆಯಲಿವೆ ಎಂದು ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು
ತಿಳಿಸಿದರು.
ಅವರಿಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ
ಕಾಂಗ್ರೆಸ್ ಗ್ರಾಮಾಂತರ ಘಟಕದ ವತಿಯಿಂದ ಬೇತೂರು
ಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ
ಗ್ರಾಮಸ್ವರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನೀವು ಬೆಂಬಲ ಕೊಟ್ಟು ಅಧಿಕಾರಕ್ಕೆ ಬಂದಾಗ ನಿಮ್ಮ ನಿರೀಕ್ಷೆಗೂ
ಮೀರಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ. ಇಂದು ಆ
ಕೆಲಸಗಳನ್ನು ನಿರ್ವಹಣೆ ಮಾಡುವಲ್ಲಿ ಆಡಳಿತಸ್ಥರಿಗೆ ಆಗುತ್ತಿಲ್ಲ
ಎಂದು ಬೇಸರ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ಉತ್ತರ
ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಗ್ರಾಮಾಂತರ ಘಟಕದ ಬ್ಲಾಕ್
ಕಾಂಗ್ರೆಸ್ ಅಧ್ಯಕ್ಷ ಬಿ.ಕೆ.ಪರಶುರಾಮ್ ಮಾತನಾಡಿ
ಎಸ್.ಎಸ್.ಮಲ್ಲಿಕಾರ್ಜುನ್ ಅವರು ಮಂತ್ರಿಗಳಾಗಿದ್ದ ವೇಳೆ
ಜನಸಾಮಾನ್ಯರಿಗೆ ತೊಂದರೆ ಆಗದ ರೀತಿ ಆಡಳಿತ ಸಿಗುತ್ತಿತ್ತು.
ಆದರೆ ಇಂದು ಹಣವಿಲ್ಲದೇ ಯಾವ ಕೆಲಸಗಳು ಆಗದಂತಹ ಪರಿಸ್ಥಿತಿ

ನಿರ್ಮಾಣವಾಗಿದ್ದು, ಜಿಲ್ಲೆಯಲ್ಲಿ ಭ್ರಷ್ಠಾಚಾರ ತಾಂಡವವಾಡುತ್ತಿದೆ
ಎಂದು ಆಪಾದಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷರೂ, ಹಾಲಿ ಸದಸ್ಯರಾದ ಮುದೇಗೌಡ್ರು
ಗಿರೀಶ್ ಅವರು ಮಾತನಾಡಿ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಮುಂದಿನ 25
ವರ್ಷಕ್ಕೆ ಅನುಗುಣವಾಗಿ ಅನೇಕ ಅಭಿವೃದ್ದಿ ಕೆಲಸಗಳನ್ನು
ಮಾಡಿದ್ದು, ಇಂದಿನವರೆಗೆ ಕೆಲಸ ಮಾಡಲು ಏನು ಇಲ್ಲ. ಆದರೂ ಸಹ
ಜನರಿಗೆ ಉಪಯೋಗವಾಗುವಂತ ಯಾವುದೇ
ಕೆಲಸಗಳಾಗುತ್ತಿಲ್ಲ ಎಂದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಶಾಮನೂರು ಟಿ.ಬಸವರಾಜ್ ಮಾತನಾಡಿ
ಕೆಪಿಸಿಸಿ ಆದೇಶದ ಮೇರೆಗೆ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75
ವರುಷಗಳಾದ ಹಿನ್ನೆಲೆಯಲ್ಲಿ ಮಹಾತ್ಮಗಾಂಧಿಯವರ
ಆಶಯದಂತೆ ಗ್ರಾಮ ಸ್ವರಾಜ್ ಕಾರ್ಯಕ್ರಮವನ್ನು
ಆರಂಭಿಸಿದ್ದು, ಮಲ್ಲಿಕಾರ್ಜುನ್ ಅವರು ಈ ಕಾರ್ಯಕ್ರಮಕ್ಕೆ ಚಾಲನೆ
ನೀಡಿರುವುದು ಹರ್ಷ ತಂದಿದೆ ಎಂದರು.
ಹಿರಿಯ ಕಾಂಗ್ರೆಸ್ ಮುಖಂಡ ರಾಘವೇಂದ್ರ ನಾಯ್ಕ ಮಾತನಾಡಿ
ಮಲ್ಲಿಕಾರ್ಜುನ್ ಅವರು ಅಧಿಕಾರದಲ್ಲಿದ್ದಾಗ ಇಂತಹ ಕೆಲಸ
ಬೇಕೆಂದರೆ 2 ನಿಮಿಷಗಳಲ್ಲಿ ಮಾಡುತ್ತಿದ್ದರು. ಇಂದು
ಅಧಿಕಾರದಲ್ಲಿ ಇಲ್ಲದಿದ್ದರೂ ಸಹ ಅನೇಕ ಕೆಲಸಗಳು ಆಗುತ್ತಿವೆ
ಎಂದು ಉದಾಹರಣೆ ಸಮೇತ ವಿವರಿಸಿದರು.
ಬೇತೂರು ಗ್ರಾಮದ ಹಿರಿಯ ಮುಖಂಡರಾದ
ಹೆಚ್.ಬಿ.ಬಸವರಾಜಪ್ಪ ಮಾತನಾಡಿ ಮಲ್ಲಿಕಾರ್ಜುನ್ ಅವರು ಮಾಡಿದ
ಕೆಲಸಗಳು ಮಾತನಾಡುತ್ತಿವೆ. ಅವರಿಗೆ ನಾವೆಲ್ಲರೂ ಚಿರಋಣಿ
ಆಗಿದ್ದು, ಅವರನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು
ಪ್ರಾಮಾಣಿಕವಾಗಿ ಕೆಲಸ ಮಾಡೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರುಗಳಾದ
ಬಿ.ಕರಿಬಸಪ್ಪ, ಕೆ.ಎಸ್.ಬಸವಂತ್, ಎಪಿಎಂಸಿ ನಿರ್ದೇಶಕ ಟಿ.ರಾಜಣ್ಣ, ಮಾಜಿ
ನಿರ್ದೇಶಕ ಬಿ.ಪ್ರಭು, ತಾಲ್ಲೂಕು ಪಂಚಾಯತ್ ಸದಸ್ಯರಾದ
ಶ್ರೀಮತಿ ಆಶಾ ಮುರುಳಿ, ಕಾಡಜ್ಜಿ ಗ್ರಾಮ ಪಂಚಾಯತ್ ಮಾಜಿ
ಅಧ್ಯಕ್ಷ ಚಂದ್ರಪ್ಪ, ಬೂದಾಳ್ ಬಾಬು ಮತ್ತಿತರರಿದ್ದರು.

Leave a Reply

Your email address will not be published. Required fields are marked *