ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ ಬಿ.ಶ್ರೀರಾಮುಲು ರವರು ಇಂದು ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಖಾದಿ ಭಂಡಾರ್ ಕ್ಕೆ ಭೇಟಿ ನೀಡಿ, ಖಾದಿ ಬಟ್ಟೆಗಳನ್ನು ಖರೀದಿಸಲಾಯಿತು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ತತ್ವ ಆದರ್ಶಗಳನ್ನು ಸಂಪೂರ್ಣವಾಗಿ ಭಾರತೀಯ ಜನತಾ ಪಕ್ಷ ಅಳವಡಿಸಿಕೊಂಡು, ಅನುಷ್ಠಾನಗೊಳಿಸಿದೆ. ಸ್ವತಃ ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜೀ ರವರು ಪೊರಕೆ ಹಿಡಿದು ಸ್ವಚ್ಛತೆಗೆ ನಿಂತಿದ್ದು, ಹಾಗೆಯೇ ಸ್ವದೇಶಿ ಉಡುಪುಗಳನ್ನು ( ಖಾದಿ) ಧರಿಸುವ ಮೂಲಕ ಹಾಗೂ ಸ್ವದೇಶಿ ವಸ್ತುಗಳನ್ನು ಬಳಸುವ ಮುಖಾಂತರ ಸ್ವದೇಶಕ್ಕೆ ಉತ್ತೇಜನ ನೀಡಿದ್ದಾರೆ. ಅಲ್ಲದೇ, ಗಾಂಧೀಜಿಯವರ ಸ್ವದೇಶಿ ಕಲ್ಪನೆಯನ್ನು ಸಾಕಾರಗೊಳಿಸಲು ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ನಾವೆಲ್ಲರೂ ಸ್ವದೇಶಿ ಉಡುಪುಗಳನ್ನು ಧರಿಸೋಣ
ಸರ್ವರಿಗೂ ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಶುಭಾಶಯಗಳು.