ಹೊನ್ನಾಳಿ : ಮಹಾತ್ಮಗಾಂಧಿಜೀಯವರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕರೆ ನೀಡಿದರು.
ಗಾಂಧಿಜಯಂತಿ ಹಿನ್ನೆಲೆಯಲ್ಲಿ ಹೊನ್ನಾಳಿ ನಗರದ ತುಂಗಭದ್ರಾ ನದಿತಟದಲ್ಲಿ ಸ್ವಚ್ಚತಾ ಕಾರ್ಯ ಹಮ್ಮಿಕೊಂಡಿದ್ದು, ನದಿಪಾತ್ರ ಸ್ವಚ್ಚಗೊಳಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು.
ಮಹತ್ಮಾ ಗಾಂಧಿಜೀಯವರು ನಮ್ಮ ದೇಶ ಕಂಡ ಅಮುಲ್ಯರತ್ನ, ಅವರ ಜೀವನ ಶೈಲಿ ನಮ್ಮಲ್ಲೇರಿಗೂ ಆದರ್ಶವಾಗಿದೆ ಎಂದರು.
ಶಾಂತಿ, ಅಂಹಿಸೆಯ ಮಾರ್ಗದ ಮೂಲಕ ಲಕ್ಷಾಂತರ ಜನರ ಹೃದಯ ಗೆದ್ದ ಮಹತ್ಮಾ ಗಾಂಧಿಜೀಯವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿದೆ ಎಂದ ಶಾಸಕರು,
ಉಪವಾಸ ಸತ್ಯಾಗ್ರಹ, ಅಸಹಕಾರ ಚಳುವಳಿಯ ಮೂಲಕ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದ್ದ ಮಹಾನ್ ನಾಯಕನ ತತ್ವ ಸಿದ್ದಾಂತಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು.
ಮಹಾತ್ಮಾ ಗಾಂಧಿಜೀಯವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ನದಿಪಾತ್ರ ಸ್ವಚ್ಚತಾ ಅಭಿಯಾನ ಹಮ್ಮಿಕೊಂಡಿದ್ದು, ಇದು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗ ಬಾರದು ಎಂದ ಶಾಸಕರು ಪ್ರತಿನಿತ್ಯ ತಮ್ಮ ಸುತ್ತಲಿನ ಪರಿಸರವನ್ನು ಪ್ರತಿಯೊಬ್ಬರೂ ಶುಚಿಯಾಗಿಟ್ಟುಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್, ಮಹಿಳಾಮೋರ್ಚ ತಾಲೂಕು ಅಧ್ಯಕ್ಷ ಉಮಾಓಂಕಾರ್, ಮುಖಂಡರಾದ ಶಾಂತರಾಜ್ ಪಟೇಲ್, ಅರಕೆರೆ ನಾಗರಾಜ್,ನೆಲವೊನ್ನೆ ಮಂಜುನಾಥ್,ಕುಳಗಟ್ಟೆ ರಂಗನಾಥ್, ಸೋಮುಪೈಲ್ವಾನ್, ಪುರಸಭೆ ಪ್ರಬಾರ ಅಧ್ಯಕ್ಷೆ ರಂಜಿತಾ ವಡ್ಡಿ ಚನ್ನಪ್ಪ ಸೇರಿದಂತೆ ಪುರಸಭೆ ಸದಸ್ಯರು, ಪಕ್ಷದ ಮುಖಂಡರು, ಸಾರ್ವಜನಿಕರಿದ್ದರು.