ಹೊನ್ನಾಳಿ : ಅವಳಿ ತಾಲೂಕಿನ ಅಭಿವೃದ್ದಿಯೇ ನನ್ನ ಮೂಲ ಮಂತ್ರ ಈ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮೂರು ಕೋಟಿ ಎಂಬತ್ತೆಂಟು ಲಕ್ಷ ರೂಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಮಾತು ಎಂದು ಸಾಧನೆಯಾಗ ಬಾರದು ಸಾಧನೆ ಮಾತಾಗ ಬೇಕು, ಈ ನಿಟ್ಟಿನಲ್ಲಿ ನಾನು ಅವಳಿ ತಾಲೂಕಿನಾಧ್ಯಂತ ಅಭಿವೃದ್ದಿ ಕೆಲಸ ಮಾಡುತ್ತಿದ್ದೇನೆ ಎಂದ ಶಾಸಕರು, ಅವಳಿ ತಾಲೂಕುಗಳನ್ನು ರಾಜ್ಯದಲ್ಲದೇ ಮಾದರಿ ತಾಲೂಕುಗಳನ್ನಾಗಿ ಮಾಡ ಬೇಕೆಂದು ಪಣ ತೊಟ್ಟಿದ್ದೇನೆ ಎಂದರು.
ಈಗಾಗಲೇ ಸಾವಿರಾರು ಕೋಟಿ ಅನುದಾನಗಳನ್ನು ತಂದು ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳನ್ನು ಅಭಿವೃದ್ದಿ ಮಾಡಿದ್ದೇನೆ ಎಂದ ಶಾಸಕರು ಮತ್ತಷ್ಟು ಅನುದಾನಗಳನ್ನು ತಂದು ಅವಳಿ ತಾಲೂಕುಗಳನ್ನು ಅಭಿವೃದ್ದಿ ಮಾಡಲು ತಣ ತೊಟ್ಟಿದ್ದೇನೆ ಎಂದರು.
ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಅವಳಿ ತಾಲೂಕಿನ ಅಭಿವೃದ್ದಿಗೆ ನಾನು ಕೇಳಿದ್ದಕ್ಕಿಂತಲೂ ಹೆಚ್ಚಿಗೆ ಅನುದಾನ ನೀಡಿದ್ದರು, ಅದೇ ರೀತಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೂ ಕೂಡ ಅವಳಿ ತಾಲೂಕಿನ ಮೇಲೆ ವಿಶೇಷವಾದ ಪ್ರೀತಿ ಇದ್ದು ಅವಳಿ ತಾಲೂಕಿನ ಅಭಿವೃದ್ದಿ ಅವರೂ ಕೂಡ ಅನುದಾನ ಬಿಡುಗಡೆ ಮಾಡುತ್ತಿದ್ದಾರೆ ಎಂದರು.
ಅವಳಿ ತಾಲೂಕುಗಳು ನನ್ನ ಜನ್ಮಭೂಮಿ ಕರ್ಮಭೂಮಿ ಈ ನಿಟ್ಟಿನಲ್ಲಿ ಅವಳಿ ತಾಲೂಕುಗಳನ್ನು ರಾಜ್ಯದಲ್ಲದೇ ಮಾದರಿ ತಾಲೂಕು ಮಾಡುವುದರ ಜೊತೆಗೆ ಧೂಳುಮುಕ್ತ ತಾಲೂಕುಗಳನ್ನಾಗಿ ಮಾಡುತ್ತೇನೆ ಎಂದರು.
ವಿವಿಧ ಕಾಮಗಾರಿಗಳ ಗುದ್ದಲಿಪೂಜೆ, ಉದ್ಘಾಟನೆ : ತಾಲೂಕಿನ ಗೋವಿನಕೋವಿ ಗ್ರಾಮದಲ್ಲಿ 90 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ಅಭಿವೃದ್ದಿ ಹಾಗೂ ಡಾಂಬರೀಕರಣ ಕಾಮಗಾರಿ ಶಂಕುಸ್ಥಾಪನೆ, ಸುಂಕದಕಟ್ಟೆ ಗ್ರಾಮದಲ್ಲಿ 100 ಲಕ್ಷ ರೂಪಾಯಿ ವೆಚ್ಚದಲ್ಲಿ ಸೇವಾರಸ್ತೆ ದುರಸ್ಥಿ ಹಾಗೂ ಅಭಿವೃದ್ದಿ ಕಾಮಗಾರಿ ಶಂಕುಸ್ಥಾಪನೆ, ಎಚ್.ಗೋಪಗೊಂಡನಹಳ್ಳಿಯಿಂದ ಮಾರಿಕೊಪ್ಪವರೆಗೆ ರಸ್ತೆ ಅಭಿವೃದ್ದಿ ಹಾಗೂ ಡಾಂಬರೀಕರಣ ಕಾಮಗಾರಿ 100 ಲಕ್ಷ ರೂಪಾಯಿ ಶಂಕುಸ್ಥಾಪನೆ ಹಾಗೂ ಮಾದನಬಾವಿ ಗ್ರಾಮದಲ್ಲಿ 45 ಲಕ್ಷ ರೂಪಾಯಿ ಹಾಗೂ 53 ಲಕ್ಷ ರೂಪಾಯಿ ವೆಚ್ಚದಲ್ಲಿ ಎರಡು ರಸ್ತೆಗಳ ಉದ್ಘಾಟನೆಯನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ನೆರವೇರಿಸಿದರು.
ಈ ಸಂದರ್ಭ ಗ್ರಾಮಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.