ನ್ಯಾಮತಿ ತಾಲೂಕು ಸುರಹೊನ್ನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯನ್ನು ಎರಡನೆಯ ದಿನವಾದ ಇಂದು ಸ್ವತಂತ್ರ ಅಮೃತ ಮಹೋತ್ಸವದ ಅಂಗವಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಕಾರ್ಯಕ್ರಮವನ್ನು ಗ್ರಾಮದಲ್ಲಿರುವ ಬನಶಂಕರಿ ದೇವಸ್ಥಾನ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಯಿತು. ಉದ್ಘಾಟನೆಯನ್ನು ಮಾಜಿ ಶಾಸಕರಾದ ಶಾಂತನಗೌಡ ರವರು ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಚಾಲನೆಯನ್ನು ಕೊಟ್ಟರು.
ನಂತರ ಮಾತನಾಡಿದ D G ಶಾಂತನಗೌಡ ರವರು ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರು ಈ ದೇಶಕ್ಕೆ ಇವರ ಕೊಡುಗೆಯನ್ನು ನೆನಪಿಸಿಕೊಂಡು ಇವರುಗಳು ದೇಶಕ್ಕೆ ಸ್ವಾತಂತ್ರ ತಂದುಕೊಡಲಿಕ್ಕೆ ಇವರ ಕೊಡುಗೆ ಮಹತ್ತರವಾದದ್ದು ಇವರುಗಳು ಹಾಕಿ ಕೊಟ್ಟಂತ ಮಾರ್ಗದರ್ಶನ ಮತ್ತು ಅಡಿಪಾಯದಲ್ಲಿ ನಾವುಗಳು ನಡೆದುಕೊಂಡು ಹೋಗ ಬೇಕಾಗಿದೆ ಎಂದು ಹೇಳಿದರು.


ಜಿಲ್ಲಾಧ್ಯಕ್ಷರಾದ ಎಚ್ಪಿ ಮಂಜಪ್ಪ ಮಾತನಾಡಿ ಬಿಜೆಪಿಯವರು ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಗಳಿಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಅವರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಡಾಕ್ಟರ್ ಈಶ್ವರ ನಾಯಕ್ ಎಚ್ಡಿ ಉಮಾಪತಿ ಮತ್ತು ಬಿ ಸಿದ್ದಪ್ಪನವರು ಸಹ ಮಾತನಾಡಿ ಈ ಎರಡು ಮಹನೀಯರ ಬಗ್ಗೆ ಮತ್ತು ತಂದುಕೊಟ್ಟಂತಹ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ಕಾರ್ಯಕರ್ತರುಗಳಿಗೆ ತಿಳಿಸಿದರು.


ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಡಿ ಜಿ ಶಾಂತನ ಗೌಡ್ರು ಜಿಲ್ಲಾಧ್ಯಕ್ಷರಾದ ,#ಹೆಚ್ಬಿಮಂಜಪ್ಪನವರು ಸಾದು ವೀರಶೈವ ಸಮಾಜದ ಅಧ್ಯಕ್ಷರಾದ ಕೊಡಿಕೊಪ್ಪ ಶಿವಣ್ಣರವರು, ಪಕ್ಷದ ಮುಖಂಡರಾದ #ಸಿದ್ದಪ್ಪನವರು ಹಿಂದುಳಿದ ವರ್ಗದ ಉಪಾಧ್ಯಕ್ಷರಾದ #ಉಮಾಪತಿಯವರು ಜಿಲ್ಲಾ ಪಂಚಾಯತ್ ಸದಸ್ಯರಾದ ವಿಶ್ವನಾಥ್ ಡಿಜಿ, ಮತ್ತು ಡಾಕ್ಟರ್ ಈಶ್ವರ್ನಾಯ್ಕ್ , ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಆರ್ನಾಗಪ್ಪನವರು, ನ್ಯಾಮತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಾಗೀಶಣ್ಣ, ನ್ಯಾಮತಿ ಟೌನ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಲೋಕೇಶ್, ಸಾಸ್ವೆಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ಎಗದ್ದಿಗೇಶ್.ಯುತ್ ಕಾಂಗ್ರೆಸ್ ತಾಲೂಕ್ ಅಧ್ಯಕ್ಷರಾದ ಪ್ರಶಾಂತ್_ಬಣ್ಣಜ್ಜಿ, ಇನ್ನೂ ಅನೇಕ ಕಾಂಗ್ರೆಸ್ ಘಟಕದ ಅಧ್ಯಕ್ಷರು ಉಪಾಧ್ಯಕ್ಷರು ಸುರಹೊನ್ನೆ ಗ್ರಾಮದ ಹಿರಿಯರು ಕಿರಿಯರು ಪಕ್ಷದ ಮುಖಂಡರು ಕಾರ್ಯಕರ್ತರು ಮತ್ತು ಗೌಡ್ರ ಅಭಿಮಾನಿಗಳು ಸಹ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *