ದಿನಾಂಕ : 04-10-2021 ಉತ್ತರಪ್ರದೇಶದಲ್ಲಿ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಹಾಗೂ ಆತನ ಸುಪುತ್ರ ವಾಹನದ ಮೂಲಕ ಪ್ರತಿಭಟನೆ ನಿರತ ರೈತರ ಮೇಲೆ ವಾಹನವನ್ನು ಹರಿಸಿ ಕೊಲೆ ಮಾಡಿರುವುದನ್ನು ಖಂಡಿಸಿ ಹಾಗೂ ಸಂತ್ರಸ್ತ ರೈತ ಕುಟುಂಬಕ್ಕೆ ಸಾಂತ್ವನ ಹೇಳಲು ತೆರಳುತ್ತಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಪ್ರಿಯಾಂಕಾ ಗಾಂಧಿ ರವರನ್ನ ತಡೆದು ಅಪಮಾನಗೊಳಿಸಿರುವ ಯುಪಿಎ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
ದೇಶದ ಇತಿಹಾಸದಲ್ಲೇ ರೈತರನ್ನು ಈ ರೀತಿ ಅವಮಾನಿಸಿ ಕಗ್ಗೊಲೆ ಮಾಡಿದ ಇತಿಹಾಸವನ್ನು ಕೇಂದ್ರ ಹಾಗೂ ಉತ್ತರಪ್ರದೇಶ ಸರ್ಕಾರ ಇಂದು ನಿರ್ಮಿಸಿದೆ.
ಸುಮಾರು ಹತ್ತು ತಿಂಗಳಿನಿಂದ ದೇಶದ ಅನ್ನದಾತರು ತಮ್ಮ ಬೇಡಿಕೆಯನ್ನು ಈಡೇರಿಸಬೇಕೆಂದು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ ಪ್ರತಿಯೊಬ್ಬ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವರು ರೈತರ ಮನವಿಯನ್ನು ತಿರಸ್ಕರಿಸಿ ರೈತರಿಗೆ ಆಕ್ರೋಶ ಬರುವ ರೀತಿಯಲ್ಲಿ ಟೀಕೆ ನಡೆಸುತ್ತಿದ್ದರೆ ಇಂತಹ ಬೇಜವಾಬ್ದಾರಿ ಸರ್ವಾಧಿಕಾರಿ ಸರ್ಕಾರ ದೇಶದಿಂದ ತೊಲಗದೆ ಹೋದರೆ ಅನ್ನದಾತರಿಗೆ ಹಾಗೂ ದೇಶದ ಜನತೆಗೆ ಉಳಿಗಾಲವಿಲ್ಲ ಎಂಬುದು ಈಗ ನರೇಂದ್ರ ಮೋದಿ ದುರಾಡಳಿತ ದಿಂದ ಬಹಿರಂಗವಾಗಿದೆ.
ಸರ್ವಾಧಿಕಾರಿ ನರೇಂದ್ರ ಮೋದಿ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೆ ರೈತರನ್ನೇ ವಾಮಮಾರ್ಗದಲ್ಲಿ ರೈತರ ಪ್ರತಿಭಟನೆ ಹತ್ತಿಕ್ಕುವ ಕುತಂತ್ರ ನಡೆಸುತ್ತಿದ್ದಾರೆ. ಕೇಂದ್ರದ ಗೃಹಖಾತೆ ರಾಜ್ಯಸಚಿವ ರೈತರ ಸಾವಿಗೆ ಮೂಲ ಕಾರಣ ಕೂಡಲೇ ಬಂಧಿಸಬೇಕು ಹಾಗೂ
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ, ಮುಗ್ಧ ರೈತರ ಸಾವಿನಲ್ಲಿ ಯೋಗಿ ಆದಿತ್ಯನಾಥನ ಸರ್ಕಾರದ ವೈಫಲ್ಯದ ನಿರ್ಲಕ್ಷ್ಯತನವೂ ಎತ್ತಿತೋರುತ್ತಿದೆ. ಕೂಡಲೇ ಇವರನ್ನು ಬಂಧಿಸಿ ಈ ಸರ್ಕಾರವನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಯಿತು.
ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ನಡೆದ ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಎಸ್ ಮನೋಹರ್ ಜಿ ಜನಾರ್ದನ್ ಎ ಆನಂದ್ ಎಲ್ ಜಯಸಿಂಹ ಪ್ರಕಾಶ್ ನವೀನ್ ಪುಟ್ಟರಾಜು ಮಹೇಶ್ ಉಮೇಶ್ ವೆಂಕಟೇಶ್ ಲೋಕೇಶ್ ಬಾಬು ವಾಸು ಶಂಕರ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.