ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ
ಇಲಾಖೆ ಪ್ರಾಯೋಕತ್ವದಲ್ಲಿ ಸಿಡಾಕ್ ಧಾರವಾಡ ಸಂಸ್ಥೆಯ ಮೂಲಕ
ಅನುಷ್ಠಾನಗೊಳ್ಳುತ್ತಿರುವ 10 ದಿನಗಳ ಉದ್ಯಮಶೀಲತಾ ತರಬೇತಿ
ಕಾರ್ಯಕ್ರಮವನ್ನು ನವೆಂಬರ್ ತಿಂಗಳಿನ ಎರಡನೇ ವಾರ
ದಾವಣಗೆರೆ ಜಿಲ್ಲೆಯಲ್ಲಿ ಸಂಘಟಿಸಲು ಉದ್ದೇಶಿಸಲಾಗಿದೆ.
‘ಸ್ವಂತ ಉದ್ಯೋಗ ಸ್ಥಾಪಿಸಿ, ಸುಖ ಸಮೃದ್ಧಿ ಸಾಧಿಸಿ’ ಎಂಬಂತೆ
ದಾವಣಗೆರೆಯ ಸಿಡಾಕ್ ಕೇಂದ್ರದಿಂದ ಸ್ವಂತ ಉದ್ಯಮ ಸ್ಥಾಪಿಸಲು
ಇಚ್ಛಿಸುವ ಹಾಗೂ ಸ್ವ-ಉದ್ಯಮ ಪ್ರಾರಂಭಿಸಿ ಉದ್ಯಮವನ್ನು
ಅಭಿವೃದ್ಧಿಪಡಿಸಲು ಆಸಕ್ತ ಹೊಂದಿರುವ ಅಭ್ಯರ್ಥಿಗಳಿಗೆ 10 ದಿನಗಳ
ವಸತಿಯುತ (ಉಚಿತ) ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ಅದರಂತೆ ಉದ್ಯಮಕ್ಕೆ ಸಂಬಂಧಿಸಿದಂತೆ ಉದ್ಯಮ ಸ್ಥಾಪಿಸಲು
ಅನುಸರಿಸಬೇಕಾದ ಮಜಲುಗಳು, ಸರ್ಕಾರದ ನಿಯಮಗಳು
ಮತ್ತು ನಿಯಂತ್ರಣಗಳು, ಸ್ಥಳೀಯ ಸಂಪನ್ಮೂಲಗಳ ಬಳಕೆ,
ವ್ಯವಹಾರ ನೋಂದಣಿ ಮಾಡುವ ವಿಧಾನ, ತೆರಿಗೆ ನಿಯಮಗಳು,
ಬ್ಯಾಂಕ್ ಸಾಲ ಯೋಜನೆಗಳು, ಸಾಲಕ್ಕೆ ಅರ್ಜಿ ಸಲ್ಲಿಸುವ ವಿಧಾನ,
ಸರ್ಕಾರದ ಯೋಜನೆಗಳು, ಯೋಜನಾ ವರದಿ ತಯಾರಿಕೆ, ಹಣಕಾಸು
ನಿರ್ವಹಣೆ, ಮಾರುಕಟ್ಟೆ ನಿರ್ವಹಣೆ ಹಾಗೂ ಮುಂತಾದ
ವಿಷಯಗಳ ಬಗ್ಗೆ ತರಬೇತಿಯಲ್ಲಿ ಮಾಹಿತಿ ನೀಡಲಾಗುವುದು.
ತರಬೇತಿಯನ್ನು ಪಡೆಯಲು ಇಚ್ಛಿಸುವ ಆಸಕ್ತರು ಹೆಚ್ಚಿನ
ವಿವರಗಳಿಗಾಗಿ ಮೊಬೈಲ್ ಸಂಖ್ಯೆ: 9164742033 ಬಸವರಾಜ ಜಿ.ಬಿ
ತರಬೇತುದಾರರು, ಜಂಟಿ ನಿರ್ದೇಶಕರು, ಸಿಡಾಕ್ ಕಚೇರಿ, ಪ್ಲಾಟ್
ನಂ.78 ಎ-(ಪಿ1), ಕರೂರು ಕೈಗಾರಿಕಾ ಪ್ರದೇಶ, ಪಿ.ಬಿ ರಸ್ತೆ ದಾವಣಗೆರೆ
ಇವರನ್ನು ಸಂಪರ್ಕಿಸಬಹುದೆಂದು ಸಿಡಾಕ್ ಜಂಟಿ ನಿರ್ದೇಶಕರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *