ಸನಾತನ ಹಿಂದೂ ಧರ್ಮದ ಆಚಾರ-ವಿಚಾರಗಳನ್ನು ಅನುಸರಿಸುತ್ತಾ,,,,
ಸತ್- ಸತ್ಸಂಪ್ರದಾಯ ವಿಧಿ-ವಿಧಾನಗಳನ್ನು ಅಳವಡಿಸಿಕೊಂಡು,, ಸಕಲ ಸದ್ಭಕ್ತರಿಗೆ ಸನ್ಮಾರ್ಗ ತೋರುತ್ತಾ,,, ದುರದೃಷ್ಟವಶಾತ್ ತನ್ನ ಮೂಲ ಸಮುದಾಯವನ್ನೇ ಕಡೆಗಣಿಸುತ್ತಿರುವ ಶ್ರೀ ಶ್ರೀ ಶ್ರೀ 10008 ಜಗದ್ಗುರುಗಳ ಪಾದಾರವಿಂದಗಳಿಗೆ ನಮಸ್ಕರಿಸಿ, ಈ ಬಡ ಬೇಡಜಂಗಮ ನ ಪ್ರಶ್ನೆಗಳಿಗೆ ಅವರಲ್ಲಿ ಉತ್ತರವನ್ನು ನಿರೀಕ್ಷಿಸುತ್ತೇನೆ…

ಪ್ರಸ್ತುತ ನಮ್ಮ ಜಂಗಮ ಸಮುದಾಯವು ಸಂವಿಧಾನದ ಯಾವ ಜಾತಿ ಕಾಲಂದಲ್ಲಿ ಬರುತ್ತದೆ ಎಂದು ಗೊತ್ತಿದೆಯೇ? ಅಥವಾ ಸಂವಿಧಾನದಲ್ಲಿ ನಮ್ಮ ಸಮುದಾಯವು ಅಸ್ತಿತ್ವದಲ್ಲಿಯೇ ಇಲ್ಲವೋ?

ನಮ್ಮ ಸಮುದಾಯವು ಆರ್ಥಿಕವಾಗಿ ಅತ್ಯಂತ ಕೆಳ ಹಂತದಲ್ಲಿದ್ದು ಅದರ ಕಲ್ಪನೆ ತಮ್ಮಲ್ಲಿ ಇದೆಯೋ ಅಥವಾ ತಮಗೆ ದೊರೆಯುತ್ತಿರುವ ಸಕಲ ಸೌಲಭ್ಯ-ಸೌಭಾಗ್ಯ, ಭೋಗ-ಭಾಗ್ಯ, ರಾಜಾದಿತ್ಯದ ಪೊರದೆದಿಂದಾಗಿ ಕಾಣುತ್ತಿಲ್ಲವೋ?

ಜಾತಿಯೇ ಅಲ್ಲದ ವೀರಶೈವ ಲಿಂಗಾಯತ ದಲ್ಲಿ ಷಡ್ಯಂತ್ರದಿಂದ ಜಂಗಮರಿಗೆ ನೀಡುತ್ತಿರುವ 3-ಬಿ ಜಾತಿ ಪ್ರಮಾಣ ಪತ್ರ ದಿಂದ ಬಡ ಜಂಗಮರಿಗೆ ಸಿಗಬೇಕಾದ ಪರಿಶಿಷ್ಟ ಜಾತಿ ಪ್ರಮಾಣಪತ್ರ ದೊರೆಯದೆ ಅನ್ಯಾಯಕ್ಕೊಳಗಾಗಿದ್ದಾರೆ, ಹಾಗೂ ನಕಲಿ ವಿಚಾರಣೆಗಳಿಗೆ ಒಳಗಾಗಿ ನೊಂದುಕೊಳ್ಳುತ್ತಿರುವ ಬೇಡ ಜಂಗಮರ ಬಗ್ಗೆ ತಮಗೆ ಗಮನ ವಿದೆಯೇ?

ಜಾತಿಗೊಂದು ಗುರುಗಳನ್ನು ಮಾಡಿಕೊಂಡು ಅವರವರ ಸಮುದಾಯದ ಆರ್ಥಿಕ ದೃಢತೆಯನ್ನು ಸದೃಢವಾಗಿ ಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಮುಂದಿನ ದಿನಗಳಲ್ಲಿ ತಮ್ಮನ್ನು ಅಡ್ಡಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ವಿಜೃಂಭಣೆಯಿಂದ ಮೆರೆಸುತ್ತಾರೆ ಎಂಬ ಅಗಾಧ ವಿಶ್ವಾಸ ಇನ್ನೂ ತಮ್ಮಲ್ಲಿ ಉಳಿದಿದೆಯೇ?

ಒಂದು ವೇಳೆ ಬೇರೆ ಸಮುದಾಯದ ಭಕ್ತವೃಂದ ಸಂಪೂರ್ಣವಾಗಿ ಪಂಚ ಪೀಠಗಳನ್ನು ತಿರಸ್ಕರಿಸಿ (ಜಂಗಮರನ್ನು ಹೊರತುಪಡಿಸಿ) ಅವರವರ ಗುರುಪೀಠ ಗಳಿಗೆ ವಿಧೇಯರಾದರೆ ತಮ್ಮ ಮುಂದಿನ ಯೋಜನೆ ಏನು?

ಸಂವಿಧಾನ ಬದ್ಧವಾಗಿರುವ ನಮ್ಮ ಜಾತಿ ಪ್ರಮಾಣಪತ್ರ ಪಡೆಯಲು ಅದೆಷ್ಟೋ ಜನ ಹೋರಾಡುತ್ತಿರುವಾಗ ತಮ್ಮ ಅಭಿಪ್ರಾಯ,ಅನಿಸಿಕೆ, ಪ್ರತಿಕ್ರಿಯೆ ಇಲ್ಲಿಯವರೆಗೂ ಶೂನ್ಯವಾಗಿದೆ ಏಕೆ?

ಒಂದು ವೇಳೆ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಸಿಕ್ಕರೆ ತಮಗೇನಾದರೂ ಮುಜುಗರವೇ? ಸಂವಿಧಾನದ ಪರಿಶಿಷ್ಟ ಜಾತಿ ಪದದ ಸಂಪೂರ್ಣ ಪರಿಕಲ್ಪನೆ ತಮಗಿದೆಯೇ?
ಜಂಗಮರೇ ಬೇಡ ಜಂಗಮರು ಎಂಬ ಗೀತಾ ಕುಲಕರ್ಣಿ ಅವರ ನ್ಯಾಯಾಲಯದ ತೀರ್ಪಿನ ಆದೇಶದ ಬಗ್ಗೆ ತಮಗೆ ಮಾಹಿತಿ ಇದೆಯೇ?

ಭವಿಷ್ಯತ್ತಿನಲ್ಲಿ ನಮ್ಮ ಸಮುದಾಯವು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸದೃಢವಾಗದ ಹೊರತು ನಮ್ಮ ಗುರು ಪೀಠಗಳ ಅಸ್ತಿತ್ವಕ್ಕೆ ಧಕ್ಕೆ ಬರಲಾರದು ಎಂಬ ವಿಶ್ವಾಸವಿದೆಯೇ?

ನ್ಯಾಯಬದ್ಧ ಹಕ್ಕಿಗಾಗಿ ನಾವೆಲ್ಲರೂ ಹೋರಾಡುವುದು ತಪ್ಪೇ?
ಪ್ರಸ್ತುತ ಹಳ್ಳಿಗಳಲ್ಲಿ ಜಂಗಮನಿಗೆ ದೊರೆಯುತ್ತಿರುವ ಸೌಲಭ್ಯಗಳು ಹಾಗೂ ಅವನ ಆರ್ಥಿಕ ಸ್ಥಿತಿ ಬಗ್ಗೆ ಗಮನ ವಿದೆಯೇ?

ಇನ್ನಾದರೂ ಜಂಗಮರ ಬಗೆಗಿನ ತಮ್ಮ ಕಾಳಜಿ ಈ ಹೋರಾಟಕ್ಕೆ ತಾವು ಕೈ ಜೋಡಿಸುವುದರ ಮೂಲಕ ನಮ್ಮ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡುತ್ತಿರಿ ಎಂಬ ವಿಶ್ವಾಸವನ್ನು ನಾವೆಲ್ಲ ಬೇಡ ಬಡ ಜಂಗಮರು ನಿರೀಕ್ಷಿಸಬಹುದೇ…?

       (ಉತ್ತರದ ನಿರೀಕ್ಷೆಯಲ್ಲಿ...)

   ಧನ್ಯವಾದಗಳೊಂದಿಗೆ 

ದಿನಾಂಕ: 03/10/2021
ಸ್ಥಳ: ಪ್ರತಿ ಬೇಡಜಂಗಮನ ಹೃದಯಾಂತರಾಳ.

ಇಂತಿ-
ಸಹಸ್ರಾರು ಬೇಡ ಜಂಗಮರ ಪರವಾಗಿ..

Leave a Reply

Your email address will not be published. Required fields are marked *