ರಾಜ್ಯದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ತಲಪಲು ಸಾಮಾಜಿಕ ಮತ್ತು ಶೈಕ್ಷನಿಕ ಸಮೀಕ್ಷೆ ಅಗತ್ಯವೆಂದು ಹಿಂದಿನ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಶ್ರೀ.ಸಿದ್ದರಾಮಯ್ಯ ರವರು 23-1-2014 ರಲ್ಲಿ ಆದೇಶ ಮಾಡಿರುವುದು ಸರಿಯಷ್ಟೆ.
ವಿವಿಧ ಜಾತಿ ಜನಾಂಗಗಳ ಅಭಿವೃದ್ಧಿಯಲ್ಲಿ ಸಮತೋಲನ ಕಾಪಾಡಲು ಜಾತಿವಾರು ಜನಗಣತಿ ಅನಿರ್ವಾಯವು ಹೌದು. ಸಾಮಾಜಿಕ ನ್ಯಾಯದ ಗುಲ ಸಾಧನೆಗೆ ಕರ್ನಾಟಕ ಹಿಂದುಆದ ವರ್ಗಗಳ ಆಯೋಗ ಜನಗಣತಿ ಮುಗಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಸಚಿವ ಸಂಪುಟ ಸಭೆಗೆ ಸಲ್ಲಿಸಿದ್ದು, ಸಭೆಯಲ್ಲಿ ಈ ವರದಿ ಬಗ್ಗೆ ಯಾವುದೇ ಚರ್ಚೆ ಮಾಡದೆ ತಿರಸ್ಕಾರ ಮಾಡಿರುವುದು ರಾಜ್ಯದ ಹಿಂದುಆದ ವರ್ಗಗಳ ಸಮುದಾಯಗಳಗೂ ಅವಮಾನ ಮಾಡಿದಂತೆ ಆಗಿದೆ.
ಆದ್ದರಿಂದ ಮತ್ತೆ ಪುನರ್ ಪರಿಶೀಲಿಸಿ ಹಿಂದುಆದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿ ಗಣತಿ ಸಮೀಕ್ಷೆ ಕೂಡಲೇ ಸರ್ಕಾರದಿಂದ ವರದಿ ಬಿಡುಗಡೆ ಮಾಡಬೇಕಾಗಿ ರಾಜ್ಯ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷರಾದ ಎಂ ಡಿ ಲಕ್ಷ್ಮಿ ನಾರಾಯಣ್ ರವರು ಸರ್ಕಾರಕ್ಕೆ ಒತ್ತಾಯಿಸಿದರು.