ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ 75ನೇ
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಪ್ಯಾನ್ ಇಂಡಿಯಾ
ಅವೇರ್‍ನೆಸ್ ಅಂಡ್ ಔಟ್‍ರೀಚ್ ಕಾರ್ಯಕ್ರಮ ನಿಮಿತ್ಯ ಜಿಲ್ಲೆಯಾದ್ಯಂತ
ಎಲ್ಲಾ ತಾಲ್ಲೂಕುಗಳಲ್ಲಿ ಅ.02 ರಿಂದ ಅ.14 ರವರೆಗೆ ರಾಷ್ಟ್ರೀಯ
ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ನಿರಂತರವಾಗಿ
ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
ಅ.02 ರಂದು ಗಾಂಧೀ ಜಯಂತಿ ಆಯೋಜಿಸಿ ಪ್ರಭಾತ್ ಪೇರಿಯ
ಮುಖಾಂತರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ
ರಾಜೇಶ್ವರಿ ಎನ್ ಹೆಗಡೆಯವರು ಕಾರ್ಯಕ್ರಮಕ್ಕೆ ಚಾಲನೆ
ನೀಡಿದ್ದಾರೆ. ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಇಲಾಖೆಯ ವತಿಯಿಂದ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ
ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಅ.03 ರಂದು ಪೋಕ್ಸೊ ಕಾಯ್ದೆ ಹಾಗೂ ಮಾನವ ಕಳ್ಳ
ಸಾಗಾಣಿಕೆ ತಡೆ ಕಾಯ್ದೆಯ ಬಗ್ಗೆ ಜನಜಾಗೃತಿ ಮೂಡಿಸಲಾಗಿದೆ. ಅ.4
ರಿಂದ 07 ರವರೆಗೆ ಲಿಂಗತ್ವ ಅಲ್ಪಸಂಖ್ಯಾತ ವರ್ಗದವರ ಹಕ್ಕುಗಳ
ಬಗ್ಗೆ, ಕೌಟುಂಬಿಕ ಕಲಹ ತಡೆ ಹಾಗೂ ವರದಕ್ಷಿಣೆ ನಿರ್ಮೂಲನಾ
ಕಾಯ್ದೆಯ ಬಗ್ಗೆ, ಆಸ್ತಿ ಮತ್ತು ನೋಂದಣಿ ಕಾಯ್ದೆ, ದತ್ತು
ಸ್ವೀಕಾರ ಮತ್ತು ಜೀವನ ನಿರ್ವಹಣೆ ಬಗೆಗಿನ ಇತ್ತೀಚಿನ ಕಾನೂನಿನ ಬಗ್ಗೆ
ನಿರಂತರವಾಗಿ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ
ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಅ.08 ರಂದು ಬಾಲ್ಯ ವಿವಾಹ ಹಾಗೂ ಬಾಲ ಕಾರ್ಮಿಕ ತಡೆಯ
ಕಾನೂನುಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಇಲಾಖೆಯಲ್ಲಿ ಹಾಗೂ ದಾವಣಗೆರೆಯ ಗ್ರಾಮಾಂತರ
ಪ್ರದೇಶಗಳಲ್ಲಿ ಕಾನೂನು ಅರಿವು ಕಾರ್ಯಕ್ರಮ
ಹಮ್ಮಿಕೊಂಡಿದ್ದು ಸಾರ್ವಜನಿಕರು ಅದರ ಉಪಯೋಗವನ್ನು
ಪಡೆದುಕೊಳ್ಳಬಹುದಾಗಿದೆ. ಇಂತಹ ಕಾರ್ಯಕ್ರಮಗಳು
ದಾವಣಗೆರೆಯಲ್ಲಿ ಮಾತ್ರವಲ್ಲದೇ ಜಗಳೂರು, ಹರಿಹರ, ಹೊನ್ನಾಳಿ,
ಹಾಗೂ ಚನ್ನಗಿರಿಯ ವಿವಿಧ ಸ್ಥಳಗಳಲ್ಲಿ ಜರುಗಲಿದ್ದು
ಸಂಬಂಧಿಸಿದವರು ದಾವಣಗೆರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ
ಅಥವಾ ತಾಲ್ಲೂಕು ಕಾನೂನು ಸೇವಾ ಸಮಿತಿಗಳನ್ನು ಸಂಪರ್ಕಿಸಿ ಈ
ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ದಾವಣಗೆರೆ ಹಳೆಯ
ನ್ಯಾಯಾಲಯ ಸಂಕೀರ್ಣದಲ್ಲಿರುವ ಜಿಲ್ಲಾ ಕಾನೂನು ಸೇವಾ
ಪ್ರಾಧಿಕಾರ, ದಾವಣಗೆರೆ ಇವರನ್ನು ದೂರವಾಣಿ ಸಂಖ್ಯೆ 08192-296364,
ತಾಲ್ಲೂಕು ಕಾನೂನು ಸೇವಾ ಸಮಿತಿಗಳಾದ ಹರಿಹರ ದೂ.ಸಂ.08192-
296885, ಹೊನ್ನಾಳಿ ದೂ.ಸಂ.08188-251732,ಚನ್ನಗಿರಿ ದೂ.ಸಂ.08189-
229195 ಮತ್ತು ಜಗಳೂರು ದೂ.ಸಂ.08196-227600 ಇವರನ್ನು
ಸಂಪರ್ಕಿಸಬಹುದು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ
ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ
ಪ್ರವೀಣ್ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.