ಹರಿಹರ : ಅ. 20 ವಾಲ್ಮೀಕಿ ಜಯಂತಿಯ ಆಚರಣೆ ಇದೆ ಅದರ ಒಳಗಾಗಿ ಪರಿಶಿಷ್ಟ ಸಮುದಾಯಕ್ಕೆ ಶೇ 7.5 ಮೀಸಲಾತಿಯನ್ನು ನೀಡುವ ಘೋಷಣೆಯನ್ನು ಸರ್ಕಾರ ತೆಗೆದುಕೊಳ್ಳಬೇಕು ತಪ್ಪಿದಲ್ಲಿ ನಾವು ಹೋರಾಟದ ನಿರ್ಧಾರ ಪ್ರಕಟಿಸಿದ್ದೆ ಆದಲ್ಲಿ, ಒಂದೋ ನಾನಿರಬೇಕು, ಇಲ್ಲ ನೀವಿರಬೇಕು ಎಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ಶ್ರೀ ವಾಲ್ಮೀಕಿ ಪೀಠದ ಪ್ರಸನ್ನಾನಂದ ಶ್ರೀಗಳು ನೀಡಿದರು.
ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಈಚೆಗೆ ನಡೆದ ಜನಸ್ಪಂದನ ಕಾರ್ಯಾಗಾರ ಹಾಗೂ ಮೀಸಲಾತಿ ಹೆಚ್ಚಳ ಜನಜಾಗೃತಿಗಾಗಿ ಸಂವಾದ ಕಾರ್ಯಕ್ರಮದಲ್ಲಿ ಶ್ರೀಗಳು ಇದೇ ಅ.20 ರಂದು ಪೀಠದಲ್ಲಿ ವಾಲ್ಮೀಕಿ ಜಯಂತಿ ನಡೆಯಲಿದೆ ಅಷ್ಟರೊಳಗೆ ಸರ್ಕಾರ ಒಳ್ಳೆಯ ತೀರ್ಮಾನವನ್ನು ಪ್ರಕಟಿಸಲಿದೆ ಎಂದು ಅಂದುಕೊಂಡಿದ್ದೇವೆ.
ಆದರೆ ಯಾವುದೇ ನಿರ್ಧಾರವನ್ನು ಸರ್ಕಾರ ಪ್ರಕಟಿಸಿದೇ ಇದ್ದಲ್ಲಿ ಅದೇ ದಿನ ನಾವು ನಮ್ಮ ಮುಂದಿನ ಹೋರಾಟದ ತೀರ್ಮಾನವನ್ನು ಪ್ರಕಟಿಸಲಿದ್ದೇವೆ. ಆಗ ನಾನಿರಬೇಕು ಇಲ್ಲವೇ ನಮ್ಮ ವಾಲ್ಮೀಕಿ ಸಮುದಾಯಕ್ಕೆ ನೀವಿರಬೇಕು ಎಂದ ಶ್ರೀಗಳು
ಇನ್ನೂ ಇಬ್ಬರಿಗೆ ಸಚಿವ ಸ್ಥಾನ ನೀಡಬೇಕೆಂಬ ಬೇಡಿಕೆ ಇದೆ ಎಂಬುದನ್ನು ನೆನಪು ಮಾಡಿದರು.
ಮಹಾತ್ಮ ಗಾಂಧೀಜಿಯವರು ತಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಕೊನೆಗೆ ಮಾಡು ಇಲ್ಲವೇ ಮಡಿ (ಡೂ ಆರ್ ಡೈ) ಅಸ್ತ್ರ ಪ್ರಯೋಗಿಸಿದರು.ಅದರಂತೆ ನಾವು ಹೋರಾಟದ ಅಂತಿಮ ನಿರ್ಧಾರ ಪ್ರಕಟಿಸುವುದರೊಳಗೆ ಸಮುದಾಯಕ್ಕೆ ಮೀಸಲಾತಿ ಸಂದೇಶ ಕೊಟ್ಟರೆ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ. ಇಲ್ಲವಾದರೆ ನಮ್ಮ ನಿರ್ಧಾರ ಪ್ರಕಟ ಮಾಡುತ್ತೇವೆ ಎಂದು ಬಿಜೆಪಿ ಶಾಸಕರುಗಳ ಸಮ್ಮುಖದಲ್ಲಿಯೇ ಸರ್ಕಾರಕ್ಕೆ ವಾಲ್ಮೀಕಿ ಶ್ರೀಗಳು ಕಠಿಣ ಎಚ್ಚರಿಕೆ ನೀಡಿದರು. ನಮ್ಮ ಸಹನೆಗೂ ಒಂದು ಮಿತಿಯಿದೆ ತಾಳ್ಮೆ ಯನ್ನು
ಪರೀಕ್ಷೆ ಮಾಡಬೇಡಿ ಬೇಗನೆ ಮೀಸಲಾತಿ ನಿರ್ಧಾರ ಕೈಗೊಳ್ಳಿ ರಾಜ್ಯದ ಇಡೀ ನಾಯಕ ಸಮುದಾಯ ಎದ್ದರೆ ನಮ್ಮನ್ನು ಎದುರಿಸಬೇಕಾಗು ತ್ತದೆ, ನಾವು ನೂಕಿದರೆ ನೀವು ಎಲ್ಲಿ ಬೀಳ್ತಿರೋ ಗೊತ್ತಿಲ್ಲ ಇಡೀ ಸಮುದಾಯ ಹೋರಾಟಕ್ಕೆ ಧುಮುಕಿದರೆ ಏನಾಗುತ್ತದೆ ನೋಡಿ, ದೇಶದಲ್ಲಿ ಮುಂದುವರಿದ ಸಮುದಾಯಕ್ಕೆ ಶೇಕಡ 10 ಮೀಸಲಾತಿ ಕೊಟ್ಟಿದ್ದೀರಿ ಯಾಕೆ ಅವರೇನು ಮೇಲಿಂದ ಇಳಿದು ಬಂದಿರುವರಾ..? ಎಂದು ಪ್ರಶ್ನಿಸಿದ ಶ್ರೀಗಳು,ಉದ್ಯೋಗ ಮತ್ತು ಶೈಕ್ಷಣಿಕವಾಗಿ ಮಕ್ಕಳಿಗೆ ಸಾಮಾಜಿಕ ನ್ಯಾಯ ನೀಡಲು ನಾವು ಮನವಿ ಮಾಡುತ್ತಿರುವುದಾಗಿ ತಿಳಿಸಿದರು.
ಈ ಸಮಯದಲ್ಲಿ ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ಮಸ್ಕಿ ಶಾಸಕ ಬಸವನಗೌಡ ತುರ್ವಿಹಾಳ್, ಎಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು, ರಾಯಚೂರ ಗ್ರಾಮಾಂತರ ಶಾಸಕ ಬಸವನಗೌಡ ದದ್ದಲ್, ಸಿರುಗುಪ್ಪ ಶಾಸಕ ಸೋಮಲಿಂಗಪ್ಪ, ಬಳ್ಳಾರಿ ಸಂಸದ ದೇವೇಂದ್ರಪ್ಪ, ನಿವೃತ್ತ ಜಿಲ್ಲಾಧಿಕಾರಿ ಬಿ.ಶಿವಪ್ಪ, ಮಠದ ಆಡಳಿತಾಧಿಕಾರಿ ಟಿ.ಓಬಳಪ್ಪ ಸೇರಿದಂತೆ ಅನೇಕ ಶಾಸಕರು ಸಮುದಾಯದ ಮುಖಂಡರುಗಳು ಭಾಗಿಯಾಗಿದ್ದರು.