ದಿನಾಂಕ 07-10-2021 ಕೇಂದ್ರ ಬಿಜೆಪಿ ಸರ್ಕಾರ ನಿರಂತರವಾಗಿ ನಿತ್ಯವೂ ಸಹ ಪೆಟ್ರೋಲ್ ಡೀಸೆಲ್ ಹಾಗೂ ಎಲ್ಪಿಜಿ ದರವನ್ನು ಏರಿಕೆ ಮಾಡುವುದರ ಮೂಲಕ ಜನಸಾಮಾನ್ಯರ ಮೇಲೆ ನಿರಂತರ ದರ ಏರಿಕೆ ಮಾಡಿ ಜನರ ಜೀವಕ್ಕೆ ಕುತ್ತು ತರುತ್ತಿದೆ, ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಬೆಲೆ ಏರಿಕೆಯನ್ನು ಕಂಡರೂ ಕಾಣದ ರೀತಿಯಲ್ಲಿ ಸರ್ವಾಧಿಕಾರಿ ಆಡಳಿತವನ್ನು ನಡೆಸುತ್ತಿದ್ದಾರೆ, ಮೋದಿ ಆಡಳಿತದಲ್ಲಿ ಸ್ವಾತಂತ್ರ್ಯ ನಂತರ ಬೆಲೆ ಏರಿಕೆಯನ್ನು ಹೆಚ್ಚಿಸಿದ ಪ್ರಧಾನಿ ನರೇಂದ್ರ ಮೋದಿ ದುರಾಡಳಿತ ಮೋದಿ ಆಡಳಿತದಲ್ಲಿ ಪ್ರತಿನಿತ್ಯವೂ ಜನರು ಜೀವನ ಸಾಗಿಸುವುದು ಅತ್ಯಂತ ಕಷ್ಟಕರವಾದ ಪರಿಸ್ಥಿತಿ ನಿರ್ಮಾಣವಾಗಿದೆ .
ಪೆಟ್ರೋಲ್ ಡೀಸೆಲ್ ಬೆಲೆ ನಿಯಂತ್ರಿಸಲು ಸಾಧ್ಯವಾಗದೆ ಜನರಿಗೆ ನಿತ್ಯವೂ ಬೆಲೆ ಏರಿಕೆಯ ಹೊರೆಯನ್ನು ಹೊರಿಸುವ ಮೂಲಕ ಕೇಂದ್ರ ಸರ್ಕಾರ ಬೇಜವಬ್ದಾರಿಯಾಗಿ ವರ್ತಿಸುತ್ತಿದೆ, ಇದರಿಂದ ಜನ ವಾಹನದಲ್ಲಿ ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ .
ಇನ್ನು ಎಲ್ ಪಿಜಿ ದರದಲ್ಲಿ ಪ್ರತಿ ತಿಂಗಳಿಗೆ 25 ರೂ ನಂತೆ ಹತ್ತು ತಿಂಗಳಿನಲ್ಲಿ 250 ರೂ ಏರಿಕೆ ಆದರೂ ಅದನ್ನು ತಡೆಯುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿಲ್ಲ, ಇಂದೂ ಸಹ ಮತ್ತೆ ಎಲ್.ಪಿ.ಜಿ ದರ₹ 15 ರೂ ಏರಿಕೆಯಾಗಿದೆ
ಪೆಟ್ರೋಲ್ ಡೀಸೆಲ್ ಪ್ರತಿ ಲೀಟರ್ ಗೆ ನಿತ್ಯವೂ ಮೂವತ್ತು ಮೂವತ್ತೈದು ಪೈಸೆಯಷ್ಟು ಏರಿಕೆಯಾಗಿದೆ ಡೀಸೆಲ್ 97 ರೂ ಪೆಟ್ರೋಲ್ 106 ರೂ ಗಡಿ ದಾಟಿದೆ ಇನ್ನು ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಂತೂ ಗಗನಕ್ಕೇರಿದೆ .
ಇದನ್ನು ನಿಯಂತ್ರಿಸುವ ಪ್ರಯತ್ನವನ್ನ ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರ ನಡೆಸದೆ ರೈತರ ಹೋರಾಟವನ್ನು ಹತ್ತಿಕ್ಕಲು ರೈತರ ಮೇಲೆ ವಾಹನ ಹರಿಸಿ ಕೊಲ್ಲುವ ಮೂಲಕ ಅತ್ಯಂತ ಹೇಯ ಕೃತ್ಯವನ್ನು ಬಿಜೆಪಿ ಸರ್ಕಾರ ನಡೆಸುತ್ತಿದೆ ,
ಈ ಸರ್ಕಾರ ತೊಲಗಬೇಕು ಇಲ್ಕದಿದ್ದರೆ ದೇಶದ ಜನರ ಸ್ಥಿತಿ ಅತ್ಯಂತ ಕ್ಲಿಷ್ಟಕರ ವಾಗುತ್ತದೆ ಇಂತಹ ಬೇಜವಾಬ್ದಾರಿ ಸರ್ಕಾರ ಕೂಡಲೆ ತೊಲಗಬೇಕು ಬೆಲೆಯೇರಿಕೆಯನ್ನು ನಿಯಂತ್ರಿಸಲು ವಿಫಲವಾಗಿರುವ ಮೋದಿ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ನಡೆದ ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಎಸ್. ಮನೋಹರ್,ಜಿ.ಶೇಖರ್,
ಎ.ಆನಂದ್,ಜಿ. ಜನಾರ್ಧನ್, ಪ್ರಕಾಶ್, ಮಹೇಶ್,ಪುಟ್ಟರಾಜು, ವೆಂಕಟೇಶ್, ಉಮೇಶ್ ಹಾಗೂ ಪಕ್ಷದ ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *