ದಾವಣಗೆರೆ ಅ.07
ಆಸ್ಪತ್ರೆಗಳಲ್ಲಿ ಆಕ್ಸಿಜನ್ ಲಭ್ಯತೆ ಸರಾಗವಾಗಲು ಪಿಎಂ ಕೇರ್ಸ್
ನಿಧಿಯಿಂದ ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ನಿರ್ಮಾಣ
ಮಾಡಲಾಗಿರುವ 1000 ಎಲ್.ಪಿ.ಎಂ ಆಕ್ಸಿಜನ್ ಪ್ಲಾಂಟ್ ಮತ್ತು ಪಿಎಸ್‍ಎ (ಪ್ರೆಶರ್
ಸ್ವಿಂಗ್ ಅಡ್ಸಾಪ್ರ್ಶನ್) ಯಿಂದ 1000 ಎಲ್.ಪಿ.ಎಂ ಸಾಮಥ್ರ್ಯದ ಪ್ರತ್ಯೇಕ 2
ಆಮ್ಲಜನಕ ಸ್ಥಾವರಗಳನ್ನು ಗುರುವಾರ ಕೇಂದ್ರ
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ನಗರಾಭಿವೃದ್ಧಿ
ಸಚಿವರಾದ ಹರ್ದಿಪ್ ಸಿಂಗ್ ಪುರಿ ಹಾಗೂ ಕೇಂದ್ರದ ಪೆಟ್ರೋಲಿಯಂ
ಮತ್ತು ನೈಸರ್ಗಿಕ ಅನಿಲ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆ
ರಾಜ್ಯ ಸಚಿವರಾದ ರಾಮೇಶ್ವರ ತೆಲಿ ಅವರ ಉಪಸ್ಥಿತಿಯಲ್ಲಿ ವರ್ಚುವಲ್
ಮೂಲಕ ಉದ್ಘಾಟಿಸಲಾಯಿತು.
ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿನ
ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ
ಮಾಯಕೊಂಡ ಶಾಸಕ ಪ್ರೊ.ಲಿಂಗಣ್ಣ ಅವರು ಆಕ್ಸಿಜನ್ ಪ್ಲಾಂಟ್
ಲೋಕಾರ್ಪಣೆ ಮಾಡಿದರು.
ಆಕ್ಸಿಜನ್ ಪ್ಲಾಂಟ್ ಉದ್ಘಾಟಿಸಿ ಮಾತನಾಡಿದ ಸಂಸದ
ಡಾ.ಜಿ.ಎಂ.ಸಿದ್ದೇಶ್ವರ, ಪ್ರಧಾನ ಮಂತ್ರಿ ಕೇರ್ಸ್ ನಿಂದ 1000 ಎಲ್.ಪಿ.ಎಂ
ಮತ್ತು ಪಿಎಸ್‍ಎ ಯಿಂದ 1000 ಎಲ್.ಪಿ.ಎಂ ಸಾಮಥ್ರ್ಯದ ಪ್ರತ್ಯೇಕ 2
ಆಮ್ಲಜನಕ ಸ್ಥಾವರಗಳು ವರ್ಚುವಲ್ ಮೂಲಕ ಇಂದು
ಲೋಕರ್ಪಣೆಗೊಂಡಿರುವುದು ಸಂತಸಕರ.
ಇದೊಂದು ಪ್ರಮುಖ ಆರೋಗ್ಯ ಸೌಕರ್ಯವಾಗಿದ್ದು, ಹೆಚ್ಚಿನ
ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಕೋವಿಡ್ ಮೊದಲನೇ ಅಲೆ
ಸಂದರ್ಭದಲ್ಲಿ ದೇಶದಲ್ಲಿ 1 ಲಕ್ಷ ಲೀ ಉತ್ಪಾದನಾ ಸಾಮಥ್ರ್ಯ
ಹೊಂದಲಾಗಿತ್ತು, ಹೀಗಾಗಿ ಹೊರದೇಶಗಳಿಂದ ಆಕ್ಸಿಜನ್ ಆಮದು
ಮಾಡಿಕೊಳ್ಳಲಾಗಿತ್ತು. ಆದರೆ ಪ್ರಸ್ತುತ ಪ್ರತಿ ನಿಮಿಷಕ್ಕೆ 4 ರಿಂದ 5
ಲಕ್ಷ ಲೀ ಆಕ್ಸಿಜನ್ ಉತ್ಪಾದಿಸಲಾಗುತ್ತಿದೆ ಎಂದರು.
ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು
ಹಾಗೂ ಹೊರದೇಶದಿಂದ ಆಕ್ಸಿಜನ್ ತರಿಸಬಾರದು, ಆಕ್ಸಿಜನ್
ಕೊರತೆಯಿಂದ ಯಾವುದೇ ಸಾವು ನೋವುಗಳು
ಉಂಟಾಗಬಾರದು ಎಂಬ ದೂರದೃಷ್ಟಿಯಿಂದ ಪ್ರಧಾನಮಂತ್ರಿ
ನರೇಂದ್ರ ಮೋದಿ ಅವರು ಪಿಎಂ ಕೇರ್ಸ್ ಫಂಡ್‍ನಿಂದ ರಾಜ್ಯ ಹಾಗೂ
ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿರುವ
ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಲಾಗಿದ್ದು
ಇಂದು ಲೋಕಾರ್ಪಣೆಗೊಂಡಿದೆ. ಹಾಗೂ ದೇಶದಲ್ಲಿರುವ ಬಡತನ
ನಿರ್ಮೂಲನೆ ಮಾಡಲು, ಪ್ರತಿಯೊಬ್ಬರಿಗೂ ಮನೆ, ನೀರು, ಆಹಾರ
ಒದಗಿಸಲು ಮತ್ತು ರೈತರಿಗೆ ದ್ವಿಗುಣ ಆದಾಯ ದೊರಕಿಸುವ
ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡು
ಕಾರ್ಯಪ್ರವೃತ್ತರಾಗಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಜಿಲ್ಲಾಸ್ಪತ್ರೆಯಲ್ಲಿನ 65-66ನೇ ವಾರ್ಡ್ ಮಕ್ಕಳ ತೀವ್ರ
ನಿಗಾ ಚಿಕಿತ್ಸಾ ಘಟಕ ಹಾಗೂ ಸೆಲ್ಕೋ ಫೌಂಡೇಶನ್, ಬೆಂಗಳೂರು
ವತಿಯಿಂದ ಕೊಡಮಾಡಿರುವ ರೂ.6.50 ಲಕ್ಷ ಮೌಲ್ಯದ ಡಿ-ಡೈಮರ್
ಟೆಸ್ಟಿಂಗ್ ಉಪಕರಣವನ್ನು ವೀಕ್ಷಿಸಿದರು. ಹಾಗೂ ರಕ್ತದಾನ
ಮಾಡುತ್ತಿದ್ದವರಿಗೆ ಪ್ರಮಾಣಪತ್ರ ವಿತರಿಸಿದರು.
ಡಯಾಲಿಸಿಸ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗಳ
ಸಂಬಂಧಿಗಳು ಸಂಸದರ ಬಳಿ ತಮ್ಮ ಅಳಲು ತೋಡಿಕೊಂಡು,
ಡಯಾಲಿಸಿಸ್‍ಗಾಗಿ ದಾಖಲಾಗುವ ರೋಗಿಗಳಿಗೆ ಅಗತ್ಯವಿರುವ
ಔಷಧಿಗಳನ್ನು ಹೊರಗಡೆಯಿಂದ ಖರೀದಿಸಿ ತರುವಂತೆ ವೈದ್ಯರು
ಚೀಟಿ ನೀಡುತ್ತಿದ್ದಾರೆ, ಇದರಿಂದ ಬಡ ರೋಗಿಗಳಿಗೆ
ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು. ಇದಕ್ಕೆ
ಪ್ರತಿಕ್ರಿಯಿಸಿದ ಸಂಸದರು, ಜಿಲ್ಲಾ ಆಸ್ಪತ್ರೆ ಅಧೀಕ್ಷಕರು ಈ ಬಗ್ಗೆ
ಪರಿಶೀಲಿಸಬೇಕು, ಈ ರೀತಿಯ ಆರೋಪ ಪದೇ ಪದೇ ಕೇಳಿಬರುತ್ತಿದೆ.
ಮುಂದೆ ಈ ರೀತಿಯ ದೂರುಗಳು ಬಂದಲ್ಲಿ, ಸಂಬಂಧಪಟ್ಟ
ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಔಷಧಿ ಖರೀದಿಗೆ ಸಂಬಂಧಿಸಿದಂತೆ ಅಗತ್ಯ
ಅನುದಾನವನ್ನು ಒದಗಿಸಲಾಗುತ್ತಿದ್ದರೂ, ಜಿಲ್ಲಾ ಆಸ್ಪತ್ರೆಯಲ್ಲಿ ಈ
ರೀತಿಯ ದೂರು ಕೇಳಿಬರುತ್ತಿರುವುದು ಸರಿಯಲ್ಲ. ಇಂತಹ
ದೂರು ಮತ್ತೆ ಕೇಳಿಬಂದಲ್ಲಿ, ಜಿಲ್ಲಾ ಆಸ್ಪತ್ರೆ ಅಧೀಕ್ಷಕರ ವಿರುದ್ಧ
ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಹಾಪೌರ ಎಸ್.ಟಿ.ವೀರೇಶ್,
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯತ್ ಮುಖ್ಯ
ಕಾರ್ಯನಿರ್ವಹಣಾಧಿಕಾರಿ ಡಾ.ವಿಜಯ ಮಹಾಂತೇಶ, ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಜಿಲ್ಲಾ ಸರ್ಜನ್ ಡಾ.ಜಯಪ್ರಕಾಶ್, ಡಿಹೆಚ್‍ಓ
ಡಾ.ನಾಗರಾಜ್, ಹಿರಿಯ ಶುಶ್ರೂಷಕಿ ಡಾ.ಆಶಾ ಕಾಂಬ್ಳೆ, ಮಕ್ಕಳ ತಜ್ಞ
ಡಾ.ಸುರೇಶ್ ಸೇರಿದಂತೆ ಮತ್ತಿತರರು ಇದ್ದರು.